ಕನ್ನಡ ನುಡಿ-ನಾಡು ಅಭಿವೃದ್ಧಿಗೆ ಬದ್ಧರಾಗಿ

| Published : Feb 09 2024, 01:46 AM IST

ಸಾರಾಂಶ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆಯ ಭವ್ಯ ಮೆರವಣಿಗೆ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ನೃತ್ಯ, ವಾದ್ಯಮೇಳಗಳ ಮಧ್ಯೆ ಸಂಭ್ರಮ, ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆಯ ಭವ್ಯ ಮೆರವಣಿಗೆ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ನೃತ್ಯ, ವಾದ್ಯಮೇಳಗಳ ಮಧ್ಯೆ ಸಂಭ್ರಮ, ಸಡಗರದಿಂದ ಜರುಗಿತು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಜ್ಯೋತಿ ರಥ ಭುವನೇಶ್ವರಿದೇವಿ ಕನ್ನಡ ರಥದ ಮೆರವಣಿಗೆಯೂ ತೆಲಗಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ಭವನ ಮಾರ್ಗದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿತು. ನಂತರ ರಥಯಾತ್ರೆಯು ತಾಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿ‌ ಗ್ರಾಮಕ್ಕೆ ತೆರಳಿತು.

ಹೆಜ್ಜೆ ಹಾಕಿದ ತಹಸೀಲ್ದಾರ್‌, ಬಿಇಒ:

ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಲಂಬಾಣಿ ನೃತ್ಯ, ಲೇಜಿಮ್, ಕೋಲಾಟ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರ ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು, ಕಾಖಂಡಕಿ ಸಂಬಾಳ ಮತ್ತು ಕರಡಿ ಮಜಲು ಗಮನ ಸೆಳೆದರೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಎಂಬ ಹಾಡಿಗೆ ತಹಸೀಲ್ದಾರ್‌, ಬಿಇಒ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಅಶೋಕ ಹಾರಿವಾಳ, ಮಾಂತೇಶ ಚಕ್ರವರ್ತಿ ಇತರರು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಚೆನ್ನಮ್ಮ ವೃತ್ತದಲ್ಲಿ ಸುದ್ದಿಗಾರರೊಂದಿಗೆ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿ, 1ನೇ ನವೆಂಬರ್‌ 2023ಕ್ಕೆ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಡಿ ಇಡೀ ವರ್ಷ ಕರ್ನಾಟಕ ಇತಿಹಾಸ ಕಲೆ, ಸಾಹಿತ್ಯ ಸಂಸ್ಕ್ರತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಗೆ ಕನ್ನಡದ ಅರಿವು ಬಿಂಬಿಸುವ ಮೂಲಕ ವರ್ಷವಿಡಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ. ಎಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳುವ ಮೂಲಕ ಕನ್ನಡ ನುಡಿ-ನಾಡು ಅಭಿವೃದ್ದಿಗೆ ಕಂಕಬದ್ದರಾಗಬೇಕೆಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಸಂಸ್ಕೃತಿ, ಸಾಹಿತ್ಯ ಈ ನಾಡನ್ನು ಶ್ರೀಮಂತಗೊಳಿಸಿದೆ. ನಾಡಿನ ಏಳು ಕೋಟಿ ಜನರು ಕನ್ನಡ ಬರೆಯುವ ಹಾಗೂ ಮಾತನಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಹೇಳಿದರು.

ಮೆರವಣಿಗೆಯಲ್ಲಿ ಬಿಇಓ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ. ರಾಜೇಸಾಬ ಶಿವನಗುತ್ತಿ, ತಾಲೂಕು ಕಸಾಪ ಪದಾಧಿಕಾರಿಗಳಾದ ಬಸವರಾಜ ಸೋಮಪೂರ, ಎಸ್.ಐ. ಡೋಣೂರ, ಶಿವಪ್ಪ ಮಡಿಕೇಶ್ವರ, ಬಿ.ಎಫ್.ಮೇಟಿ, ಶಾಂತಾ ಚೌರಿ,ಎಚ್.ಬಿ.ಬಾರಿಕಾಯಿ, ಕೋಟ್ರೇಶ ಹೆಗಡ್ಯಾಳ, ಪ್ರಭಾಕರ ಖೇಡದ, ವಿವೇಕಾನಂದ ಕಲ್ಯಾಣಶೆಟ್ಟಿ, ಮಹಾಂತೇಶ ಸಂಗಮ, ಬಿ.ವಿ.ಚಕ್ರಮನಿ, ಬಸವರಾಜ ಚಿಂಚೋಳಿ, ಮಹಾದೇವಿ ಬಿರಾದಾರ, ರವಿಗೌಡ ಚಿಕ್ಕೊಂಡ, ಉಮೇಶ ಕೌಲಗಿ, ಮಾಂತೇಶ ಚಕ್ರವರ್ತಿ, ರಾಜಶೇಖರ ಹುಲ್ಲೂರ, ಮಾಂತೇಶ ಇಂಗಳೇಶ್ವರ, ರಮಜಾನ ಹೆಬ್ಬಾಳ, ಎಸ್.ಎಲ್.ಓಂಕಾರ,ಗಂಗಾಧರ ಬಡಿಗೇರ, ಪಿ.ಕೆ.ಜಾಧವ,ಡಾ.ಪಿ.ಎಸ್. ಸಂಖ, ಡಾ.ಎಸ್.ಬಿ.ಕರ್ಜಗಿ, ಕಮಲಾ ಪದರಾ, ರಮೇಶ ಪೂಜಾರಿ, ಮಹೇಶ ಬಳಗಾನೂರ. ಪಿ.ಯು ರಾಠೋಡ, ಅಶೋಕ ಹಂಚಲಿ, ಎಂ.ವಿ. ಗಬ್ಬೂರ. ಅನುಜಾ ಗುಬ್ಬಾ, ಮಹಾಂತೇಶ ಸಾಸಾಬಾಳ, ಸುಭಾಶ್ಚಂದ್ರ ಹಡಪದ, ಬಸವರಾಜ ನಂದಿಹಾಳ, ರೇವಣಸಿದ್ದ ಮಣ್ಣೂರ, ಅಪ್ಪು ಧನಶೆಟ್ಟಿ, ಬಿ.ಎಸ್.ಚನ್ನಗೊಂಡ, ಎನ್.ಎನ್. ಅಂಗಡಿ, ಮಂಜು ಹಳ್ಳೂರ, ಅಂಗನವಾಡಿ ಕಾರ್ಯಕರ್ತರು, ವಿವಿಧ ಇಲಾಖೆಯ ಸಿಬ್ಬಂದಿ, ಇತರರು ಭಾಗವಹಿಸಿದ್ದರು.

--

ಕೋಟ್‌

ಮೆರವಣಿಗೆ ಸಾಗುವಾಗ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕಿತ್ತು. ಮೆರವಣಿಗೆಯಲ್ಲಿ ರಥಕ್ಕೂ, ವಿದ್ಯಾರ್ಥಿಗಳ ಮೆರವಣಿಗೆಗೂ ಸಾಕಷ್ಟು ಅಂತರ ಕಂಡುಬಂದಿತ್ತು. ಇಂತಹ ಮೆರವಣಿಗೆಯಲ್ಲಿ ಸಮಸ್ತ ಜನತೆ ಭಾಗವಹಿಸುವಂತಾಗಬೇಕು.

-ವಿವೇಕಾನಂದ ಕಲ್ಯಾಣಶೆಟ್ಟಿ ಸಾಹಿತಿ