ಸಾರಾಂಶ
ಅಶೋಕ ಚಿತ್ರ ಮಂದಿರ, ಡಿಸಿಎಂ ಟೌನ್ ಶಿಪ್ ಎದುರು, ಶಿರಮಗೊಂಡನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸೇತುವೆಗಳು ಅವೈಜ್ಞಾನಿಕವಾಗಿವೆ. ವಾಹನ ಚಾಲಕರು, ಸವಾರರು ಸಂಚರಿಸಲು ಭಯಪಡುವಂತಾಗಿದೆ. ಖಾಸಗಿ ಬಸ್ ನಿಲ್ದಾಣವೂ ಅವ್ಯವಸ್ಥೆಗಳ ಆಗರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.
ದಾವಣಗೆರೆ: ಅಶೋಕ ಚಿತ್ರ ಮಂದಿರ, ಡಿಸಿಎಂ ಟೌನ್ ಶಿಪ್ ಎದುರು, ಶಿರಮಗೊಂಡನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸೇತುವೆಗಳು ಅವೈಜ್ಞಾನಿಕವಾಗಿವೆ. ವಾಹನ ಚಾಲಕರು, ಸವಾರರು ಸಂಚರಿಸಲು ಭಯಪಡುವಂತಾಗಿದೆ. ಖಾಸಗಿ ಬಸ್ ನಿಲ್ದಾಣವೂ ಅವ್ಯವಸ್ಥೆಗಳ ಆಗರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಗುರುವಾರ ಖಾಸಗಿ ಬಸ್ ಮಾಲೀಕರ ಸಂಘ, ಖಾಸಗಿ ಬಸ್ ಚಾಲಕರ ಸಂಘಗಳಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಬೆಂಬಲ ಘೋಷಣೆ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಖಾಸಗಿ ಬಸ್ ಮಾಲೀಕರು, ಚಾಲಕರು, ನಿರ್ವಾಹಕರು, ಏಜೆಂಟರು ಕಾಂಗ್ರೆಸ್ ಪಕ್ಷವನ್ನೇ ಹಿಂದಿನಿಂದಲೂ ಬೆಂಬಲಿಸುತ್ತಿದ್ದೀರಿ. ಈ ಸಲವೂ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ನೀವು ಮತ ನೀಡಿ, ನಿಮ್ಮ ಕುಟುಂಬ, ಸ್ನೇಹಿತರಿಗೂ ಹೇಳಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ಈ ಮೂಲಕ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಖಾಸಗಿ ಬಸ್ ಮಾಲೀಕರ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಕಂಬತ್ತಹಳ್ಳಿ ಮಂಜುನಾಥ, ಏಜೆಂಟರ ಸಂಘದ ಅಧ್ಯಕ್ಷ ಉಮೇಶ ರಾವ್ ಸಾಳಂಕಿ, ಖಂಡೋಜಿರಾವ್, ಎಂ.ಆರ್. ಸತೀಶ, ಆರ್.ಜಿ.ಸತ್ಯನಾರಾಯಣ, ಸೋಮಶೇಖರ, ಅಸ್ಲಂ, ಪೀರ್ ಬಾಷ, ಆರ್.ಜಿ.ಕುಮಾರ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಖಾಸಗಿ ಬಸ್ ಮಾಲೀಕರ ಹಾಗೂ ಚಾಲಕರ ಸಂಘ ಹಾಗೂ ಏಜೆಂಟರ ಸಂಘದ ಪದಾಧಿಕಾರಿಗಳು ಇದ್ದರು.- - - -2ಕೆಡಿವಿಜಿ17: ಸಭೆಯಲ್ಲಿ ಸಚಿವ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.