ಸಂಡೂರು: ಈಗಾಗಲೇ ರೋಟರಿ ಕ್ಲಬ್‌ನಿಂದ ಪಟ್ಟಣದಲ್ಲಿ ಶಾಲೆ, ಲ್ಯಾಬೊರೇಟರಿ ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ ೩೧೬೦ರ ನಿಕಟಪೂರ್ವ ಅಧ್ಯಕ್ಷ ಗೋಪಿನಾಥ್ ಆರ್. ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಭಾನುವಾರ ಜರುಗಿದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್ ಗೌಡ ಮಾತನಾಡಿದರು. ರೋಟರಿ ಸಂಸ್ಥೆಯ ವಿಜಯನಗರ ಝೋನ್‌ನ ಅಸಿಸ್ಟಂಟ್ ಗವರ್ನರ್ ಕಮಲಾ ಗುಮಾಸ್ತೆ ಸಂಸ್ಥೆಯ ಯೋಜನೆಗಳ ಕುರಿತು ವಿವರಿಸಿದರು.ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ರಾಜೇಶ್ ಕುಮಾರ್ ಜೈನ್, ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಚ್.ಎಂ. ಶಿವಮೂರ್ತಿ ಮಾತನಾಡಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶಕುಮಾರ್ ಜೈನ್ ಸ್ವಾಗತಿಸಿದರು. ಜೆ.ಎಂ. ಬಸವರಾಜ್ ನಿರೂಪಿಸಿದರು. ರುದ್ರೇಶ್ ಶೆಟ್ಟಿ ವಂದಿಸಿದರು.ನೂತನ ಪದಾಧಿಕಾರಿಗಳು:
ಎಚ್.ಎಂ. ಶಿವಮೂರ್ತಿ (ಅಧ್ಯಕ್ಷ), ಬಿ. ಸೋಮನಗೌಡ (ಕಾರ್ಯದರ್ಶಿ), ಎಂ. ಆಶಾಲತಾ ಸೋಮಪ್ಪ (ಉಪಾಧ್ಯಕ್ಷೆ), ರುದ್ರೇಶ್ ಶೆಟ್ಟಿ (ಜಂಟಿ ಕಾರ್ಯದರ್ಶಿ), ಕೆ. ನಾಗರಾಜ (ಖಜಾಂಚಿ), ನರೇಂದ್ರ ಪಣಿಯಪ್ಲ (ಸಾರ್ಜಂಟ್ ಅಟ್ ಆರ್ಮ್ಸ್), ಬಿ.ಆರ್. ಮಸೂತಿ, ಜೆ.ಎಂ. ಬಸವರಾಜ, ಎಂ.ವಿ. ಹಿರೇಮಠ, ಟಿ.ಜಿ ಸುರೇಶ್‌ಗೌಡ, ರಾಜೇಶ್ ಕುಮಾರ್ ಜೈನ್, ರೂಪಾ ಲಾಡ್, ಸಿ. ಗೌರಿನಾಥ್, ಕೆ. ಶಿವಪ್ಪ, ಕೆ.ಎಂ. ಕೊಟ್ರಯ್ಯ, ಎ. ಕೊಟ್ರೇಶ್, ಹೆಚ್.ಎಂ. ಕೊಟ್ರಮ್ಮ, ಬಿ. ಶಿವಕುಮಾರ್, ಜೆ.ಎಂ. ಅನ್ನದಾನಸ್ವಾಮಿ, ಎಂ. ಮಾರುತಿರಾವ್, ಪ್ರಕಾಶ್ ಕುಮಾರ್ ಜೈನ್, ಹೆಚ್. ಈರಣ್ಣ ಹಾಗೂ ಸಿ.ಕೆ. ವಿಶ್ವನಾಥ್ (ವಿವಿದ ಕಮಿಟಿಗಳ ಅಧ್ಯಕ್ಷರು, ನಿರ್ದೇಶಕರು).
ಮುಖಂಡರಾದ ಡಿ. ಕೃಷ್ಣಪ್ಪ, ಜೆ.ಎಂ. ಶಿವಪ್ರಸಾದ್, ಯರಿಸ್ವಾಮಿ, ಎಚ್.ಎಂ. ಮಂಜುನಾಥ್, ಸುರೇಂದ್ರನಾಥ್, ಶರತ್‌ಕುಮಾರ್, ಜಿ.ಎಸ್. ಸೋಮಪ್ಪ ಮುಂತಾದವರು ಉಪಸ್ಥಿತರಿದ್ದರು.