ಸಾರಾಂಶ
ಯುವಕರೇ ದೇಶದ ಸಂಪತ್ತಾಗಿರುವುದರಿಂದ ವಿಶೇಷವಾದ ಔದ್ಯೋಗಿಕ ಕೌಶಲ್ಯ ಬೆಳೆಸಿಕೊಂಡು ಭವಿಷ್ಯದಲ್ಲಿ ಶ್ರೇಷ್ಠ ಉದ್ಯಮಿಗಳಾಗಿ ಹೊರ ಹೊಮ್ಮಲಿ
ಗದಗ: ಅಧುನಿಕ ಯುಗದಲ್ಲಿ ಸತತ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಲ್.ಎಸ್. ಪಾಟೀಲ ಹೇಳಿದರು.
ಅವರು ಕಾಲೇಜಿನ ವಾಣಿಜ್ಯ ವಿಭಾಗದಿಂದ ಏರ್ಪಡಿಸಲಾಗಿದ್ದ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಉಪಪ್ರಾಚಾರ್ಯ ಎಸ್.ಜಿ. ಉಳಿಗೇರ ಮಾತನಾಡಿ, ಯುವಕರೇ ದೇಶದ ಸಂಪತ್ತಾಗಿರುವುದರಿಂದ ವಿಶೇಷವಾದ ಔದ್ಯೋಗಿಕ ಕೌಶಲ್ಯ ಬೆಳೆಸಿಕೊಂಡು ಭವಿಷ್ಯದಲ್ಲಿ ಶ್ರೇಷ್ಠ ಉದ್ಯಮಿಗಳಾಗಿ ಹೊರ ಹೊಮ್ಮಲಿ ಎಂದರು.ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಎನ್. ಶ್ಯಾಗೋಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಮಹತ್ವದ್ದಾಗಿದ್ದು, ಅಧ್ಯಯನಶೀಲತೆ, ಕರ್ತವ್ಯ ಪ್ರಜ್ಞೆ ಮತ್ತು ನೈತಿಕ ಮೌಲ್ಯ ಬೆಳೆಸಿಕೊಂಡು ವಿಶೇಷ ಸಾಧನೆಗೈದು ಮಹಾವಿದ್ಯಾಲಯಕ್ಕೆ ಕೀರ್ತಿ ತನ್ನಿ ಎಂದರು.
ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.ಯೋಜನಾ ವಿಭಾಗದ ಮುಖ್ಯಸ್ಥ ಡಿ.ಎಂ. ಡಂಕೇದ, ಉಪನ್ಯಾಸಕ ಎಂ.ಬಿ. ಅಕ್ಕಿ, ಡಾ.ಎಂ.ಬಿ. ಮಡ್ಡಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಅನಿಷಾ ಅಣ್ಣಿಗೇರಿ ಮತ್ತು ಸಂಗಡಿಗರಿಂದ ಪ್ರಾರ್ಥಿಸಿದರು. ಪ್ರೀತಿ ವರದಾ ಸ್ವಾಗತಿಸಿದರು, ಶೋಭಾ ಸಣ್ಣಪ್ಯಾಟಿ ನೀರೂಪಿಸಿದರು. ಆಶಾ ಹಿರೇಮನಿ ವಂದಿಸಿದರು.