ಸಮುದಾಯ ಭವನಗಳಿಂದ ಬಡವರಿಗೆ ಅನುಕೂಲ: ಪುರಸಭೆ ಅಧ್ಯಕ್ಷೆ ತೀರ್ಥ ಕುಮಾರಿ

| Published : Feb 10 2024, 01:46 AM IST

ಸಾರಾಂಶ

ಬಡ ವರ್ಗದ ಜನರು ಸಣ್ಣ ಸಮುದಾಯ ಭವನಗಳಲ್ಲಿ ಕಾರ್ಯಗಳನ್ನು ಮಾಡಲು ಸಮುದಾಯ ಭವನ ಅನುಕೂಲವಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ಪುರಸಭೆ ವತಿಯಿಂದ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಕನ್ನಡಪ್ರಭ ವಾರ್ತೆ ಬೇಲೂರು

ಸಿರಿವಂತರು ಅವರ ಘನತೆಗೆ ತಕ್ಕ ರೀತಿಯಲ್ಲಿ ಕಲ್ಯಾಣ ಮಂಟಪಗಳಲ್ಲಿ ಶುಭ ಕಾರ್ಯಗಳನ್ನು ಮಾಡಲು ಮುಂದಾಗುವ ಸಂದರ್ಭದಲ್ಲಿ, ಬಡ ವರ್ಗದ ಜನರು ಸಣ್ಣ ಸಮುದಾಯ ಭವನಗಳಲ್ಲಿ ಕಾರ್ಯಗಳನ್ನು ಮಾಡಲು ಸಮುದಾಯ ಭವನ ಅನುಕೂಲವಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.

ಪುರಸಭೆ ವ್ಯಾಪ್ತಿಗೆ ಬರುವ 16 ನೇ ವಾರ್ಡಿನಲ್ಲಿ ಪುರಸಭೆ ವತಿಯಿಂದ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ಸುಮಾರು ದಿನಗಳಿಂದ ನೆನಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಈ ಹಿಂದೆ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಅದು ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಿರಲಿಲ್ಲ, ಆದ್ದರಿಂದ ಪುರಸಭೆ ವತಿಯಿಂದ ಬೇಲೂರು ನಗರದಲ್ಲೇ ಹೈಟೆಕ್ ಮಾದರಿಯ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು,

ತಾಲೂಕು ದಂಡಾಧಿಕಾರಿ ಎಂ ಮಮತಾ ಮಾತನಾಡಿ, ಎಲ್ಲರೂ ತಮ್ಮದೇ ಆದ ಕನಸನ್ನು ಹೊಂದಿರುತ್ತಾರೆ, ಅದರಂತೆ ಬಡ ವರ್ಗದ ಜನರು ಮದುವೆ, ನಾಮಕರಣ ಇನ್ನೂ ಮುಂತಾದ ಶುಭ ಕಾರ್ಯಗಳನ್ನು ಜನ ಮೆಚ್ಚುವಂತೆ ಮಾಡಲು ಇಚ್ಛಿಸುತ್ತಾರೆ, ಅದರಂತೆ ಶಂಕರ ದೇವರ ಪೇಟೆಯಲ್ಲಿ ಸಮುದಾಯ ಭವನ ನಿರ್ಮಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು, ಅಲ್ಲದೆ ಸ್ವಚ್ಛತೆ ಹಾಗೂ ಸಮುದಾಯ ಭವನವನ್ನು ತಮ್ಮ ಮನೆಯಂತೆ ಕಾಪಾಡಿಕೊಳ್ಳಲು ಸಹಕರಿಸಬೇಕು ಎಂದರು,

ಪುರಸಭೆ ಸದಸ್ಯರಾದ ಭರತ್, ಜಗದೀಶ್, ಪುರಸಭೆ ಮುಖ್ಯಧಿಕಾರಿ ಸುಜಯ್, ಆರೋಗ್ಯಧಿಕಾರಿ ಲೋಹಿತ್, ಎಂಜಿನಿಯರ್ ಜಗದೀಶ್, ಪುರಸಭೆ ನೌಕರರು, ಶಂಕರ ದೇವರ ಪೇಟೆ ನಿವಾಸಿಗಳು ಇದ್ದರು.

ಪುರಸಭೆ ವ್ಯಾಪ್ತಿಯ 16 ನೇ ವಾರ್ಡಿನಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಲಾಯಿತು.