ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ತಾಲೂಕಿನ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮತ್ತು ಬಿಇಒ ಕಚೇರಿಯಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿವಾಕರ್ ವಿರುದ್ಧ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಬ್ಬರು ಜಂಟಿ ನಿರ್ದೇಶಕರಿಗೆ ದೂರು ನೀಡಿ ಪತ್ರ ಬರೆದ ಹಿನ್ನೆಲೆ ಸರ್ಕಾರಿ ನೌಕರರ ಸಂಘದಲ್ಲಿ ದೂರು ನೀಡಿದವರ ವಿರುದ್ಧ ಅಪಸ್ವರ ತಾರಕಕ್ಕೇರಿದ್ದು ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿದೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್, ಜಿಲ್ಲಾ ಉಪಾಧ್ಯಕ್ಷ ನಂದೀಶ್ ಅವರು ದಿವಾಕರ್ ವಿರುದ್ಧ ಜಂಟಿ ನಿರ್ದೇಶಕರಿಗೆ ಮಾ.15 ರಂದು ದೂರು ನೀಡಿದ್ದು, ಪ್ರಥಮ ದರ್ಜೆ ಸಹಾಯಕರೂ, ಸರ್ಕಾರಿ ನೌಕರರ ಸಂಘದ ದಿವಾಕರ್ ಅವರು ಕಚೇರಿಗೆ ರಾಜಕೀಯ
ಪಟಭದ್ರ ಹಿತಾಸಕ್ತಿಯಿಂದ 15 ವರ್ಷಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇವರು ಶಿಕ್ಷಕರ ಮಾಹಿತಿಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಿರುವುದಿಲ್ಲ, ನೌಕರರ ಸಂಘದ ನಿರ್ದೇಶಕರಾಗಿರುವ ಹಿನ್ನೆಲೆ ತುರ್ತಾಗಿ ಯಾವುದೇ ಮಾಹಿತಿ ಬೇಕಾದರೂ ನೀಡುವ ನಿಟ್ಟಿನಲ್ಲಿ ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ, ಟಿಡಬ್ಲ್ಯೂಎಫ್ ವತಿಯಿಂದ ಬಿಡುಗಡೆಯಾದ ಶಿಕ್ಷಕರ ದಿನಾಚರಣೆಯ ಅನುದಾನ 20 ಸಾವಿರ ರು.ಗಳನ್ನು ಇನ್ನು ಸಹ ನೀಡಿರುವುದಿಲ್ಲ, ಕಚೇರಿಗೆ ಬರುವ ಶಿಕ್ಷಕರನ್ನು ಅಲೆದಾಡಿಸುತ್ತಿದ್ದು, ಇವರನ್ನು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ವರ್ಗಾಯಿಸಬೇಕೆಂದು ಪುಟಗಳ ಲಿಖಿತ ದೂರನ್ನು ಸಲ್ಲಿಸಿದ್ದಾರೆದೂರಿನ ಹಿನ್ನೆಲೆ ನೌಕರರ ಸಂಘ ಗರಂ:
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಅವರ ಲಿಖಿತ ದೂರಿನ ಹಿನ್ನೆಲೆ ತಾಲೂಕು ಸರ್ಕಾರಿ ನೌಕರರ ಸಂಘ ತೀವ್ರ ಗರಂಮ್ಮಾಗಿದ್ದು ದೂರುದಾರರು ಮೊದಲು ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಲಿ, ಪ್ರಾಥಮಿಕ ಶಾಲಾ ಶಿಕ್ಷಕರನನ್ನು ಬೆದರಿಸುವುದನ್ನು ಅವರು ಮೊದಲು ಬಿಡಲಿ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.ದಿವಾಕರ್ ಉತ್ತಮ ಕೆಲಸಗಾರ, ಆತ ಇವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂದು ಈ ರೀತಿ ಸ್ಥಳೀಯ ಹಾಗೂ ಜಿಲ್ಲಾ ಹಂತದ ಅಧಿಕಾರಿಗಳನ್ನು ಕಡೆಗಣಿಸಿ ನೇರವಾಗಿ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿದೆ. ಏಕಾಏಕಿ ಇವರು ಪ್ರಾಪರ್ ಚಾನಲ್ ಮೂಲಕ ತೆರಳಿಲ್ಲ, ಅವರದ್ದು ತಪ್ಪಿದ್ದರೆ ಮೊದಲು ಬಿಇಒರಿಗೆ ದೂರು ನೀಡಬಹುದಿತ್ತು, ಅದನ್ನ ಬಿಟ್ಟು ಹಿರಿಯ ಅಧಿಕಾರಿಗಳಿಗೆ ನೇರವಾಗಿ ದೂರು ನೀಡಿದ್ದು ಸರಿಯಲ್ಲ, ದೂರಿನ ಹಿನ್ನೆಲೆ ಬಿಇಒ ಅವರು ವಿಚಾರಣೆ ಕೈಗೊಳ್ಳಲಿ, ದಿವಾಕರ್ ತಪ್ಪು ಮಾಡಿದ್ದರೆ ಕ್ರಮವೂ ಆಗಲಿ, ಆದರೆ ದೂರುದಾರರು ಸಹ ಸರಿಯಾಗಿ ಶಾಲೆಗೆ ತೆರಳುತ್ತಾರಾ? ಎಂಬುದನ್ನು ಬಿಇಒ ಅವರು ಖುದ್ದು ಪರಿಶೀಲಿಸಬೇಕಿದೆ ಎಂದು ನೌಕರರ ಸಂಘ ಹೇಳಿದೆ ಎನ್ನಲಾಗಿದೆ.
ಇಂದು ಬಿಇಒ ವಿಚಾರಣೆ:ಈ ಪ್ರಕರಣದಲ್ಲಿ ದೂರುದಾರರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ತೀವ್ರ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ತಮ್ಮಗಮನಕ್ಕೆ ತರದೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಸಂಬಂಧ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ನನಗೆ ದೂರು ನೀಡಲೂಬಹುದಿತ್ತು, ಅದನ್ನು ಬಿಟ್ಟು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ವಿಚಾರದ ಕುರಿತು ತಮ್ಮ ಆಪ್ತರಲ್ಲಿ ಚರ್ಚಿಸಿದ್ದು ತೀವ್ರ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದ ಹಿರಿಯ ಅಧಿಕಾರಿಗಳು ನಿಮ್ಮ ಹಂತದಲ್ಲೇ ವಿಚಾರಣೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚಿಸಿದ ಬೆನ್ನಲ್ಲೆ ಏ.7ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಅವರು
ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.ನೌಕರನ ಸೇವೆ ಉತ್ತಮ; ಬಿಇಒ ಸರ್ಟಿಪಿಕೇಟ್:
ಸರ್ಕಾರಿ ನೌಕರರ ಸೇವಾ ಪುಸ್ತಕದಲ್ಲಿ ನೌಕರ ದಿವಾಕರ್ ಸೇವೆ ತೖಪ್ತಕರವಾಗಿದೆ ಎಂದು ಕಳೆದ ಮಾರ್ಚ್ ತಿಂಗಳಲ್ಲೆಕ್ಷೇತ್ರ ಶಿಕ್ಷಣಾಧಿಕಾರಿಗಳು ನಮೂದಿಸಿದ್ದು ನೌಕರನ ವಿರುದ್ಧ ಇಲ್ಲಿವರೆಗೆ ಯಾವುದೇ ದೂರುಗಳು ಸಹ ಬಿಇಒ ಕಚೇರಿಗೆ ಬಂದಿಲ್ಲ ಎನ್ನಲಾಗಿದೆ.
ಏತನ್ಮದ್ಯೆ ಸೋಮವಾರ ಪ್ರಾ. ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಬ್ಬರ ದೂರಿನ ಹಿನ್ನೆಲೆ ವಿಚಾರಣೆ ನಡೆಯುತ್ತಿದ್ದು, ಈ ಬೆಳವಣಿಗೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.---
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಜಂಟಿ ನಿರ್ದೇಶಕರಿಗೆ ದಿವಾಕರ್ಉತ್ತಮ ರೀತಿ, ಕೆಲಸ ಕಾರ್ಯನಿರ್ವಹಿಸುತ್ತಿಲ್ಲ, ಶಿಕ್ಷಕರ ಕೆಲಸ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ ಎಂಬುದನ್ನು ನನ್ನ ಗಮನಕ್ಕೆ ತಾರದೆ
ದೂರು ನೀಡಿದ್ದು ಈ ಸಂಬಂಧ ಜಂಟಿ ನಿರ್ದೇಶಕರು ನಿಮ್ಮ ಹಂತದಲ್ಲೇ ವಿಚಾರಣೆ ನಡೆಸುವಂತೆ ಪತ್ರ ಕಳುಹಿಸಿದ್ದಾರೆ. ದಿವಾಕರ್ ಒಬ್ಬ ಉತ್ತಮ ಕೆಲಸಗಾರ. ದೂರುದಾರರು ಸಹ ಪ್ರಾಪರ್ ಚಾಲನ್ ಬಿಟ್ಟು ಹೋಗಿದ್ದು, ಈ ಸಂಬಂಧ ಪಾರದರ್ಶಕ ವಿಚಾರಣೆಯನ್ನು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸೋಮವಾರ (ಏ.7ರಂದು) ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವೆ.- ಶ್ರೀಮತಿ ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೊಳ್ಳೇಗಾಲ.