ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಕೋಮು ಘರ್ಷಣೆ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿರುವುದು ಅಚ್ಚರಿಗೆ ಮೂಡಿಸಿದೆ. ಹಿಂದಿನಿಂದಲೂ ಕೋಮು ಬಣ್ಣವನ್ನು ಮೈಗಂಟಿಸಿಕೊಳ್ಳದೆ ಸಾಮರಸ್ಯವನ್ನು ಕಾಯ್ದುಕೊಂಡಿರುವ ಮಂಡ್ಯ ಜಿಲ್ಲೆಯೊಳಗೆ ಕೋಮು ಸಂಘರ್ಷಗಳು ಹೆಚ್ಚಿರುವುದೊಂದು ಹೊಸ ಬೆಳವಣಿಗೆಯಾಗಿದೆ.

ಎಲ್ಲಾ ಕೋಮು ಘರ್ಷಣೆಗಳು ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲೇ ನಡೆದಿರುವುದು ಮತ್ತೊಂದು ವಿಶೇಷವಾಗಿದೆ. ಅದರಲ್ಲೂ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರಿಗೆ ಸೀಮಿತವಾಗಿ ಕೋಮು ಘರ್ಷಣೆಗಳು ಸಂಭವಿಸಿರುವುದು ಬಿಟ್ಟರೆ ಉಳಿದ ತಾಲೂಕುಗಳಲ್ಲೆಲ್ಲೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಕೋಮು ಘರ್ಷಣೆ ಸಂಬಂಧ ೨೦೨೪ ಮತ್ತು ೨೦೨೫ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು ೩೪ ಪ್ರಕರಣಗಳು ದಾಖಲಾಗಿವೆ. ೨೦೨೪ರಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಕೋಮು ಘರ್ಷಣೆಯಲ್ಲಿ ೨೪ ಪ್ರಕರಣ ಹಾಗೂ ೨೦೨೫ರಲ್ಲಿ ಮದ್ದೂರು ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಕೋಮು ಘರ್ಷಣೆಗಳು ಸಂಭವಿಸಿದ್ದವು. ಈ ಕಾರಣದಿಂದ ೨೦೨೫ರ ನವೆಂಬರ್ ೨೬ರಂದು ಜಿಲ್ಲೆಯಲ್ಲಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ ರಚಿಸಲಾಗಿದೆ.

ಪ್ರತಿ ವರ್ಷ ಶ್ರೀರಂಗಪಟ್ಟಣದಲ್ಲಿ ಹನುಮಜಯಂತಿ ಅಂಗವಾಗಿ ಹನುಮ ಸಂಕೀರ್ತನಾ ಯಾತ್ರೆ ನಡೆದರೂ ಇದುವರೆಗೂ ಒಂದೇ ಒಂದು ಕೋಮು ಘರ್ಷಣೆ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ದಾಖಲಾಗಿರುವ ಕೋಮು ಘರ್ಷಣೆಗಳೆಲ್ಲವೂ ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯೇ ನಡೆದಿವೆ. ಹಾಗಾಗಿ ಜಿಲ್ಲೆಯೊಳಗೆ ಕೋಮು ಸಂಘರ್ಷ ಹುಟ್ಟುಹಾಕಲು ಗಣೇಶ ಹಬ್ಬ ಟಾರ್ಗೆಟ್ ಆಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.


ಮೊದಲ ಬಾರಿಗೆ ೨೦೨೪ರಲ್ಲಿ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ನಡೆದು ಕೋಮು ಘರ್ಷಣೆಗೆ ಕಾರಣವಾಗಿತ್ತು. ಒಟ್ಟು ೨೪ ಪ್ರಕರಣಗಳಲ್ಲಿ ೧೨೩ ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಘರ್ಷಣೆಯಲ್ಲಿ ೪,೫೯,೩೫,೦೦೦ ರು. ನಷ್ಟವಾಗಿದ್ದು, ಸಂತ್ರಸ್ತರಿಗೆ ಪರಿಹಾರವಾಗಿ ೨೪,೫೫,೦೦೦ ರು.ಗಳನ್ನು ವಿತರಿಸಲಾಗಿತ್ತು.

ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ್ದ ಕೋಮು ಘರ್ಷಣೆಯನ್ನು ಸೂಕ್ಷ್ಮ ಮತ್ತು ಗಂಭೀರವಾಗಿ ಪರಿಗಣಿಸದಿದ್ದರಿಂದ ೨೦೨೫ರ ಸೆ.೮ರಂದು ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮು ಘರ್ಷಣೆ ಮತ್ತೆ ಮರುಕಳಿಸಿತು. ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸದಿದ್ದದ್ದು ಘರ್ಷಣೆಗೆ ಕಾರಣವಾಯಿತು. ಮದ್ದೂರಿನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ೧೦ ಪ್ರಕರಣಗಳಲ್ಲಿ ೮೮ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಎಂ.ಪರಮೇಶ್ವರ್ ವಿಧಾನಪರಿಷತ್ ಶಾಸಕ ಮಧು ಮಾದೇಗೌಡರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ಸೃಜಿಸಲಾಗಿರುವ ವಿಶೇಷ ಕಾರ್ಯಪಡೆಯ ಕೇಂದ್ರಸ್ಥಾನವನ್ನು ಮಂಗಳೂರಿನಲ್ಲಿ ಹಾಗೂ ಕಾರ್ಯಪಡೆಯ ೩ ಕಂಪನಿಗಳನ್ನು ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ವಿಶೇಷ ಕಾರ್ಯಪಡೆಯ ಒಂದು ಕಂಪನಿಯನ್ನು ಮಂಡ್ಯ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ವಿಶೇಷ ಕಾರ್ಯಪಡೆ ಹಾಗೂ ಪಡೆಯ ಅಧೀನ ಕಂಪನಿಗಳು ಉಪ ಪೊಲೀಸ್ ಮಹಾ ನಿರೀಕ್ಷಕ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೋಮು ಗಲಭೆ ನಿಗ್ರಹಕ್ಕಾಗಿ ಸೃಜಿಸಲಾದ ವಿಶೇಷ ಕಾರ್ಯಪಡೆಯಿಂದ ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಗಮನಹರಿಸಿ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬಾಕ್ಸ್‌....

ರಾಜ್ಯದಲ್ಲಿ ಕಳೆದ 03 ವರ್ಷಗಳಲ್ಲಿ ನಡೆದಿರುವ ಕೋಮು ಘರ್ಷಣೆಗಳ (ಗಣೇಶ ಹಬ್ಬದ ಸಂದರ್ಭ ಸೇರಿದಂತೆ) ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ:

ಘಟಕದಾಖಲಾದ ಕೋಮು ಘರ್ಷಣೆ ಪ್ರಕರಣಗಳ ವಿವರ

2023202420252026

ಮಂಗಳೂರು ನಗರ02100

ಬೆಳಗಾವಿ ನಗರ0210

ಮಂಡ್ಯ024100

ಬೆಳಗಾವಿ ಜಿಲ್ಲೆ0200

ಧಾರವಾಡ0200

ಬಾಗಲಕೋಟೆ7024

ಹಾವೇರಿ10020

ದಾವಣಗೆರೆ0630

ದಕ್ಷಿಣ ಕನ್ನಡ0030

ಕಲಬುರಗಿ ಜಿಲ್ಲೆ2000

ಒಟ್ಟು1938314