ಸಾರಾಂಶ
ದೇಶದ ಆತ್ಮನಿರ್ಭರತೆ ಅಡಿಯಲ್ಲಿ ಅರೋಮಾ ಮಿಷನ್ ಒಂದು ಮತ್ತು ಎರಡರ ಕಾರ್ಯವೈಖರಿ
ಕನ್ನಡಪ್ರಭ ವಾರ್ತೆ ಸುತ್ತೂರು
ಐಸಿಎಆರ್, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರು ಹಾಗೂ ಸಿಎಸ್‌ಐಆರ್ ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆ ಸಂಶೋಧನಾ ಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸುಗಂಧ ದ್ರವ್ಯ ಬೆಳೆಗಳ ವೈಜ್ಞಾನಿಕ ಬೇಸಾಯ ಹಾಗೂ ಸಂಸ್ಕರಣೆ ಕುರಿತು ಜಾಗೃತಿ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ದಿನೇಶ್ ಎ. ನಾಗೇಗೌಡ ಉದ್ಘಾಟಿಸಿ ಕೇಂದ್ರದಿಂದ ಹಮ್ಮಿಕೊಂಡಿರುವ ಸುಗಂಧದವ್ಯ ಸಸ್ಯಗಳ ತಳಿ ಸಂವರ್ಧನೆ, ಬೇಸಾಯ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತಾದ ಸಂಶೋಧನೆಗಳ ಬಗ್ಗೆ ಹಾಗೂ
ದೇಶದ ಆತ್ಮನಿರ್ಭರತೆ ಅಡಿಯಲ್ಲಿ ಅರೋಮಾ ಮಿಷನ್ ಒಂದು ಮತ್ತು ಎರಡರ ಕಾರ್ಯವೈಖರಿ ಕುರಿತಾಗಿಯೂ ರೈತರಿಗೆ ತಿಳಿಸಿದರು,ಅರೋಮಾ ಮಿಷನ್ ಮೂರರ ಅಡಿಯಲ್ಲಿ ರೈತರಿಗೆ ಸುಗಂಧದ್ರವ್ಯ ಸಸ್ಯಗಳ ಸುಧಾರಿತ ತಳಿಗಳು ಹಾಗೂ ಮೌಲ್ಯವರ್ಧನೆ ಕುರಿತು ಹೆಚ್ಚು ಹೊತ್ತು ನೀಡುತ್ತಿರುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ಆದಾಯ ಹೆಚ್ಚಿಸುವಂತಹ ಬೆಳೆಗಳಲ್ಲಿ ಸುಗಂಧದ್ರವ್ಯ ಬೆಳೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ತಿಳಿಸಿ, ರೈತರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕಡೆಗೆಹೆಚ್ಚು ಹೊತ್ತು ನೀಡಬೇಕೆಂದು ಕರೆಕೊಟ್ಟರು.ಬೆಂಗಳೂರಿನಿಂದ ಆಗಮಿಸಿದ ಹಿರಿಯ ವಿಜ್ಞಾನಿ ಡಾ. ಚನ್ನಯ್ಯ ಹಿರೇಮಠ್ ಅವರು ವಿವಿಧ ಸುಗಂಧದ್ರವ್ಯಗಳ ತಳಿಗಳು ಹಾಗೂ ತಳಿ ವಿಶೇಷತೆಗಳ ಕುರಿತಾಗಿ ಮಾಹಿತಿ ನೀಡಿದರು.
ತಾಂತ್ರಿಕ ಸಿಬ್ಬಂದಿ ಭಾಸ್ಕರನ್ ಅವರು ಸುಗಂಧದ್ರವ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಕುರಿತಾಗಿ ರೈತರಿಗೆ ತಿಳಿಸಿದರು.ಕೇಂದ್ರದ ಸಸ್ಯ ಸಂರಕ್ಷಣೆಯ ತಜ್ಞ ಡಾ.ವೈ.ಪಿ. ಪ್ರಸಾದ್ ನಿರೂಪಿಸಿದರು, ಬೇಸಾಯಶಾಸ್ತ್ರದ ವಿಷಯ ತಜ್ಞ ಶಾಮರಾಜ ಸ್ವಾಗತಿಸಿದರು. ಕೇಂದ್ರದ ಫಾರಂ ಮ್ಯಾನೇಜರ್ ಆದ ಶ್ರೀ ಗಂಗಪ್ಪ ಹಿಪ್ಪರಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಭಾಗವಹಿಸಿ ಮಾಹಿತಿ ಪಡೆದುಕೊಂಡರು.;Resize=(128,128))
;Resize=(128,128))