ಶಿಕ್ಷಣ ಕ್ಷೇತ್ರದ ಯಶಸ್ಸಿಗೆ ಸಮುದಾಯ ಸಹಭಾಗಿತ್ವ ಅಗತ್ಯ

| Published : Sep 20 2025, 01:00 AM IST

ಶಿಕ್ಷಣ ಕ್ಷೇತ್ರದ ಯಶಸ್ಸಿಗೆ ಸಮುದಾಯ ಸಹಭಾಗಿತ್ವ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ಕ್ಲಸ್ಟರ್‌ನ ಬಿ.ಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಸ್ಮಾರ್ಟ್ ಟಿವಿ ಮತ್ತು ವೈಟ್‌ಬೋರ್ಡ್‌ಗಳನ್ನು ಹಸ್ತಾಂತರಿಸುವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಮಕ್ಕಳ ಶಿಕ್ಷಣದಲ್ಲಿ ವಿಶೇಷ ಕಾಳಜಿಯನ್ನು ತೋರಿರುವುದರಿಂದ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಾಲೆಗೆ ಬೆಂಬಲವಾಗಿ ನಿಂತಿರುವುದು ಶ್ಲಾಘನೀಯ ಎಂದು ಹೇಳಿದರು. ನನ್ನ ಶಾಲೆ – ನನ್ನ ಕೊಡುಗೆ” ಕಾರ್ಯಕ್ರಮದಡಿಯಲ್ಲಿ ನೀಡಲಾಗಿರುವ ಈ ಕೊಡುಗೆಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶಿಕ್ಷಣ ಇಲಾಖೆಯಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಪೋಷಕರು ಹಾಗೂ ಸಮುದಾಯದಿಂದ ಸಕ್ರಿಯ ಸ್ಪಂದನೆ ಬಂದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತ ಯಶಸ್ಸು ಸಾಧ್ಯ ಎಂದು ಬಿಆರ್‌ಪಿ ಸಿದ್ದರಾಮಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಹಿರಿಯೂರು ಕ್ಲಸ್ಟರ್‌ನ ಬಿ.ಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಸ್ಮಾರ್ಟ್ ಟಿವಿ ಮತ್ತು ವೈಟ್‌ಬೋರ್ಡ್‌ಗಳನ್ನು ಹಸ್ತಾಂತರಿಸುವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಮಕ್ಕಳ ಶಿಕ್ಷಣದಲ್ಲಿ ವಿಶೇಷ ಕಾಳಜಿಯನ್ನು ತೋರಿರುವುದರಿಂದ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಾಲೆಗೆ ಬೆಂಬಲವಾಗಿ ನಿಂತಿರುವುದು ಶ್ಲಾಘನೀಯ ಎಂದು ಹೇಳಿದರು. ನನ್ನ ಶಾಲೆ – ನನ್ನ ಕೊಡುಗೆ” ಕಾರ್ಯಕ್ರಮದಡಿಯಲ್ಲಿ ನೀಡಲಾಗಿರುವ ಈ ಕೊಡುಗೆಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾಗಿವೆ ಎಂದರು.

ಬಿಆರ್‌ಪಿ ಪುಷ್ಪಾವತಿ, ದಾನಿಗಳ ಕೊಡುಗೆ ಇಲಾಖೆ ಘೋಷಿಸಿರುವ ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ ಘೋಷಣೆಗೆ ಅರ್ಥ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರ್, ಪೋಷಕರ ಮತ್ತು ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಸಿಆರ್‌ಪಿ ಮಲ್ಲಿಕಾರ್ಜುನ ಪ್ರಸನ್ನ, ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಇದ್ದಾರೆ, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವ ಮೂಲಕ ಲಾಭ ಪಡೆಯಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ದಾನಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಭಾಗವಹಿಸಿ, ಮಕ್ಕಳ ಭವಿಷ್ಯದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದರು.