ಶಿಕ್ಷಣ ಸಂಸ್ಥೆಗಳ ವ್ಯಾಪಾರೀಕರಣ ಸಲ್ಲದು: ಚಲವಾದಿ

| Published : May 28 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗಬಾರದು, ಮಕ್ಕಳ ಏಳ್ಗೀಕರಣದ ಸಂಸ್ಥೆಗಳಾಗಬೇಕು. ಅಂದಾಗ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯವೆಂದು ನಿವೃತ್ತ ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಬಿ.ಚಲವಾದಿ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗಬಾರದು, ಮಕ್ಕಳ ಏಳ್ಗೀಕರಣದ ಸಂಸ್ಥೆಗಳಾಗಬೇಕು. ಅಂದಾಗ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯವೆಂದು ನಿವೃತ್ತ ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಬಿ.ಚಲವಾದಿ ಅಭಿಪ್ರಾಯ ಪಟ್ಟರು.

ವಿದ್ಯಾನಗರದ ವಿದ್ಯಾಸ್ಪೂರ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ಸೈನಿಕ ಮತ್ತು ಆದರ್ಶ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ, ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಆಚಾರ ವಿಚಾರ ಒಳ್ಳೆಯ ಸನ್ನಡತೆಯನ್ನು ಸಂಸ್ಥೆ ನೀಡುತ್ತಾ ಬಂದಿದೆ. ಶಿಕ್ಷಕರಾದವರು ಮಕ್ಕಳ ವರ್ಗದ ಕೋಣೆಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಹೋದಾಗ ವಿದ್ಯಾರ್ಥಿಗಳು ಯಶಸ್ಸು ಮತ್ತು ಉನ್ನತ ಸ್ಥಾನ ಪಡೆಯಲು ಸಾಧ್ಯವೆಂದರು.

ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ 3 ವರ್ಷಗಳಿಂದ ಜಿಲ್ಲೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕ್‌ ನೀಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ ಮತ್ತು ತಾಲೂಕಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದಿದೆ. ಆದರ್ಶ ಆರ್‌ಎಂಎಸ್‌ಎ ಶಾಲೆಗೆ ಅತಿಹೆಚ್ಚು ವಿದ್ಯಾರ್ಥಿಗಳನ್ನು ನೀಡಿದ ಶ್ರೇಯಸ್ಸು ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂಬ ಹೆಮ್ಮೆಯಿದೆ. ಕಳೆದ ವರ್ಷ 50 ವಿದ್ಯಾರ್ಥಿಗಳು ಆರ್‌ಎಂಎಸ್‌ಗೆ ಆಯ್ಕೆಯಾಗಿದ್ದರೆ, ಈ ಬಾರಿ ಮೊದಲ ಸುತ್ತಿನಲ್ಲಿ 38 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ನೀಡಿದರು.

ಸಂಸ್ಥೆಯ ಸಂಸ್ಥಾಪಕ ರಾಮನಗೌಡ ಸಿದರೆಡ್ಡಿ ಮತ್ತು ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ರ್‍ಯಾಂಕ್‌ ಪಡೆದು ಜಿಲ್ಲೆಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪಾರಿತೋಷಕ ನೀಡಲಾಯಿತುಕಾರ್ಯಕ್ರಮದಲ್ಲಿ ಉದ್ಯಮಿ ಸಂಜಯ ಓಸ್ವಾಲ್, ರಾಜೇಶ್ವರಿ ನಾಡಗೌಡ, ಸಂಗನಗೌಡ ಪಾಟೀಲ್, ಮಂಜುಳಾ ಬಿರಾದಾರ, ಆರ್ಶೀಯಾ ಮೋಮಿನ್, ವಿರೇಶ ದುದ್ದಗಿ, ನ್ಯಾಯವಾದಿ ಎನ್.ಬಿ‌.ಮುದ್ನಾಳ, ಶಿಕ್ಷಕರಾದ ರವಿ ಪತ್ತಾರ‌ ಸೇರಿದಂತೆ ಪಾಲಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮುಖ್ಯಗುರುಮಾತೆ ರೇಖಾ ವರದಿ ವಾಚಿಸಿದರು. ಶಿಕ್ಷಕಿ ವಾಣಿ ಬಿರಾದಾರ ಸ್ವಾಗತಿಸಿದರು , ಸಾವಿತ್ರಿ ಬಿರಾದಾರ ನಿರೂಪಿಸಿ, ವಂದಿಸಿದರು.