ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಸಭಾ ವ್ಯಾಪ್ತಿಯಲ್ಲಿ ಸ್ಪಚ್ಛತೆ ಇಲ್ಲ, ಕಸವಿಲೇವಾರಿ ಆಗುತ್ತಿಲ್ಲ. ಕುಡಿಯುವ ನೀರು ಸಮರ್ಪಕವಾಗಿಲ್ಲ, ಚರಂಡಿಗಳೆಲ್ಲಾ ಹೂಳು ತುಂಬಿ ನಾರುತ್ತಿವೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ೧೫ನೇ ಹಣಕಾಸು ಅನುದಾನವನ್ನು ಸಮರ್ಪಕವಾಗಿ ಬಳಸಿ ಆದ್ಯತೆ ಮೇಲೆ ಕಾಮಗಾರಿಗಳನ್ನು ಮುಗಿಸಿ ಎಂದು ನಗರಸಭಾ ಸದಸ್ಯರು ಆಗ್ರಹಿಸಿದರು.ನಗರದ ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ನಗರಸಭಾ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ₹೪೨೫ ಲಕ್ಷ ಕ್ರಿಯಾ ಯೋಜನೆ ಕಾಮಗಾರಿಗೆ ಅನುಮೋದನೆ ನೀಡಿ ಆಗ್ರಹಿಸಿದರು.
ವಿಶೇಷ ಸಭೆ ಪ್ರಾರಂಭವಾಗುತ್ತಿದ್ದಂತೆ ಒಕ್ಕೊಲರಿನಿಂದ ಎಲ್ಲಾ ಸದಸ್ಯರು ನಮ್ಮ ಯಾವ ಮನವಿ ಹಾಗೂ ದೂರಿಗೂ ಬೆಲೆ ಇಲ್ಲ, ೨ ರಿಂದ ೩ ತಿಂಗಳಾದರೂ ಕಸ ವಿಲೇವಾರಿಯಾಗಿಲ್ಲ. ಚರಂಡಿಗಳು ಸ್ವಚ್ಛವಾಗಿಲ್ಲ, ಕುಡಿಯುವ ನೀರಂತೂ ೨೦ ದಿನವಾದರೂ ಬರುವುದಿಲ್ಲ ಎಂದು ದೂರಿದರು.ಇದಕ್ಕೆ ಸಂಬಂಧಪಟ್ಟವರನ್ನು ಕೇಳಿದರೆ, ಕಾರ್ಮಿಕರಿಲ್ಲ, ಕಸವಿಲೇವಾರಿ ವಾಹನಗಳಿಲ್ಲ, ಪಂಪ್‌ಹೌಸ್‌ನಲ್ಲಿ ರಿಪೇರಿ ಎಂಬ ಉದಾಸೀನ ಉತ್ತರ ಕೊಡುತ್ತಾರೆ. ಕೆಲವು ಸಿಬ್ಬಂದಿ ನಾಮಕಾವಸ್ಥೆಗೆ ಮಾತ್ರ ಇದ್ದು, ಸಂಬಳ ಪಡೆಯುತ್ತಿದ್ದಾರೆ. ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ, ಕೆಲವರು ಕಾವೇರಿ ನೀರು ಮಾತ್ರ ಬಿಡಲು ಬರುತ್ತಿದ್ದಾರೆ, ಬೋರ್‌ವೆಲ್ ಹತ್ತಿರ ಬರುವುದಿಲ್ಲ, ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ನಗರಸಭಾ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಪೋಲಾಗುತ್ತಿರುವ ನೀರನ್ನು ತಪ್ಪಿಸಲು ಎಂಜಿನಿಯರ್ ಕೊರತೆ ಇತ್ತು , ಈಗ ನಾಗರಾಜು ಬಂದಿದ್ದಾರೆ, ಮುಂದೆ ಈಗಾಗದಂತೆ ತುರ್ತು ಕ್ರಮ ಕೈಗೊಂಡು ಎಲ್ಲಾ ವಾರ್ಡುಗಳಲ್ಲಿ ಪೈಪ್ ಒಡೆದು ಪೋಲಾಗುತ್ತಿರುವ ನೀರನ್ನು ತಪ್ಪಿಸಿ ಸಮರ್ಪಕ ಕುಡಿಯುವ ನೀರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಪೌರಾಯುಕ್ತರಾಗಿದ್ದ ರಾಮದಾಸ್ ಅವರ ವರ್ತನೆಯಿಂದ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ, ನಗರಸಭೆಯ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿರುವ ಕಾರಣದಿಂದ ಇಲ್ಲಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಮುಂದೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಬಾಕಿ ಇರುವ ಕಡತಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಕ್ರಮಕೈಗೊಳ್ಳಿ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಿ ಈ ನಿಮ್ಮ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಪ್ರಭಾರ ಆಯುಕ್ತ ಪ್ರಕಾಶ್‌ಗೆ ಸದಸ್ಯರು ಮನವಿ ಮಾಡಿದರು.
ಒಳ್ಳೆಯ ಸಲಹೆ ನೀಡಿದ್ದೀರಿ ನಾಳೆಯಿಂದಲೆ ಈ ಬಗ್ಗೆ ಗಮನಹರಿಸುವುದಾಗಿ ಪ್ರಭಾರ ಆಯುಕ್ತ ಪ್ರಕಾಶ್ ಹೇಳಿದರು.೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದಡಿ ಚಾಮರಾಜನಗರ ನಗರಸಭೆಗೆ ಹಂಚಿಕೆಯಾಗಿರುವ ₹೪೨೫.೦೦ ಲಕ್ಷಗಳಿಗೆ ತಯಾರಿಸಿರುವ ಪರಿಷ್ಕೃತ ಕ್ರಿಯಾಯೋಜನೆಗೆ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.
೧೫ನೇ ಹಣಕಾಸು ಬಳಕೆ ಮಾರ್ಗಸೂಚಿಗಳಲ್ಲಿ ಇರುವ ೧೫ ಉದ್ದೇಶಗಳ ಪೈಕಿ ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದ ಕ್ರಿಯಾಯೋಜನೆಯಲ್ಲಿ ಸೇರಿರುವ ರಸ್ತೆ ಸೇತುವೆ ಮತ್ತು ಪಾದಚಾರಿ ಮಾರ್ಗಗಳು, ಮಳೆ ನೀರು ಚರಂಡಿ ನಿರ್ಮಾಣ, ಬೀದಿ ದೀಪ ಹಾಗೂ ಸ್ಮಶಾನ/ಚಿತಾಗಾರ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ೨೦೨೫-೨೬ ನೇ ಸಾಲಿನ ಮುಕ್ತ ಅನುದಾನದ ಅವಶ್ಯಕತೆ ಇದ್ದು, ಉಳಿದ ಉದ್ದೇಶಗಳಿಗೆ ೨೦೨೫-೨೬ ಸಾಲಿಗೆ ಅನುದಾನದ ಅವಶ್ಯಕತೆ ಇರುವುದಿಲ್ಲ ಮತ್ತು ಈ ಕ್ರಿಯಾಯೋಜನೆಯಲ್ಲಿ ಸೇರಿಸಿರುವ ಕಾಮಗಾರಿಗಳು ಇನ್ನಿತರೆ ಯೋಜನೆಗಳ ಅಥವಾ ನಗರಸಭಾ ನಿಧಿಯ ಕ್ರಿಯಾ ಯೋಜನೆಗಳಲಿ ಕೈಗೊಳ್ಳಲಾಗಿರುವುದಿಲ್ಲವೆಂದು ದೃಢೀಕರಿಸಲಾಯಿತು.ಸದಸ್ಯರಾದ ಸುದರ್ಶನಗೌಡ, ಅಬ್ರಹಾರ್ ಅಹಮದ್, ಮಹೇಶ್, ಬಸವಣ್ಣ, ಭಾಗ್ಯಮ್ಮ ನೀಲಮ್ಮ, ಕುಮುದಾ ಗಾಯಿತ್ರಿ, ಖಲೀಲ್‌ವುಲ್ಲಾ, ಉಪಾಧ್ಯಕ್ಷೆ ಮಮತಾ, ಪ್ರಭಾರ ಪೌರಾಯುಕ್ತ ಪ್ರಕಾಶ್, ಸದಸ್ಯರು ಹಾಗೂ ನಗರಸಭಾ ಸಿಬ್ಬಂದಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))