ಸಾರಾಂಶ
ಮೂಡಿಗೆರೆ, ತಾಲೂಕಿನಲ್ಲಿ ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲು ಶ್ರಮಿಸಲಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಿಗೆರೆತಾಲೂಕಿನಲ್ಲಿ ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲು ಶ್ರಮಿಸಲಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಗುರುವಾರ ತಾಲೂಕಿನ ಹಂತೂರು ಗ್ರಾಪಂ ವ್ಯಾಪ್ತಿಯ ಜೇನುಬೈಲ್ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ₹60 ಲಕ್ಷ ವೆಚ್ಚದಲ್ಲಿ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮ ದಲ್ಲಿರುವ ಎರಡು ಪರಿಶಿಷ್ಟ ಜಾತಿ ಕಾಲೋನಿ ಜನರಿಗೆ ಮದುವೆ ಸೇರಿದಂತೆ ಶುಭ ಸಮಾರಂಭಕ್ಕೆ ಸಮುದಾಯ ಭವನದ ಅಗತ್ಯವಿತ್ತು. ಅದಕ್ಕಾಗಿ ಒಂದು ಎಕರೆ ಸರಕಾರಿ ಜಮೀನು ಕೂಡ ಅನೇಕ ವರ್ಷದ ಹಿಂದೆಯೇ ಮೀಸಲಿರಿಸಲಾಗಿತ್ತು. ಆದರೆ ಸಮುದಾಯ ಭವನದ ಕನಸು ಕನಸಾಗಿಯೆ ಉಳಿದಿದೆ ಎಂದು ಸ್ಥಳೀಯರು ತನ್ನ ಗಮನ ಸೆಳೆದಿದ್ದರು.
ಹಾಗಾಗಿ ₹60 ಲಕ್ಷ ವೆಚ್ಚದಲ್ಲಿ ಸಮುದಾಯ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನರೆವೇರಿಸುವ ಜತೆಗೆ ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಹಾಗೂ ಎಂಜಿನಿಯರ್ ಅವರಿಗೆ ಸೂಚಿಸಲಾಗಿದೆ. ಸಮುದಾಯ ಭವನ ನಿರ್ಮಾಣಗೊಂಡ ಬಳಿಕ ಸ್ಥಳೀಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯಗೌಡ, ಹಂತೂರು ಗ್ರಾಪಂ ಮಾಜಿ ಅಧ್ಯಕ್ಷ ಯು.ಪಿ.ಜಗದೀಶ್, ಸ್ಥಳೀಯ ಮುಖಂಡರಾದ ಜೆ.ಎಂ.ನಾಗೇಶ್‌ಗೌಡ, ಕೆಂಚಯ್ಯ, ಅನಿಲ್, ಜೆ.ಬಿ.ಸತೀಶ್, ವಕೀಲ ದರ್ಶನ್ ಈ ಸಂದರ್ಭದಲ್ಲಿ ಹಾಜರಿದ್ದರು.ಪೋಟೊ: ೧೩ಮೂಡಿಗೆರೆ೨ಎ: ಮೂಡಿಗೆರೆ ತಾಲೂಕಿನ ಜೇನುಬೈಲ್ ಗ್ರಾಮದಲ್ಲಿ ಸಮುದಾಯ ಭವನದ ನೂತನ ಕಾಮಗಾರಿ ನಿರ್ಮಾಣಕ್ಕೆ ಶಾಸಕಿ ನಯನಾ ಮೋಟಮ್ಮ ಗುದ್ದಲಿಪೂಜೆ ನೆರವೇರಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))