ಸಾರಾಂಶ
ಆಸ್ಪತ್ರೆ ಒಳ ಆವರಣದಲ್ಲಿ ಟ್ರಾನ್ಸ್ ಫಾರ್ಮರ್ ಬದಲಾವಣೆ ಮಾಡಿ ಪಾರ್ಕಿಂಗ್ ನಿರ್ಮಾಣ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವುದು, ರೋಗಿಗಳ ಸಂಬಂಧಿಸಿದ ವಾಹನಗಳು ಮಾತ್ರ ಆಸ್ಪತ್ರೆ ಒಳಗೆ ಪ್ರವೇಶ ಮಾಡುವುದು, ಖಾಸಗಿ ವಾಹನಗಳು ಕಂಡು ಬಂದರೇ ಸೀಜ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಪೂರ್ಣಗೊಳಿಸದಿದ್ದರೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆಗೆ ಬೇಕಾದ ಅಗತ್ಯ ಬೇಡಿಕೆ, ಬದಲಾವಣೆಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗಳ್ಳಲಾಗಿದೆ ಎಂದರು.
ಆಸ್ಪತ್ರೆ ಒಳ ಆವರಣದಲ್ಲಿ ಟ್ರಾನ್ಸ್ ಫಾರ್ಮರ್ ಬದಲಾವಣೆ ಮಾಡಿ ಪಾರ್ಕಿಂಗ್ ನಿರ್ಮಾಣ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವುದು, ರೋಗಿಗಳ ಸಂಬಂಧಿಸಿದ ವಾಹನಗಳು ಮಾತ್ರ ಆಸ್ಪತ್ರೆ ಒಳಗೆ ಪ್ರವೇಶ ಮಾಡುವುದು, ಖಾಸಗಿ ವಾಹನಗಳು ಕಂಡು ಬಂದರೇ ಸೀಜ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಆಸ್ಪತ್ರೆ ಮುಂಭಾಗ ಆಟೋ ನಿಲ್ದಾಣ ಇರುವುದರಿಂದ ತುರ್ತು ಚಿಕಿತ್ಸಾ ವಾಹನಗಳು ಸಂಚರಿಸಲು ಅಡೆತಡೆಗಳು ಉಂಟಾಗುತ್ತದೆ. ತಕ್ಷಣದಲ್ಲಿಯೇ ಆಟೋ ನಿಲ್ದಾಣವನ್ನು ಸ್ಥಳಾಂತರ ಮಾಡಿಸುವುದರ ಬಗ್ಗೆ ಆಡಳಿತಾಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಆಸ್ಪತ್ರೆಗೆ ಆಗುತ್ತಿರುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು, ಮುಂದಿನ ದಿನಗಳಲ್ಲಿ ಸಿಆರ್‌ಎಸ್ ಅನುದಾನದಲ್ಲಿ ಹೊಸ ತುರ್ತು ಚಿಕಿತ್ಸಾ ವಾಹನ ನೀಡಲಾಗುವುದು, ಸ್ವಚ್ಛತೆಗೆ ಬಗ್ಗೆ ಪುರಸಭೆ ಸಹಯೋಗದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ, ಆಸ್ಪತ್ರೆಗೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.ಈ ವೇಳೆ ಉಪವಿಭಾಗಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಎಸ್.ವಿ ಲೊಕೇಶ್, ತಾಪಂ ಇಒ ಎಚ್.ಜಿ ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಪಿ.ವೀರಭದ್ರಪ್ಪ, ಆಡಳಿತಾಧಿಕಾರಿ ಎಂಡಿ ಡಾ.ಸಂಜಯ್, ಸೆಸ್ಕಾಂ ಎಇಇ ಪ್ರೇಮ್‌ಕುಮಾರ್ ಸೇರಿದಂತೆ ಇತರರು ಇದ್ದರು.