ಸಾರಾಂಶ
ಪಶ್ಚಿಮ ವಾಹಿನಿಯವರೆಗೂ ಪಾದಯಾತ್ರೆ ಮೂಲಕ ರಥದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಟಿಪ್ಪು ಸುಲ್ತಾನನಿಂದ ಮೋಸ ಹೋದ ವೀರ ಮದಕರಿ ನಾಯಕನ ಸ್ಮಾರಕವನ್ನು ಮೃತಪಟ್ಟ ಜಾಗ ಪಶ್ಚಿಮವಾಹಿನಿಯಲ್ಲೇ ನಿರ್ಮಿಸಬೇಕು. ಇದರ ಜೊತೆ ರಾಜಮದಕರಿ ನಾಯಕರ ರಾಷ್ಟ್ರೀಯ ಮಟ್ಟದ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವಂತೆ ಘೋಷಣೆಗಳ ಕೂಗಿ ಒತ್ತಾಯಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಪಶ್ಚಿಮ ವಾಹಿನಿಯಲ್ಲಿ ವೀರ ಮದಕರಿ ನಾಯಕನ ಪುಣ್ಯ ಸ್ಮರಣೆ ನಡೆಯಿತು.ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿ ತುಮಕೂರು, ಬಜರಂಗ ಸೇನೆ, ಜೀವಧಾರೆ ಟ್ರಸ್ಟ್ ಹಾಗೂ ಮದಕರಿ ನಾಯಕರ ಬಳಗ ಚಿತ್ರದುರ್ಗ ಹಾಗೂ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ನಡೆದ ಮದಕರಿ ನಾಯಕನ ಪುಣ್ಯ ಸ್ಮರಣೆ ಅಂಗವಾಗಿ ಪಟ್ಟಣದ ಶ್ರೀರಂಗನಾಥ ದೇವಲಯದ ಮುಂಭಾಗ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಮದಕರಿ ನಾಯಕನ ಭಾವಚಿತ್ರವಿದ್ದ ಮೆರವಣಿಗೆ ರಥಕ್ಕೆ ಅಭಿನವ ಆಲಶ್ರೀ ಸ್ವಾಮಿಗಳು ಚಾಲನೆ ನೀಡಿದರು.
ಪಶ್ಚಿಮ ವಾಹಿನಿಯವರೆಗೂ ಪಾದಯಾತ್ರೆ ಮೂಲಕ ರಥದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಟಿಪ್ಪು ಸುಲ್ತಾನನಿಂದ ಮೋಸ ಹೋದ ವೀರ ಮದಕರಿ ನಾಯಕನ ಸ್ಮಾರಕವನ್ನು ಮೃತಪಟ್ಟ ಜಾಗ ಪಶ್ಚಿಮವಾಹಿನಿಯಲ್ಲೇ ನಿರ್ಮಿಸಬೇಕು. ಇದರ ಜೊತೆ ರಾಜಮದಕರಿ ನಾಯಕರ ರಾಷ್ಟ್ರೀಯ ಮಟ್ಟದ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವಂತೆ ಘೋಷಣೆಗಳ ಕೂಗಿ ಒತ್ತಾಯಿದರು.ನಂತರ ಕಾವೇರಿ ನದಿ ಬಳಿ ಮದಕರಿನಾಕನ ಭಾವಚಿತ್ರ ವಿರಿಸಿ, ಪೂಜೆ ನೇರವೇರಿಸಿದರು. ಈ ವೇಳೆ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ಹಿಂದು ಜಾಗರಣ ವೇದಿಕೆ ಸಂಚಾಲಕ ಚಂದನ್, ಮದಕರಿನಾಯಕ ಸಮಾಜದ ಮುಖಂಡ ರಂಗನಾಥಸ್ವಾಮಿ ನಾಯಕ, ಬಜರಂಗ ಸೇನೆ ರಾಜ್ಯ ಅಧ್ಯಕ್ಷ ಮಂಜುನಾಥ್, ಜೀವಧಾರೆ ಟ್ರಸ್ಟ್‌ನ ನಟರಾಜು, ರಾಷ್ಟ್ರ ಸಮಿತಿ ಮಂಜು ಭಾರ್ಗವ, ಪುರಸಭೆ ಸದಸ್ಯರಾದ ಶ್ರೀನಿವಾಸ್, ಕೃಷ್ಣಪ್ಪ ಸೇರಿದಂತೆ ಮದಕರಿ ನಾಯಕನ ಅಭಿಮಾನಿ ಬಳಗದ ನೂರಾರು ಮಂದಿ ಭಾಗವಹಿಸಿದರು.