ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರಸಭೆ ವ್ಯಾಪ್ತಿಯಲ್ಲಿ ಬಾಕಿಯಿರುವ ನಗರೋತ್ಥಾನ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಕೋಲಾರ ಮೂಲದ ಗುತ್ತಿಗೆದಾರ ಎ.ಜಿ ನಾರಾಯಣಸ್ವಾಮಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ತಾಕೀತು ಮಾಡಿದ್ದು, ಒಂದು ವೇಳೆ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ಸೂಚನೆ ನೀಡಿದರು.ಕೆಜಿಎಫ್‌ನ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಭೇಟಿ ನೀಡಿ ನಗರತೋತ್ಥಾನ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಕಾಮಗಾರಿಗಳ ಪರಿಶೀಲನೆ ನಡೆಸಿದ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
6 ಕೋಟಿ ಮೊತ್ತದ ಕಾಮಗಾರಿ ಬಾಕಿಗುತ್ತಿಗೆದಾರರ ಬಳಿ ಗುಣಮಟ್ಟದಲ್ಲಿ ರಾಜೀಯಾಗದೆ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಿ, ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಸಾರ್ವಜನಿಕರ ಸೇವೆಗೆ ನೀಡಬೇಕು. ಕೋಲಾರ ಮೂಲದ ಗುತ್ತಿಗೆದಾರ ೧೯ ಕೋಟಿ ರೂ.ಗಳ ನಗರೋತ್ಥಾನ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದ್ದು, ಈಗಾಗಲೇ ೧೩ ಕೋಟಿ ರೂ.ಗಳ ಕಾಮಗಾರಿ ಮುಗಿಸಿಕೊಟ್ಟಿದ್ದಾರೆ, ಇನ್ನೂ ೬ ಕೋಟಿ ರೂ.ಗಳ ಕಾಮಗಾರಿಗಳು ಬಾಕಿ ಇದೆ ಎಂದರು.
ಟೆಂಡರ್ ಅವಧಿ ಪೂರ್ಣಗೊಂಡಿದ್ದರೂ ನಗರದ ಹಲವೆಡೆ ಕಾಮಗಾರಿಗಳು ಬಾಕಿ ಇದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಗಾಂಧಿ ವೃತ್ತದಿಂದ ಉರಿಗಾಂಪೇಟೆ ಡಾಂಬರು ರಸ್ತೆ, ಬೆಮೆಲ್ ನಗರ, ಆಶೋಕ ನಗರದಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ವೀಕ್ಷಿಸಿದರು.ಪೂರ್ಣಗೊಳಿಸಲು ತಿಂಗಳ ಗಡುವುನಗರೋತ್ಥಾನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಟೆಂಡರ್ ಅವದಿ ಮುಗಿದಿದ್ದರೂ ಗುತ್ತಿಗೆದಾರ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇದ್ದ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು, ಈ ಹಿನ್ನಲೆಯಲ್ಲಿ ಗುತ್ತಿಗೆದಾರರಿಗೆ ಒಂದು ತಿಂಗಳ ಕಾಲಾವಕಾಶ ನಿಡಿದ್ದು, ಒಂದು ತಿಂಗಳ ಒಳಗೆ ಬಾಕಿ ಇರುವ ೬ ಕೋಟಿ ರೂಪಾಯಿಗಳ ನಗರೋತ್ಥಾನ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚನೆ ನಿಡಿದ್ದಾರೆ.ಕೋಲಾರದ ಯೋಜನಾಧಿಕಾರಿ ಕಚೇರಿಯ ಇಇ.ಶ್ರೀನಿವಾಸ್, ಪೌರಾಯುಕ್ತ ಪವನ್‌ಕುಮಾರ್, ನಗರಸಭೆ ಎಇಇ ಮಂಜುನಾಥ್ ಇದ್ದರು.