ಶ್ರೀಮಂತರು- ಬಡವರ ನಡುವೆ ಸ್ಪರ್ಧೆ: ಅಂಜಲಿ

| Published : Mar 27 2024, 01:02 AM IST

ಶ್ರೀಮಂತರು- ಬಡವರ ನಡುವೆ ಸ್ಪರ್ಧೆ: ಅಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರನ್ನು ಮೋಸ ಮಾಡುತ್ತಿದ್ದ ಬಿಜೆಪಿಯವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಅಂಜಲಿ ನಿಂಬಾಳ್ಕರ ತಿಳಿಸಿದರು.

ಹೊನ್ನಾವರ: ಈ ಬಾರಿ ಲೋಕಸಭಾ ಚುನಾವಣೆ ಬಿಜೆಪಿ- ಕಾಂಗ್ರೆಸ್‌ ನಡುವೆ ಅಲ್ಲ. ಅದಾನಿ, ಅಂಬಾನಿಯಂಥ ಶ್ರೀಮಂತರು-ಬಡವರ ಮಧ್ಯೆ ನಡೆಯುವ ಚುನಾವಣೆ ಆಗಿರಲಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್‌ನಿಂದ ಮಂಗಳವಾರ ಸಾಯಂಕಾಲ ಹಮ್ಮಿಕೊಳ್ಳಲಾದ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜನರನ್ನು ಮೋಸ ಮಾಡುತ್ತಿದ್ದ ಬಿಜೆಪಿಯವರಿಗೆ ತಕ್ಕಪಾಠ ಕಲಿಸಬೇಕಿದೆ. ಜನರಿಗೆ ಅನ್ಯಾಯವೆಸಗಿದ ಮೋಸದ ಜನರ ವಿರುದ್ಧ ದೇಶವನ್ನು ರಕ್ಷಿಸುವ ನ್ಯಾಯ ಕೊಡಿಸುವವರ ಕಾಂಗ್ರೆಸ್ ಚುನಾವಣೆ ಆಗಿದೆ. ಹಾಗಾಗಿ ಇದು ಅನ್ಯಾಯ ಹಾಗೂ ಮೋಸದ ವಿರುದ್ಧ ಈ ಬಾರಿಯ ಚುನಾವಣೆ ನಡೆಯಲಿದೆ. ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಂಕಾಳು ವೈದ್ಯ ಮಾತನಾಡಿ, ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಬಡವರಿಗಾಗಿ ನೀಡಿದ ಯೋಜನೆ ಏನು ಇಲ್ಲ. ದೇಶವನ್ನು ಕೆಟ್ಟ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಬಿಜೆಪಿಗರು ಕೇವಲ ನೂರು ದಿನ ಕೊಡಿ, ಕಪ್ಪುಹಣ ತಂದು ಅದರಿಂದ ಅಭಿವೃದ್ಧಿ ಮಾಡುತ್ತೇವೆ, ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕುತ್ತೇವೆ ಎಂದಿದ್ದರು. ಹತ್ತು ವರ್ಷ ಕೊಟ್ಟರೂ ಒಂದು ರುಪಾಯಿ ಕಪ್ಪುಹಣವು ತಂದಿಲ್ಲ ಎಂದರು‌.

ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಆರ್.ಎಚ್. ನಾಯ್ಕ, ಸತೀಶ್ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ವಾಮನ್ ನಾಯ್ಕ, ಐವಿ ನಾಯ್ಕ, ಪುಷ್ಪಾ ನಾಯ್ಕ, ವನಿತಾ ನಾಯ್ಕ, ಉಷಾ ನಾಯ್ಕ, ಗಣಪಯ್ಯ ಗೌಡ, ಕೃಷ್ಣ ಗೌಡ, ಅಣ್ಣಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.