ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಎತ್ತಿನ ಹೊಳೆ ಯೋಜನೆಯಡಿ 45 ಕೆರೆಗಳಿಗೆ ನೀರು ಹರಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿ ಗಿಡದಾಗಲಹಳ್ಳಿ ರಸ್ತೆ ಅಭಿವೃದ್ಧಿ ,ಬೋರಾಗುಂಟೆ,ಆವಿನಮಡುಗು,ಬಡವನಹಳ್ಳಿ ಹಾಗೂ ಬೀಮನಕುಂಟೆ ಗ್ರಾಮಗಳಲ್ಲಿ 13 ಕೋಟಿ ರು.ವೆಚ್ಚದ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ವ್ಯರ್ಥವಾಗಿ ಹರಿದು ಹೋಗುವ ನೀರು ತಡೆದು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ವೃದ್ಧಿಸಲಿದೆ. ಆಯ್ದ ಭಾಗಗಳಲ್ಲಿ ಜಯಮಂಗಲಿ ಮತ್ತು ಸುವರ್ಣ ಮುಖಿ ನದಿಗೆ ಬ್ಯಾರೇಜ್ ಕಂ ಬ್ರಿಡ್ಜ್ಗ್ ನಿರ್ಮಿಸಲಾಗುತ್ತಿದೆ. ಇದರಿಂದ ಮಳೆ ನೀರು ನಿಂತು ಹರಿದರೆ ರೈತರ ಬಾವಿ,ಬೋರವೆಲ್‌ಗಳಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರು ಬೇಸಾಯ ಮಾಡಲುಅನುಕೂಲ .ದೊಡ್ಡೇರಿ ಹೋಬಳಿಯ 9 ಕೆರೆಗಳಿಗಳೆ ಎತ್ತಿನ ಹೊಳೆ ನೀರು ಹರಿಯಲಿದೆ ಎಂದರು. .

ಬಡವನಹಳ್ಳಿ ಸಮೀಪ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಟಿಟಿಸಿ ಕಾಲೇಜು ಸ್ಥಾಪಿಸಲು 9.30 ಎಕರೆ ಜಮೀನು ಗುರುತಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಂತರಿಸಲಾಗಿದೆ.ಇದಕ್ಕೆ 74 .30 ಕೋಟಿ ರು.ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಚುನಾವಣೆ ನಡೆಸಲು ಮುಂದಾಗಬೇಕು ಎಂದರು.


ಮಹಿಳೆಯರಿಗೆ ಉದ್ಯೋಗ ದೊರಕಿಸುವ ಸಲುವಾಗಿ ಕಂಸಾನಹಳ್ಳಿ ಭಾಗದ ವ್ಯಕ್ತಿಯೊಬ್ಬರು ಗಾರ್ಮೆಂಟ್ಸ್ ಪ್ಯಾಕ್ಟರಿ ಪ್ರಾಂಭಿಸುವುದಾಗಿ ತಿಳಿಸಿ,

ಬೆಲ್ಲದಮಡು ರಸ್ತೆ ಬದಿ 325 ಎಕರೆ ಪ್ರದೇಶದಲ್ಲಿ ಹಿಂದಿನ ಶಾಸಕ ಎಂ.ವಿ.ವೀರಭದ್ರಯ್ಯ ಶಾಸಕರಾಗಿದ್ದಾಗ ಕೈಗಾರಿಕಾ ವಲಯ ಮಂಜೂರು ಮಾಡಿಸಿದ್ದು ,ಜಮೀನಿನ ಬೆಲೆ ಎಕರೆಗೆ 22 ಲಕ್ಷ ನಿಗದಿಗೊಳಿಸಿದ್ದು ಇಲ್ಲಿನ ರೈತರು 70 ಲಕ್ಷ

ಕೊಡುವಂತೆ ಮನವಿ ಮಾಡಿದ್ದು,ಕೆಎಡಿಬಿ ಆಕ್ಟ್ನಲ್ಲಿ ಭೂಮಿ ವಶಕ್ಕೆ ಪಡೆದರೆ ಅದನ್ನು ಪುನಃ ಡಿನೋಟಪೈ ಮಾಡಲು ಅವಕಾಶವಿಲ್ಲ,ಆಗಾಗಿ ರೈತರು ಒಪ್ಪಿದರೆ ಮುಂದಿನ ದಿನಗಳಲ್ಲಿ ಇಂಡಸ್ಟ್ರಿಯಲ್ ನಿರ್ಮಾಣವಾಗಲಿದೆ ಎಂದರು.

ದಲಿತ ಸಿಎಂ ಬಗ್ಗೆ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ದಲಿತ ಸಿಎಂ ಆಗಬಾರದ.? ಎಲ್ಲ ಜನಾಂಗದವರಿಗೂ ನ್ಯಾಯ ನೀಡುವ ಕಾಂಗ್ರೆಸ್ ಪಕ್ಷ ದಲಿತರನ್ನು ಸಿಎಂ ಏಕೆ ಮಾಡುತ್ತಿಲ್ಲ,? ವಾಸ್ತವಂಶ ಹೇಳಿದರೆ ಜನರಿಗೆ ಅದು ಬಹಳ ಕಹಿ, ಮೈನಾರಿಟಿ ಯಾಕೆ ಸಿಎಂ ಆಗಬಾರದು.? ವಾಲ್ಮೀಕಿ,ಬಲಿಜ ಸಮಾಜದವರು ಏಕೆ ಆಗಬಾರದು. ದಲಿತರೊಬ್ಬರು ಸಿಎಂ ಆದರೆ ಆ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆ ಇರುತ್ತಾರೆ. ಈಗಾಗಲೇ ಎಲ್ಲ ಸಮುದಾಯದವರು ಸಿಎಂ ಆಗಿದ್ದು ದಲಿತರು ಸಿಎಂ ಆದರೆ ತಪ್ಪೇನು.? ದಲಿರು ಸಿಎಂ ಆಗಬೇಕು.ದೇವರಾಜ ಅರಸು 1972ರಲ್ಲಿ ಎಂಎಲ್‌ಎ ಆಗಿರಲಿಲ್ಲ, ಅವರು ಅವತ್ತು ಸಿಎಂ ಮಾಡ್ತಾರೆ.ಅವತ್ತು ಎಂಎಲ್ಎಗಳು ಸಿಎಂ ಹೆಚ್ಚು ಒಲವು ತೋರಿಸಿದ್ದರಿಂದ ಸಿಎಂ ಆದರು.ಅರಸುಗೆ ಅವರ ಜಾತಿಯಿಂದ ಇನ್ನೊಬ್ಬ ಎಂಎಲ್‌ಎ ಇರಲಿಲ್ಲ, ಧರ್ಮಸಿಂಗ್‌ಗೂ ಅಷ್ಠೇ,ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರು ಲಿಂಗಾಯತರನ್ನು ಕಾಂಗ್ರೆಸ್ ಪಾರ್ಟಿ ಸಿಎಂ ಮಾಡಿದೆ.ಬೇರೆ ಸಮುದಾಯಕ್ಕೆ ಎಲ್ಲಿ ನ್ಯಾಯ ಕೊಟ್ಟಿದೆ.ಬಿಜೆಪಿ ಗೆದ್ರೆ ಲಿಂಗಾಯಿತರು,ಜೆಡಿಎಸ್ ಗೆದ್ರೆ ಒಕ್ಕಲಿಗರು ಎಂದರು.

2028ರ ಚುನಾವಣೆಯಲ್ಲಿ ಮಧುಗಿರಿ ಮಹಿಳಾ ಮೀಸಲು ಪ್ರಕಟವಾದರೆ ನನ್ನ ಮಗಳು ರಶ್ಮಿ ಅವರನ್ನೇ ಅಭ್ಯರ್ಥಿ ಮಾಡುವುದಾಗಿ ಇದೇ ವೇಳೆ ಶಾಸಕ ಕೆ.ಎನ್.ರಾಜಣ್ಣ ಸುಳಿವು ನೀಡಿದರು.

ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ಪಿಡಬ್ಲಯೂಡಿ ಇಇ ಹನುಮಂತರಾವ್, ಎಇಇಗಳಾದ ಸಂಪತ್ ಕುಮಾರ್,ಲೋಕೇಶ್ವರಪ್ಪ, ಮಂಜುಕಿರಣ್, ರೇಷ್ಮೆ ಅಧಿಕಾರಿ ಮೋಹನ್, ತೋಟಗಾರಿಕೆ ಶಶಿಧರ್, ಬೆಸ್ಕಾಂ ಇಇ ಜಗದೀಶ್,ಮಾಯಕಣ್ಣ ನಾಯ್ಕ್, ಇಒ ಲಕ್ಷ್ಮಣ್‌, ಧನಂಜಯ್‌, ಮುಖಂಡರಾದ ತುಂಗೋಟಿ ರಾಮಣ್ಣ,ಗ್ಯಾರಂಟಿ ಸಮಿತಿ ಅಧ್ಯಕ್ಷ ಚೌಡಪ್ಪ,ಮೂಡ್ಲಪ್ಪ, ಗೋಪಾಲಯ್ಯ, ಪಿಡಿಓಗಳಾದ ಗೌಡಪ್ಪ,ದನಯಾನಂದ್ ಇತರರಿದ್ದರು.