ಮೌಲ್ಯಾಧಾರಿತ ಶಿಕ್ಷಣಕ್ಕೆ ಒಡಂಬಡಿಕೆ

| Published : Nov 06 2025, 01:15 AM IST

ಸಾರಾಂಶ

ಸತ್ಯ ಸಾಯಿ ಬಾಬಾ ಅವರ ಚೈತನ್ಯ ಎಲ್ಲರ ಹೃದಯದಲ್ಲಿದೆ. ಆಧ್ಯಾತ್ಮದ ಜತೆ ಇಲ್ಲಿ ಸಂಸ್ಕಾರವನ್ನೂ ಕಲಿಸಲಾಗುತ್ತಿದೆ. ಶಿಕ್ಷಣವನ್ನು ಸಂಸ್ಥೆಗಳು ಕೊಡಬಹುದು. ಸಂಸ್ಕಾರ ಸಹಿತ ಶಿಕ್ಷಣವನ್ನು ಕೊಡುವುದು ಬಹಳ ಮುಖ್ಯ. ಅಂತಹ ಕಾರ್ಯವನ್ನು ಸತ್ಯ ಸಾಯಿ ಸಂಸ್ಥೆ ಮಾಡುತ್ತಿದೆ. ಇದಕ್ಕೆ ದೈವಿಕ ಆಶೀರ್ವಾದ ಕಾರಣ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವದ 81ನೇ ದಿನದಂದು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡವು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಈ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು. ಮೌಲ್ಯಾಧಾರಿತ ಶಿಕ್ಷಣ, ಸಿಬ್ಬಂದಿ ತರಬೇತಿ, ಮಾನವ ಅಭ್ಯುದಯಕ್ಕೆ ಚಿನ್ನದ ಪದಕ, ಮಾನವ ಅಭ್ಯುದಯ ತರಬೇತಿ ಉಪಕರಣಗಳು, ಸಂಶೋಧನೆ, ಪ್ರಕಾಶನ ಮತ್ತು ವಿನಿಮಯ ಒಡಂಬಡಿಕೆಯ ಉದ್ದೇಶವಾಗಿದೆ.

ಸತ್ಯ ಸಾಯಿ ಜಾಗತಿಕ ಗ್ರಾಮಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿ, ಸತ್ಯ ಸಾಯಿ ಗ್ರಾಮ ಮುಂಬರುವ ದಿನಗಳಲ್ಲಿ ಜಾಗತಿಕ ಹಳ್ಳಿಯಾಗಲಿದೆ. ಮುಂದಿನ 10 ವರ್ಷಗಳಲ್ಲಿ ಭಾರತ ಆಧ್ಯಾತ್ಮಿಕ ಮತ್ತು ಮಾನವಕುಲಕ್ಕೆ ಸೇವೆ ಸಲ್ಲಿಸುವ ಕಲ್ಪನೆಯ ಬಗ್ಗೆ ಕಲಿಯಲು ಇಡೀ ಜಗತ್ತು ಪರಿವರ್ತನೆಗೊಳ್ಳುವ ಸ್ಥಳವಾಗಲಿದೆ ಎಂದು ಹೇಳಿದರು. ಅರಮೇರಿ ಕಳಂಚೇರಿ ಮಠ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸತ್ಯ ಸಾಯಿ ಬಾಬಾ ಅವರ ಚೈತನ್ಯ ಎಲ್ಲರ ಹೃದಯದಲ್ಲಿದೆ. ಆಧ್ಯಾತ್ಮದ ಜತೆ ಇಲ್ಲಿ ಸಂಸ್ಕಾರವನ್ನೂ ಕಲಿಸಲಾಗುತ್ತಿದೆ. ಶಿಕ್ಷಣವನ್ನು ಸಂಸ್ಥೆಗಳು ಕೊಡಬಹುದು. ಸಂಸ್ಕಾರ ಸಹಿತ ಶಿಕ್ಷಣವನ್ನು ಕೊಡುವುದು ಬಹಳ ಮುಖ್ಯ. ಅಂತಹ ಕಾರ್ಯವನ್ನು ಸತ್ಯ ಸಾಯಿ ಸಂಸ್ಥೆ ಮಾಡುತ್ತಿದೆ ಎಂದರು.

ದೈವಿಕ ಆಶೀರ್ವಾದಎಂಎಲ್ ಸಿ ಡಾ.ಕೆ.ಗೋವಿಂದರಾಜು ಮಾತನಾಡಿ, ಸಾಯಿ ಬಾಬಾ ಸಂಸ್ಥೆ ಯಾವುದೇ ಶುಲ್ಕವನ್ನು ಪಡೆಯದೆ ಎಲ್ಲರಿಗೂ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂಬುದೇ ಗೊತ್ತಾಗುತ್ತಿಲ್ಲ. ಇದಕ್ಕೆ ದೈವಿಕ ಆಶೀರ್ವಾದ ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ತಂಡದ ಕಠಿಣ ಪರಿಶ್ರಮದಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ ಎಂದರು.