ಸಾರಾಂಶ
ಸಂಘದ ಬೈಲಾ ಪ್ರಕಾರ, ಹೊಸದಾಗಿ ರಚನೆ ಮಾಡಿರುವ ಪದಾಧಿಕಾರಿಗಳು ಇಡೀ ತಾಲೂಕಿನ ಜನತೆಯ ಕುಂದು ಕೊರತೆಗಳನ್ನು ಆಲಿಸಿ, ಒಗ್ಗಟ್ಟಿನಿಂದ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕೆಂದು ಕರೆ ನೀಡಿದರು.
ಶಿರಾ: ತಾಲೂಕಿನಲ್ಲಿ ಕುರುಬರ ಸಮಾಜವನ್ನು ಸಂಘಟಿಸಿ, ಅಭಿವೃದ್ಧಿಗೊಳಿಸಲು ಬದ್ಧ ಎಂದು ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷ ನಟರಾಜ್ ಬರಗೂರು ಹೇಳಿದರು.
ಅವರು ಶ್ರೀ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ನೂತನ ಸಂಘದ ರಚನಾ ಸಭೆಯ ನಂತರ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದರು, ಶಿರಾ ತಾಲೂಕಿನಲ್ಲಿ ಕುರುಬ ಜನಾಂಗದ ಜನರ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್ ಮಾತನಾಡಿ, ಸಂಘದ ಬೈಲಾ ಪ್ರಕಾರ, ಹೊಸದಾಗಿ ರಚನೆ ಮಾಡಿರುವ ಪದಾಧಿಕಾರಿಗಳು ಇಡೀ ತಾಲೂಕಿನ ಜನತೆಯ ಕುಂದು ಕೊರತೆಗಳನ್ನು ಆಲಿಸಿ, ಒಗ್ಗಟ್ಟಿನಿಂದ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಎಸ್.ಎಲ್. ರಂಗನಾಥ್, ಶಿವಶಂಕರ್, ಮುಖಂಡರಾದ ಡಿ . ರಂಗನಾಥ್, ಬರಗೂರು ಶ್ರೀನಿವಾಸ್, ಕನಕ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಮಂಜುನಾಥ್, ನಿರ್ದೇಶಕರಾದ ಭಾನುಪ್ರಕಾಶ್, ಹೇಮಂತ ರಾಜ್, ಕನಕರಾಜು, ಸುಶೀಲ ವಿರೂಪಾಕ್ಷ, ವಕೀಲರಾದ ಎಸ್.ಮಂಜುನಾಥ್, ರಾಘವೇಂದ್ರ, ಪುರುಷೋತ್ತಮ ಕನಕ ನೌಕರರ ಸಂಘದ ಅಧ್ಯಕ್ಷ ಸುರೇಶ, ಲಿಂಗರಾಜು, ಮಂಜುನಾಥ್, ಚಂದ್ರು, ಬೇವಿನಹಳ್ಳಿ ಶ್ರೀರಾಮ, ಲಿಂಗೇಶ್, ಲೋಕೇಶ, ರಾಘವೇಂದ್ರ, ಜಯಪ್ರಕಾಶ, ತೇಜು, ಕಾರ್ತಿಕ್ ಸೇರಿ ಅನೇಕ ಮುಖಂಡರು ಹಾಜರಿದ್ದರು. ಉಪಾಧ್ಯಕ್ಷರಾಗಿ ಜಿ. ಅಶೋಕ್, ಕಾರ್ಯದರ್ಶಿಯಾಗಿ ವಿ.ಜಿ. ದ್ರುವಕುಮಾರ್, ಗೌಡಗೆರೆ ರಮೇಶ್, ಖಜಾಂಚಿ ಜಯಣ್ಣರನ್ನು ಆಯ್ಕೆ ಅವಿರೋಧವಾಗಿ ಮಾಡಲಾಯಿತು.