ಸಾರಾಂಶ
ಕಳಸಾ-ಬಂಡೂರಿ ನಾಲಾ ಯೋಜನೆ ಆರಂಭಿಸಬೇಕು. ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ, ಶಾಶ್ವತ ಕುಡಿಯುವ ನೀರಿನ ಯೋಜನೆ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದಿಂದ ಸೋಮವಾರ ವಿಧಾನ ಸೌಧ ಎದುರಿನ ಲ್ಲಿ ಪ್ರತಿಭಟನೆ .
ಬೆಳಗಾವಿ : ಕಳಸಾ-ಬಂಡೂರಿ ನಾಲಾ ಯೋಜನೆ ಆರಂಭಿಸಬೇಕು. ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ, ಶಾಶ್ವತ ಕುಡಿಯುವ ನೀರಿನ ಯೋಜನೆ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದಿಂದ ಸೋಮವಾರ ವಿಧಾನ ಸೌಧ ಎದುರಿನ ಕೊಂಡಸಕೊಪ್ಪ ಹೊರವಲಯದಲ್ಲಿನ ನಿರ್ಮಿಸಲಾದ ಟೆಂಟ್‌ನಲ್ಲಿ ಪ್ರತಿಭಟನೆ ನಡೆಸಿದರು.
ರೈತರ ಸಾಲಮನ್ನಾ. ಕಬ್ಬು ತೂಕದಲ್ಲಿ ರೈತರಿಗೆ ಅನ್ಯಾಯ ಕಾರ್ಖಾನೆಗಳು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗಳಿಗೆ ಟೋಲ್ ಸಂಗ್ರಹ ಕೈಬಿಡಬೇಕು. ಖಾನಾಪುರ ತಾಲೂಕಿನ ಕೇರವಾಡ ಗ್ರಾಪಂ ವ್ಯಾಪ್ತಿಯ ಸುರಪುರ ಕೇರವಾಡವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು.
ಕಕ್ಕೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢಶಾಲೆ, ಪಪೂ ಕಾಲೇಜು ಮಂಜೂರು ಮಾಡಬೇಕು. ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಿಂದ ಧಾರವಾಡ ತಾಲೂಕಿನ ಹುಲಿಕೇರಿ ಗ್ರಾಮದವರೆಗೆ ರಸ್ತೆ ನಿರ್ಮಿಸಬೇಕು. ಅರಣ್ಯ ಭೂ ಆಗುವಳಿ ಮಾಡಿದವರಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ ಗುಂಡೂರಾವ, ಶಾಸಕ ಎನ್.ಎಚ್.ಕೋನರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಸಿಎಂ ಜೊತೆಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಸುರಪುರ-ಕೆರವಾಡ ಅಡವಿ ಸಿದ್ದೇಶ್ವರ ಮಠದ ಪ್ರಭುದೇವರು, ರಾಜ್ಯಾಧ್ಯಕ್ಷ ಹನುಮಂತ ದೇವಗಿಹಳ್ಳಿ, ಉಪಾಧ್ಯಕ್ಷ ಕಿಶೋರ ಮಿಠಾರಿ, ಜಿಲ್ಲಾ ಸಂಚಾಲಕ ದತ್ತಾ ಬಿಡಕರ, ಮುಖಂಡರಾದ ಮಲ್ಲಪ್ಪ ಪರಕನಟ್ಟಿ, ಯಲ್ಲಪ್ಪ ಬೆಳಗಾಂವಕರ, ರಮೇಶ ವೀರಾಪುರ, ಮಹಾಂತೇಶ ಹಟ್ಟಿಹೊಳಿ, ಪಾಸ್ಕಲ್ ಸೋಜ್, ರಮೇಶ ಬೋಳೇರ, ಅಂಥೋನ್ ಸೋಜ್, ರಮೇಶ ವೀರಾಪುರ, ಭಿಷ್ಟಪ್ಪ ಸಂಬಳಿ ಇತರರು ಇದ್ದರು.