ಸಾರಾಂಶ
ನಗರದ ಹೊರ ವಲಯದಲ್ಲಿ ಹಾದು ಹೋಗುವ ತುಮಕೂರು - ಶಿರಾ– ಮುಂಬೈ ರಾಷ್ಟ್ರೀಯ ಹೆದ್ದಾರಿ (ಎನ್.ಎಚ್.) 48 ರಲ್ಲಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ನಿರ್ಮಾಣವಾಗುತ್ತಿರುವ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ತಕ್ಷಣವೇ ಮುಗಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಸದಸ್ಯರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಹೊರ ವಲಯದಲ್ಲಿ ಹಾದು ಹೋಗುವ ತುಮಕೂರು - ಶಿರಾ– ಮುಂಬೈ ರಾಷ್ಟ್ರೀಯ ಹೆದ್ದಾರಿ (ಎನ್.ಎಚ್.) 48 ರಲ್ಲಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ನಿರ್ಮಾಣವಾಗುತ್ತಿರುವ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ತಕ್ಷಣವೇ ಮುಗಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಸದಸ್ಯರು ಪ್ರತಿಭಟನೆ ನಡೆಸಿದರು.ಈ ರಸ್ತೆಯು ಬಹುತೇಕ ಕರ್ನಾಟಕ ರಾಜ್ಯ ಕೇಂದ್ರದಿಂದ ಮೂರು ನಾಲ್ಕು ರಾಜ್ಯಗಳು ಹಾಗೂ 17-18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.ಇಲ್ಲಿ ಪ್ರತಿನಿತ್ಯ ಪ್ರಯಾಣಿಸುವವರ ಸಂಖ್ಯೆ ಹತ್ತಾರು ಸಾವಿರ, ಅಲ್ಲದೆ ಸರಕು ಸಾಗಾಣಿಕೆಯ ವಾಹನಗಳ ಜೊತಗೆ ಸ್ಥಳೀಯವಾಗಿ ದಿನ ನಿತ್ಯ ತುಮಕೂರು ನಗರಕ್ಕೆ ಬರುವ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ನೌಕರರು ಪ್ರಯಾಣಿಸುವವರು ಸದಾ ಟ್ರಾಫಿಕ್ ನಲ್ಲಿ ಮಳೆ, ಕೊಚ್ಚೆ ಗುಂಡಿಗಳಲ್ಲಿ ಜೀವ ಹಿಡಿದು ಈ ದಾರಿಯಲ್ಲೆ ಪ್ರಯಣಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅದರೆ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಂಪರ್ಕ ಸೇತುವೆ ಕೆಲಸ ಆರಂಭಿಸಿ ವರ್ಷಗಳೇ ಕಳೆದಿದೆ. ಈ ಕಾಮಗಾರಿಯನ್ನು ನಿಗದಿತ ಕಾಲಾವಧಿಯೊಳಗೆ ಮುಗಿಸದೆ ಅರ್ಧ ಕೆಲಸ ಮಾಡಿ ಕಳೆದ 6-7 ತಿಂಗಳಿನಿಂದ ಕೆಲಸ ಸ್ಥಗಿತ ಮಾಡಲಾಗಿದೆ ಎಂದರು.ಕಾಮಗಾರಿ ನಿಲ್ಲಿಸಿರುವುದರಿಂದ ಪ್ರತಿನಿತ್ಯ ಸಂಚರಿಸುವ ವಾಹನಗಳಿಗೆ ತುಂಬಾ ತೊಂದರೆಯಗಿದ್ದು ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಸಾರ್ವಜನಿಕರ ಮತ್ತು ಸ್ಥಳೀಯರ ಸಂಚಾರಕ್ಕಾಗಿ ಇರುವ ಸರ್ವೀಸ್ ರಸ್ತೆಯಲ್ಲಿ ಎಲ್ಲಾ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಈ ರಸ್ತೆಯು ಹದಗೆಟ್ಟಿವೆ ಎಂದಿದ್ದಾರೆ.ಭಾರಿ ವಾಹನಗಳು ಸಂಚರಿಸುವುದರಿಂದ ಗುಂಡಿ-ಹಳ್ಳಗಳು ಬಿದ್ದಿದ್ದು ರಸ್ತೆ ಕಿರಿದಾಗಿರುವುದರಿಂದ ವಾಹನಗಳು ಪರಸ್ಪರ ಟಚ್ ಆಗಿ ವಾಹನ ಸವಾರರ ನಡುವೆ ಗಲಾಟೆಗಳು ಸರ್ವೆಸಾಮಾನ್ಯವಾಗಿ ನಡೆದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಸದಾ 2-3 ತಾಸುಗಳು ಜನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದು ಪರಿಪಾಟವಾಗಿದೆ. ಮಳೆ ಬಂದಾಗ, ವಾರದ ಕೊನೆಯಲ್ಲಿ ಮತ್ತು ಹಬ್ಬ-ಹರಿದಿನಗಳಲ್ಲಿ 8-10 ಕೀಲೋಮಿಟರ್‌ಗಳಷ್ಟು ಟ್ರಾಫಿಕ್‌ಜಾಮ್‌ಆಗುತ್ತಿದೆ. ಹಾಗಾಗಿ ಈ ಮೇಲ್ ಸೇತುವೆ ಕಾಮಗಾರಿ ಸೇರಿದಂತೆ ಮುಂಬೈವರೆಗೆ ಚಾಲ್ತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ನಿಗಧಿತ ಸಮಯದಲ್ಲಿ ಸಂಚಾರದ ಗುರಿ ತಲುಪವಂತೆ ಮಾಡಿ ಜೊತೆಗೆ ಸರ್ವೀಸ್ ರಸ್ತೆಯನ್ನು ಶೀಘ್ರವೆ ದುರಸ್ಥಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೂಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎ.ಲೋಕೇಶ್, ಜಿಲ್ಲಾ ಮುಖಂಡರಾದ ಬಿ.ಉಮೇಶ್, ಸಿಐಟಿಯು ಸುಜಿತ್ ನಾಯಕ್, ಷಣ್ಮಖಪ್ಪ, ರಂಗಧಾಮಯ್ಯ, ಕರ್ನ ಲಿರ್ಸ್ಕಾ ರ್ಮಿಕ ಸಂಘದ ಶಿವಕುಮಾರ್ ಸ್ವಾಮಿ, ಪುಟ್ಟೆಗೌಡರು, ಪೀಟ್ ವೇಲ್‌ಕಾರ್ಮಿಕರ ಸಂಘ ರಾಮಕೃಷ್ಣ, ಸಂಪತ್ತು, ಸ್ಥಳೀಯ ಆಟೋಚಾಲಕ ಮುಖಂಡ,ಮಂಜುನಾಥ್, ಪ್ರಾಂತರೈತ ಸಂಘದ, ಜಿಲ್ಲಾಅಧ್ಯಕ್ಷ,ಚನ್ನಬಸಣ್ಣ,ಪ. ಕಾರ್ಯಧರ್ಶಿ, ಅಜ್ಜಪ್ಪ, ಮಹಿಳಾ ಸಂಚಾಲಕಿ,ರಾಜಮ್ಮ, ಜನವಾಧಿ ಮಹಿಳಾ ಸಂಘಟನೆ ಸಂಚಾಲಕಿಟಿ. ಆರ್‌ಕಲ್ಪನಾ, ಸಿಪಿಐ ಗಿರೀಶ್ ಅವರು ಮಾತನಾಡಿದರು,ಮನವಿ ಪತ್ರ ಸ್ವಿಕರಿಸಲು ಅಗಮಿಸಿದ ಉಪ ತಹಸಿಲ್ದಾರ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ತಡವಾಗಿ ಬಂದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಲಾಗದ ಕನ್ನಡ ಬಾರದೆ ಪರೆದಾಡಿದ ಅಧಿಕಾರಿ ಕಡೆಗೆ ಕನ್ಸಲ್‌ಟೆಂಟ್ ಸಹಾಯಕ್ಕೆ ಬಂದರು.ಪ್ರತಿಭಟನಕಾರರ ಒತ್ತಾಯಕ್ಕೆ ಮಣಿದು ಮುಂದಿನ ಮೂರು ಧಿನಗಳ ಗುಂಡಿಗಳಿಂದ ತುಂಭಿರುವ ರಸ್ತೆಗೆ ಡಾಂಬಾರಿಕಣ ಮಾಡಿಸುವ ಭರವಸೆ ಜೊತೆಗೆ ಮೇಲ್ಸೇತುವೆ ಕೆಲಸಕ್ಕೆ ತಕ್ಷಣ ಚಾಲನೆ ನೀಡುವ ಭರವಸೆ ನೀಡಿದ್ದಾರೆ. ಮೂರು ದಿನಗಳಲ್ಲಿ ಡಾಂಬರೀಕಣ ಮಾಡದಿದ್ದಲ್ಲಿ ಮತ್ತೆ ಸ್ಥಳೀರ ಸಹಕಾರದಿಂದ ಚಳುವಳಿ ಉಗ್ರಗೊಳಿಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.