ಮಾಹೆಯಿಂದ ದೇಶ ವಿಭಜನೆಯ ಕರಾಳತೆಯ ಸ್ಮೃತಿ ದಿನಾಚರಣೆ

| Published : Aug 19 2024, 12:48 AM IST

ಮಾಹೆಯಿಂದ ದೇಶ ವಿಭಜನೆಯ ಕರಾಳತೆಯ ಸ್ಮೃತಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವಿಭಜನೆಯ ಕರಾಳತೆಯನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿದ್ದು, ಇದು ಅಂದಿನ ಚಾರಿತ್ರಿಕ ಘಟನೆಯಲ್ಲಿ ಜನರು ಸಂಕಷ್ಟವನ್ನು ಅನುಭವಿಸಿದ ದಿನಗಳನ್ನು ನೆನಪುಮಾಡಿಕೊಟ್ಟಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಇದರ ವಿದ್ಯಾರ್ಥಿ ವ್ಯವಹಾರ ವಿಭಾಗವು ದೇಶವಿಭಜನೆಯ ಕರಾಳ ದಿನವನ್ನು ಆಚರಿಸಿತು.

ಮಾಹೆಯ ಸಹಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ದೇಶ ವಿಭಜನೆಯ ಸಂದರ್ಭದಲ್ಲಾದ ದುರಂತ ಘಟನೆಗಳನ್ನು ನೆನಪಿಸಿಕೊಳ್ಳಬೇಕಾದ ಔಚಿತ್ಯದ ಕುರಿತು ಮಾತನಾಡಿದರು.

ಉಪಕುಲಪತಿ ಲೆ. ಜ. (ಡಾ.) ಎಂ.ಡಿ. ವೆಂಕಟೇಶ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೇಶವಿಭಜನೆಯ ಘಟನೆಯು ಭಾರತದ ಚರಿತ್ರೆಯನ್ನು ಹೇಗೆ ಪ್ರಭಾವಿಸಿತು ಎಂಬುದರ ಬಗ್ಗೆ ಮಾತನಾಡಿದರು.

ಕ್ಯಾಂಪಸ್ ಸುರಕ್ಷಾ ವಿಭಾಗದ ಮುಖ್ಯಸ್ಥ ಕರ್ನಲ್‌ ವಿಜಯ ಭಾಸ್ಕರ ರೆಡ್ಡಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ದೇಶ ವಿಭಜನೆಯಂಥ ಕರಾಳ ಘಟನೆಗಳು ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯ ಕುರಿತು ಮಾತನಾಡಿದರು.

ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ, ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಯಾ ಸೆಗಲ್‌ ಕಾರ್ಯಕ್ರಮ ನಿರೂಪಿಸಿದರು. ಎಂಐಟಿಯ ಕಲಾಕ್ರಿಯ ಕ್ಲಬ್‌ ಮತ್ತು ಮಾಹೆಯ ವಿದ್ಯಾರ್ಥಿ ವೃಂದವವರಿಂದ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ಡಾ. ಅರವಿಂದ ಕುಮಾರ್‌ ಪಾಂಡೆ ವಂದಿಸಿದರು.

ಈ ಸಂದರ್ಭದಲ್ಲಿ ದೇಶವಿಭಜನೆಯ ಕರಾಳತೆಯನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿದ್ದು, ಇದು ಅಂದಿನ ಚಾರಿತ್ರಿಕ ಘಟನೆಯಲ್ಲಿ ಜನರು ಸಂಕಷ್ಟವನ್ನು ಅನುಭವಿಸಿದ ದಿನಗಳನ್ನು ನೆನಪುಮಾಡಿಕೊಟ್ಟಿತು. ಮಾಹೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಿಬ್ಬಂದಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.