ಸಾರಾಂಶ
ಹುನಗುಂದ ಪಟ್ಟಣದ ಪುರಸಭೆ ಮಂಗಲಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಉಮಾದೇವಿ ಮತ್ತು ಪ್ರೊ.ಕೆ. ತಾರಾನಾಥ ದಂಪತಿ 9ನೇ ಪುಣ್ಯಸ್ಮರಣೆ, ದತ್ತಿ ಉಪನ್ಯಾಸ ಹಾಗೂ 19ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮವನ್ನು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಸಾಹಿತಿಗಳ ಹೃದಯ ವಿಶಾಲತೆಯಿಂದ ಕೂಡಿರುತ್ತದೆ. ಸಾಹಿತ್ಯ ಎಂದರೆ ಅಂತಃಕರಣದಿಂದ ಬರುವ ಕರುಣೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಪುರಸಭೆ ಮಂಗಲಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಉಮಾದೇವಿ ಮತ್ತು ಪ್ರೊ.ಕೆ. ತಾರಾನಾಥ ದಂಪತಿ 9ನೇ ಪುಣ್ಯಸ್ಮರಣೆ, ದತ್ತಿ ಉಪನ್ಯಾಸ ಹಾಗೂ 19ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಸಮಾಜದಲ್ಲಿ ಸಮಾನತೆ ತಿದ್ದುವ ಸಹಜ ಕವಿ ಸತ್ಯಾನಂದ ಪಾತ್ರೋಟಿ ಆಗಿದ್ದಾರೆ ಎಂದು ಹೇಳಿದರು.
ಕವಿ ಸತ್ಯಾನಂದ ಪಾತ್ರೋಟ ಮಾತನಾಡಿ, ಸಮಾನತೆಯನ್ನು ಸ್ತ್ರೀಯರಿಗೆ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಹಿಂದಿನ ಮತ್ತು ಇಂದಿನ ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕ್ಕೆ ಸರಿಯಾದ ಸ್ಥಾನಮಾನ ಕೊಡುತ್ತಿಲ್ಲ? ಪ್ರಾದೇಶಿಕ ಅಸಮಾನತೆ ಜೊತಗೆ ಸಾಮಾಜಿಕ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಕ್ಷೇತ್ರದಲ್ಲೂ ಅಸಮಾನತೆ ಅಸಮಾಧಾನಗಳಿರುತ್ತವೆ. ಪ್ರಾದೇಶಿಕ ಸಮಾನತೆ ಕಾಪಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡೋಣ ಎಂದ ಅವರು, ಅಸಮಾನತೆ ಹೋಗಲಾಡಿಸಿ ಎಲ್ಲರನ್ನು ಒಳಗೊಳ್ಳುವ ಕರ್ನಾಟಕ ಆಗಬೇಕು, ಆಗ ಗೌರವ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.ನಿವೃತ್ತ ಪ್ರಾಧ್ಯಾಪಕ ಎನ್.ಎಚ್. ಹಿರೇಮಠ ಪ್ರೊ. ಕೆ.ತಾರಾನಾಥ ಅವರ ಶೈಕ್ಷಣಿಕ ಸೇವೆ ಹಾಗೂ ಸ್ನೇಹದ ಒಡನಾಟ ಕುರಿತು ಮಾತನಾಡಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಇಂದುಮತಿ ಪುರಾಣಿಕ, ಮುರ್ತುಜಾಬೇಗಂ ಕೊಡಗಲಿ, ನಾಗರತ್ನಾ ಭಾವಿಕಟ್ಟಿ, ಗಿರಿಜಾ ಗಂಜೀಹಾಳ, ಶ್ರೀದೇವಿ ಕರ್ಜಗಿ ಕವನ ವಾಚಿಸಿದರು. ಸಾಹಿತಿ ಚಂದ್ರಶೇಖರ ಇಟಗಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಎನ್. ಹಾದಿಮನಿ, ಕದಳಿ ವೇದಿಕೆ ಅಧ್ಯಕ್ಷೆ ಶಿವಗಂಗಾ ರಂಜಣಗಿ, ಪ್ರಭು ಮಾಲಗಿತ್ತಿಮಠ, ಸಂಗಮೇಶ ಹೊದ್ದೂರು ಉಪಸ್ಥಿತರಿದ್ದರು. ಲೇಖಕಿ ಲಲಿತಾ ಹೊಸವಾಟಿ ಅವರ ’ಬ್ಯೂಟಿ ಬೆಳ್ಳಕ್ಕಿ’ ಕೃತಿ ಬಿಡುಗಡೆ ಮಾಡಲಾಯಿತು.