ಸಾರಾಂಶ
ಚಾಮರಾಜನಗರತ್ರಿವಿಧ ದಾಸೋಹಿ, ದೇಶ ಕಂಡ ಆಧುನಿಕ ಸಂತ, ಸಿದ್ಧಗಂಗೆಯ ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿಯವರ ೫ನೇ ಪುಣ್ಯ ಸ್ಮರಣೆಯನ್ನು ದಾಸೋಹ ದಿನವನ್ನಾಗಿ ಜಿಲ್ಲಾ ಕೇಂದ್ರದ ವಿವಿಧೆಡೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿ, ಆನ್ನದಾಸೋಹ ಮಾಡಲಾಯಿತು. ನಗರದ ಜಿಲ್ಲಾಡಳಿತ ಭವನದ ಬಳಿ ಇರುವ, ಅಧ್ಯಕ್ಷ ಹೋಟೆಲ್ ಮುಂಭಾಗ ಸೇರಿದಂತೆ ವಿವಿಧೆಡೆ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನದಾಸೋಹ ಮಾಡಲಾಯಿತು. ಗೌಡಹಳ್ಳಿ ಮಠದ ಮರಿ ತೋಂಟದಾರ್ಯ ಸ್ವಾಮೀಜಿ ಮಾತನಾಡಿ ಈ ನಾಡು ಕಂಡ ಪುಣ್ಯ ಪುರುಷರಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಒಬ್ಬರು, ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ಆಶ್ರಯ ನೀಡಿ ಅವರ ಬದುಕನ್ನು ಬೆಳಗಿದ ಪುಣ್ಯಾತ್ಮರು ಎಂದರು.
ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ, ಆಶ್ರಯ ನೀಡಿ ಬದುಕನ್ನ ಬೆಳಗಿದ ಮಹಾತ್ಮರು ನಡೆದಾಡುವ ದೇವರು
ಕನ್ನಡಪ್ರಭ ವಾರ್ತೆ ಚಾಮರಾಜನಗರತ್ರಿವಿಧ ದಾಸೋಹಿ, ದೇಶ ಕಂಡ ಆಧುನಿಕ ಸಂತ, ಸಿದ್ಧಗಂಗೆಯ ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿಯವರ ೫ನೇ ಪುಣ್ಯ ಸ್ಮರಣೆಯನ್ನು ದಾಸೋಹ ದಿನವನ್ನಾಗಿ ಜಿಲ್ಲಾ ಕೇಂದ್ರದ ವಿವಿಧೆಡೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿ, ಆನ್ನದಾಸೋಹ ಮಾಡಲಾಯಿತು. ನಗರದ ಜಿಲ್ಲಾಡಳಿತ ಭವನದ ಬಳಿ ಇರುವ, ಅಧ್ಯಕ್ಷ ಹೋಟೆಲ್ ಮುಂಭಾಗ ಸೇರಿದಂತೆ ವಿವಿಧೆಡೆ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನದಾಸೋಹ ಮಾಡಲಾಯಿತು. ಗೌಡಹಳ್ಳಿ ಮಠದ ಮರಿ ತೋಂಟದಾರ್ಯ ಸ್ವಾಮೀಜಿ ಮಾತನಾಡಿ ಈ ನಾಡು ಕಂಡ ಪುಣ್ಯ ಪುರುಷರಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಒಬ್ಬರು, ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ಆಶ್ರಯ ನೀಡಿ ಅವರ ಬದುಕನ್ನು ಬೆಳಗಿದ ಪುಣ್ಯಾತ್ಮರು ಎಂದರು.೧೨ನೇ ಶತಮಾನದ ಬಸವಾದಿ ಶರಣರು ಕಂಡಂತಹ ದಾಸೋಹ, ಜ್ಞಾನದ ಚಿಂತನೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ, ಬಸವಣ್ಣನವರ ಅನುಯಾಯಿಯಾಗಿ ತಮ್ಮ ಜೀವನದುದ್ದಕ್ಕೂ ನುಡಿದಂತೆ ನಡೆದವರು, ಮಠ ಮಾನ್ಯಗಳು ನೊಂದವರಿಗೆ ಯಾವ ರೀತಿ ನೆರವಾಗಬೇಕು ಎಂಬುದನ್ನು ತೋರಿಸಿ, ಕಾಯಕ ದಾಸೋಹಕ್ಕೆ ಮಹತ್ವ ನೀಡಿದ ಶ್ರೀಗಳು ಹಸಿದು ಬಂದ ಜನರಿಗೆ ಅನ್ನ ನೀಡಿದ ಕಾರುಣ್ಯ ಪುರುಷರು ಎಂದರು. ಇಂದು ರಾಜ್ಯಾದ್ಯಂತ ದಾಸೋಹ ದಿನವನ್ನಾಗಿ ಆಚರಿಸಲಾಗುತ್ತದೆ, ಅಧ್ಯಕ್ಷ ಹೋಟೆಲ್‌ನ ಕುಮಾರ್ ಇಂದು ಸಂಜೆಯವರೆಗೆ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದು ದಾಸೋಹದ ಚಿಂತನೆ ಪವಿತ್ರವಾದ ಕಾರ್ಯ ಎಂದರು.ಈ ವೇಳೆ ನಾಗೇಂದ್ರ, ಮುಖಂಡರಾದ ಆಲೂರು ಬಾಬು, ಶ್ರೀಕಾಂತ್ , ನಿಜಗುಣ ರಾಜು, ಪ್ರದೀಪ್ ಆಲೂರು, ಡಾ. ಪರಮೇಶ್ವರಪ್ಪ, ಕಲಾವಿದರಾದ ಎನ್. ಆರ್. ಪುರುಷೋತ್ತಮ್, ಶಿಕ್ಷಕರಾದ ಮಹಾದೇವಸ್ವಾಮಿ. ಹಿರಿ ಬೇಗೂರು ಗುರುಸ್ವಾಮಿ ಬಸವರಾಜು. ಸುರೇಶನಾಯಕ, ಕುಮಾರ್ ಇದ್ದರು,