ಸಮುದಾಯ ಭವನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು

| Published : Jul 28 2025, 12:30 AM IST

ಸಮುದಾಯ ಭವನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯ ಭವನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು. ಅಂದಾಗ ಮಾತ್ರ ಭವನಗಳ ನಿರ್ಮಾಣಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಸಮುದಾಯ ಭವನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು. ಅಂದಾಗ ಮಾತ್ರ ಭವನಗಳ ನಿರ್ಮಾಣಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ದೊಡ್ಡರಾಯ ಪೇಟೆ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಾಣವಾಗಿರುವ ಶ್ರೀ ನೇಕಾರ ದೇವಾಂಗ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸದುಪಯೋಗ ಮಹತ್ವದಾಗಿದ್ದು ಭವನವನ್ನು ದೇವಾಲಯದಂತೆ ಶ್ರದ್ದೆ, ಭಕ್ತಿಯಿಂದ ನಿರ್ವಹಣೆ ಮಾಡಿ ಸದಾ ಕ್ರಿಯಾಶೀಲವಾಗಿ ಭವನದಲ್ಲಿ ಚರ್ಚೆ,ಶೈಕ್ಷಣಿಕ ಸಭೆ-ಸಮಾರಂಭ ಸೇರಿದಂತೆ ಉತ್ತಮ ಚಟುವಟಿಕೆಗಳನ್ನು ರೂಪಿಸಬೇಕು. ಗ್ರಾಮದಲ್ಲೊಂದು ಭವನ ಅತ್ಯಗತ್ಯವಾಗಿದೆ. ಗ್ರಾಮದ ಜನತೆಗೆ ಮೂಲಭೂತವಾಗಿ ಬೇಕಾದ ರಸ್ತೆ ಚರಂಡಿ ಕುಡಿಯುವ ನೀರು ವಸತಿ ಸೇರಿದಂತೆ ಸಮುದಾಯ ಭವನಗಳನ್ನು ಸಾಮಾಜಿಕ ನ್ಯಾಯದಡಿ ಪ್ರತಿಯೊಂದು ಸಮುದಾಯಕ್ಕೂ ತಲುಪುವಂತೆ ಮುತುವರ್ಜಿ ವಹಿಸಿದ್ದು, ಇನ್ನು ಅಗತ್ಯವಿರುವಡೆ ಮತ್ತಷ್ಟು ಅಭಿವೃದ್ದಿ ಪಡಿಸುವುದಾಗಿ ಭರವಸೆ ನೀಡಿದರು.

ದೇವಾಂಗ ಸಮುದಯದ ಬಡಾವಣೆಯಲ್ಲಿ ಏರ್ಪಡಿಸಿದ ಶ್ರೀರಾಮಲಿಂಗ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀಚೌಡೇಶ್ವರಿ ಅಮ್ಮನವರಿಗೆ,ಪಂಚಾಮೃತ ಅಭಿಷೇಕ ಕುಂಭಾಭಿಷೇಕ ನಂತರ ಬೆಳ್ಳಿಕವಚ, ವಸ್ತ್ರ ಹೂವಿನ ಅಲಂಕಾರ,ಸಂಕಲ್ಪ ಕುಂಕಮಾರ್ಚನೆ, ವಿಶೇಷ ಪೂಜೆ ನೆರವೇರಿಲಾಗಿತ್ತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಇದೇ ವೇಳೆ ಶಾಸಕರು ದೇವಸ್ಥಾನಕ್ಕ ಬೇಟೆ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ.ಸದಸ್ಯರಾದ ಮಹೇಶ್ವರಿ, ನಾಗೇಂದ್ರ, ಸಿದ್ದರಾಜು, ವಿಜಯ್, ಮುಖಂಡರಾದ ಪಿ.ರಮಗಪ್ಪ, ಗೌಡಿಕೆಶಿವಸ್ವಾಮಪ್ಪ, ರವಿಗೌಡ, ವೆಂಕಟೇಶ್‌, ಆರ್ಚಕ ರಂಗಪ್ಪ, ಮಹದೇವ್,ಅಶೋಕ್, ಮಹದೇವಸ್ವಾಮಿ, ರಾಜು, ಸೇರಿದಂತೆ ಶೆಟ್ಟಿಗಾರರು, ಯಜಮಾನರು, ದೇವಾಂಗ ಕುಲಭಾಂದವರು, ಮುಖಂಡರು ಗ್ರಾಮಸ್ಥರು ಇದ್ದರು.