ದಾಂಡೇಲಿ: ಉತ್ತರ ಕನ್ನಡ ಜಿಲ್ಲಾಡಳಿತ, ಉತ್ತರ ಕನ್ನಡ ಜಿಪಂ ಸಹಯೋಗದಲ್ಲಿ ೨೦೨೫-೨೬ನೇ ಸಾಲಿನ ತಾಪಂನ ಅನಿರ್ಬಂಧಿತ ಅನುದಾನದಡಿ ಮಂಜೂರಾದ ದಾಂಡೇಲಿ ತಾಲೂಕಿನ ಆಲೂರು ಗ್ರಾಪಂ ವ್ಯಾಪ್ತಿಯ ಕೇರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ಹಾಗೂ ತಾಟಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯ ಮತ್ತು ಕೊಠಡಿ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಬುಧವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಅವರು, ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣವಂತ ಸಮಾಜದಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಸರ್ಕಾರದ ಜತೆಗೆ ಸಮುದಾಯದ ಸಹಭಾಗಿತ್ವವೂ ಅತ್ಯಗತ್ಯ. ನೂತನ ಶಾಲಾ ಕೊಠಡಿಯು ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ವಿಶೇಷವಾದ ಕೊಡುಗೆ ನೀಡುವಂತಾಗಲಿ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ನಿರ್ಮಿತಿ ಕೇಂದ್ರದ ಕುಮಾರ, ದಾಂಡೇಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೋಹನ ಹಲವಾಯಿ, ನಗರಸಭೆ ಮಾಜಿ ಅಧ್ಯಕ್ಷ ಅಷ್ಫಾಕ್ ಶೇಖ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ ಮಿಶಾಳೆ, ಬಿಆರ್‌ಸಿ ಎಂ.ಎಸ್. ಚೌಗಲಾ, ಸಿಆರ್‌ಪಿ ಶ್ರೀದೇವಿ ಪುಲಿ, ಶಾಲಾ ಮುಖ್ಯೋಪಾಧ್ಯಾಯ ಸಂಗಪ್ಪ ಮಾದರ, ಮುಖಂಡರಾದ ಆರ್.ಪಿ. ನಾಯ್ಕ, ಫ್ರಾಂಚಿಸ್ ಮಸ್ಕರನೆಸ್, ಅನಿಲ ನಾಯ್ಕರ, ರಮೇಶ ಶಟ್ಟಪ್ಪನವರ, ದಾಮೋದರ ಮಿಶಾಲೆ, ನೂರಜಾಹನ ನದಾಫ್, ಮುನ್ನಾ, ತಾಟಗೇರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ ಕದಂ, ಬಿಆರ್‌ಸಿ ಎಂ.ಎಸ್. ಚೌಗಲಾ, ಸಿಆರ್‌ಪಿ ಶ್ರೀದೇವಿ ಪುಲಿ, ಶಾಲಾ ಮುಖ್ಯೋಪಾಧ್ಯಾಯ ನಾಗರಾಜ ಈರಗೊಂಡ ಉಪಸ್ಥಿತರಿದ್ದರು.