ಸಾಮರಸ್ಯ ಸಂಘಟನೆ ಧರ್ಮ ಸಂಸ್ಕೃತಿ ಸಮಾಜವನ್ನು ಕಟ್ಟುವ ಮೂಲಕ ರಾಷ್ಟ್ರ ಸದೃಢಗೊಳಿಸುವ ಕಾಯಕದಲ್ಲಿ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ನುಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಾಮರಸ್ಯ ಸಂಘಟನೆ ಧರ್ಮ ಸಂಸ್ಕೃತಿ ಸಮಾಜವನ್ನು ಕಟ್ಟುವ ಮೂಲಕ ರಾಷ್ಟ್ರ ಸದೃಢಗೊಳಿಸುವ ಕಾಯಕದಲ್ಲಿ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ನುಡಿದರು. ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಅಲ್ಲಿನ ಮಹಾಗಣಪತಿ-ಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಶ್ರೇಷ್ಠವಾದ ಚಿಂತನೆಯೇ ಧರ್ಮ. ರಾಮನ ನಡೆ, ಕೃಷ್ಣನ ನುಡಿ ಅಂದರೆ ರಾಮಾಯಣ ಮಹಾಭಾರತವೇ ಜೀವನಕ್ಕೆ ಪಾಠ ಎಂದೂ ಕೂಡ ಅವರು ನುಡಿದರು. ಮುಂದಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಗಟ್ಟಿಗೊಳಿಸುವುದೇ ಹಿಂದೂ ಸಂಗಮದ ಉದ್ದೇಶವಾಗಿದ್ದು, ಜಾತಿ ಸಂಘಟನೆಗಳ ಹೆಸರಿನಲ್ಲಿರುವ ಹಂಚಿಹೋಗಿರುವ ಹಿಂದೂ ಸಮಾಜವನ್ನು ಮೌಲ್ಯಗಳ ಆಧಾರದಲ್ಲಿ ಒಗ್ಗೂಡಿಸಿ ಸಮಾಜದಲ್ಲಿ ಪರಿವರ್ತನೆ ತರಲಾಗುತ್ತಿದೆ ಎಂದರು.ನಮ್ಮತನವನ್ನು ಬಿಟ್ಟುಕೊಡದಿರಿ:

ಭಾರತೀಯರಿಗೆ ಹಿಂದುತ್ವವೇ ರಾಷ್ಟ್ರೀಯತೆ, ಶ್ರೇಷ್ಠ ವಾದ ಚಿಂತನೆಯೇ ಧರ್ಮ. ರಾಮನ ನಡೆ, ಕೃಷ್ಣನ ನುಡಿಯೇ ಜೀವನಕ್ಕೆ ಪಾಠ. ಅಧರ್ಮದ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಕ್ಷಮೆ ಇರಬಾರದು ಎಂಬುದನ್ನು ರಾಮಾಯಣ, ಮಹಾಭಾರತ ಬೋಧಿಸಿದ್ದು, ಇಂದು ವಿಶ್ವದಲ್ಲಿ ಬೈಬಲ್ ನಂತರ ಅತೀಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿಗಳಲ್ಲಿ ಭಗವದ್ಗೀತೆ ಸೇರಿದೆ. ಅದರಲ್ಲಿರುವ ಜ್ಞಾನದಿಂದಾಗಿಯೇ ಜನಪ್ರಿಯವಾಗಿದೆ ಎಂದರು.ಕಂಬಿಬಾಣೆಯ ಶ್ರೀ ಬ್ರಹ್ಮ ಜ್ಞಾನ ಧ್ಯಾನ ಮಂದಿರದ ಮುಖ್ಯಸ್ಥ ಎಂ.ವಿ.ರಘುನಾಥ್ ಅವರು ಮಾತನಾಡಿ, ಸನಾತನ ಎಂದರೆ ಸಂಸ್ಕೃತದಲ್ಲಿ ಶಾಶ್ವತ, ಪ್ರಾಚೀನ, ಅನಾದಿ ಅಥವಾ ಸದಾ ಅಸ್ತಿತ್ವದಲ್ಲಿರುವ ಎಂಬ ಅರ್ಥಗಳಿವೆ. ಇದು ಕಾಲಾತೀತ ಸತ್ಯಗಳು, ಧರ್ಮ ಮತ್ತು ಬದುಕಿನ ಮಾರ್ಗವನ್ನು ಸೂಚಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ.ಸಾವಿತ್ರಿ ಅವರು, ಮಕ್ಕಳಿಗೆ ಚಿಕ್ಕಂದಿನಲ್ಲೇ ಆಚಾರ ವಿಚಾರಗಳನ್ನು ಬೀಜದಂತೆ ಬಿತ್ತಬೇಕು. ಮಕ್ಕಳಲ್ಲಿ ಏಕಾಗ್ರತೆ ಬೆಳೆಸಬೇಕು, ಟಿವಿ, ಮೊಬೈಲ್''''''''''''''''ಗಳಿಂದ ದೂರವಿರಿಸಿ ತಾಯಿಗೆ ವಿಧೇಯರಾಗಿರುವಂತೆ ನೋಡಿಕೊಂಡರೆ ಅಂತಹ ಮಕ್ಕಳು ಸಮಾಜಕ್ಕೆ ದೇಶಕ್ಕೆ ದೊಡ್ಡ ಕೊಡುಗೆಯಾಗಲಿದ್ದಾರೆ ಎಂದು ನುಡಿದರು. ಏಳನೇ ಹೊಸಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಲಲಿತಾ ಮುಖ್ಯ ಅತಿಥಿಯಾಗಿದ್ದರು.ಮೆಟ್ನಳ್ಳ ಎಸ್.ಎಸ್.ಡಿ.ಪಿ. ಬಳಿಯಿಂದ ಮಹಾಗಣಪತಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಛದ್ಮವೇಷಧಾರಿ ಮಕ್ಕಳು, ಭಾರತಮಾತೆ, ರಾಮ-ಸೀತೆ, ಲಕ್ಣ್ಮಣ, ಹನುಮಂತನ ಕಲಾಕೃತಿಯುಳ್ಳ ಮಂಟಪ, ಚೆಂಡೆವಾದ್ಯ, ಸಾವಿರಾರು ಸಂಖ್ಯೆಯ ಮಾತೆಯರು, ಪುರುಷರು, ಮಕ್ಕಳು ಭಾಗವಹಿಸಿದ್ದರು.ವೇದಿಕೆಯಲ್ಲಿ ಮಕ್ಕಳ ಛದ್ಮವೇಷ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 40ಕ್ಕೂ ಅಧಿಕ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಗೋಪೂಜೆ, ಭಾರತಮಾತೆಗೆ ಪುಷ್ಪಾರ್ಚನೆ, ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಜಿ. ಶಿವನ್ ಸ್ವಾಗತಿಸಿದರು. ತಾಲೂಕು ಸೇವಾ ಪ್ರಮುಖ್ ಮುರಳಿ ವಂದೇಮಾತರಂ ಗೀತೆ ಹಾಡಿದರು.ಶಿಕ್ಷಕಿಯರಾದ ಶುಭಾ ಚಂದ್ರಶೇಖರ್, ಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರೆ, ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಂ.ರಮೇಶ್ ವಂದಿಸಿದರು.ಮಹಾಗಣಪತಿ- ಗೋಪಾಲಕೃಷ್ಣ ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಹಿಂದು ಗೆಳೆಯರ ಬಳಗದ ಅಧ್ಯಕ್ಷ ಶರವಣ, ಎಸ್.ಎನ್.ಡಿ.ಪಿ.ಅಧ್ಯಕ್ಷ ರಿಜೇಶ್ ಮತ್ತಿತರರು ಹಾಜರಿದ್ದರು.