. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯನಿರ್ವಹಿಸುತ್ತಿದೆ. ಜಮೀನು ಸರ್ವೇ, ಆಸ್ತಿ ಪೋಡಿ ಮಾಡುವುದು ಹೀಗೆ ಅನೇಕ ಸರ್ಕಾರಿ ಸೇವೆಗಳು ಜನಸಾಮಾನ್ಯರಿಗೆ ಸ್ಥಳೀಯವಾಗಿ ಸಿಗಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರು ವರೆಗೆ ಬರುವುದನ್ನು ತಪ್ಪಿಸಬೇಕು. ಅಹವಾಲುಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ ಆಯೋಗಕ್ಕೆ ವರದಿ ಮಾಡಬೇಕು ಎಂದು ರಾಜ್ಯ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಹೇಳಿದರು.
ಹಾವೇರಿ: ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯನಿರ್ವಹಿಸುತ್ತಿದೆ. ಜಮೀನು ಸರ್ವೇ, ಆಸ್ತಿ ಪೋಡಿ ಮಾಡುವುದು ಹೀಗೆ ಅನೇಕ ಸರ್ಕಾರಿ ಸೇವೆಗಳು ಜನಸಾಮಾನ್ಯರಿಗೆ ಸ್ಥಳೀಯವಾಗಿ ಸಿಗಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರು ವರೆಗೆ ಬರುವುದನ್ನು ತಪ್ಪಿಸಬೇಕು. ಅಹವಾಲುಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ ಆಯೋಗಕ್ಕೆ ವರದಿ ಮಾಡಬೇಕು ಎಂದು ರಾಜ್ಯ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಆಯೋಗದಲ್ಲಿ ದಾಖಲಾಗಿದ್ದ 3,628 ಪ್ರಕರಣಗಳ ಪೈಕಿ ನಾನು ಆಯೋಗದ ಅಧ್ಯಕ್ಷರಾದ ಮೇಲೆ 12 ಕೋರ್ಟ್ ಕಲಾಪ ನಡೆಸಿ, 212 ಪ್ರಕರಣ ಇತ್ಯರ್ಥ ಪಡಿಸಿದ್ದೇನೆ. ಮುಂದೆಯೂ ಈ ಕಾರ್ಯ ಪ್ರತಿ ಗುರುವಾರ, ಶುಕ್ರವಾರ ನಿರಂತರವಾಗಿ ಮುಂದುವರೆಯುತ್ತದೆ. ಈ ಜಿಲ್ಲೆಯಿಂದ ಸರಿಯಾಗಿ ಕಾಮಗಾರಿ ನಡೆಯದಿರುವ ಕುರಿತು 25ಅರ್ಜಿಗಳು ಬಂದಿದ್ದು, ಅವುಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಎಸ್ಸಿ, ಎಸ್ಟಿಯವರಿಗೆ ಸಿಗಬೇಕಾದ ಸೌಲತ್ತುಗಳು, ವಿವಿಧ ಇಲಾಖೆಗಳ ಕಾಮಗಾರಿ, ಜಾತಿನಿಂದನೆ, ಜಮೀನು ವ್ಯಾಜ್ಯ, ಸರ್ವೇ ಕಾರ್ಯ ಹೀಗೆ ಅನೇಕ ಸಮಸ್ಯೆಗಳ ದೂರು ಬಂದಿವೆ. ಇವುಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಿ, ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದೇನೆ ಎಂದರು.ಸಣ್ಣಪುಟ್ಟ ಗ್ರಾಮಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತದೆ. ಆ ಬಗ್ಗೆ ಎಫ್‌ಐಆರ್ ದಾಖಲಾಗುತ್ತವೆ. ಇವುಗಳನ್ನು 60 ದಿನಗಳವರೆಗೆ ಬಿಟ್ಟರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇರುತ್ತದೆ. ಆದಷ್ಟು ಶೀಘ್ರದಲ್ಲೇ ಪ್ರಕರಣ ಇತ್ಯರ್ಥಗೊಳಿಸಬೇಕೆಂದು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಈ ಬಾರಿ 26 ಪೋಕ್ಸೋ ಪ್ರಕರಣ ದಾಖಲಾಗಿವೆ. ಕಳೆದ ಬಾರಿಗಿಂತ ಈ ಸಲ ಕಡಿಮೆಯಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಎಸ್ಪಿ ಭರವಸೆ ನೀಡಿದ್ದಾರೆ. ಅದರಂತೆ ಕಾರ್ಯೋನ್ಮುಖರಾಗಬೇಕಿದೆ. ಪಿಟಿಸಿಎಲ್ ಕಾಯ್ದೆಯಡಿ ದಾಖಲಾಗುವ ಕೇಸ್‌ಗಳು ಸುಪ್ರೀಂ ಆದೇಶದ ಪ್ರಕಾರವೇ ಜಾರಿಯಾಗಬೇಕು ಎಂದರು.ದೇವದಾಸಿಯರಿಗೆ ಪಿಂಚಣಿ: ಮಾಜಿ ದೇವದಾಸಿಯರಿಗೆ ಪಿಂಚಣಿ ಬರುತ್ತಿಲ್ಲ ಎಂಬುದರ ಬಗ್ಗೆ ದೂರು ಬಂದಿದ್ದು, ಈ ಕೂಡಲೇ ಸಿಇಒ, ಎಡಿಸಿ ಅವರು ಒಂದು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಅಷ್ಟರೊಳಗೆ ಅರ್ಹ ದೇವದಾಸಿಯರಿಗೆ ಪಿಂಚಣಿ ಸಿಗುವಂತೆ ಮಾಡಬೇಕೆಂದು ತಿಳಿಸಿದ್ದೇನೆ. ಇನ್ನೂ ಸಮುದಾಯದವರಿಗೆ ಕಾಮಗಾರಿ ಕೊಡಲು ಅನ್ಯಾಯ ಮಾಡಲಾಗುತ್ತೆ ಎಂಬ ವಿಷಯ ಬಂದಿದ್ದು, ಜಿಲ್ಲಾಡಳಿತ, ಜಿಪಂ ಸಿಇಒ ಅವರಿಗೆ ಪರಿಪೂರ್ಣ ಅಧಿಕಾರ ಇದೆ. ಯೋಚನೆ ಮಾಡಿ ಆಯೋಗದ ನಿರ್ದೇಶನದಂತೆ ಕಾಮಗಾರಿಗಳನ್ನು ಕೊಡಬೇಕೆಂದು ತಿಳಿಸಿರುವುದಾಗಿ ಹೇಳಿದರು.ಆಯೋಗದ ಸದಸ್ಯರಾದ ಸುನೀಲ ಎಂ., ಎಂ.ಕುಂಬಯ್ಯ, ಎಸ್‌ಪಿ ಯಶೋದಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ನಾಗರಾಜ ಎಲ್, ಜಿಪಂ ಉಪ ಕಾರ್ಯದರ್ಶಿ ಪುನೀತ ಇದ್ದರು.