ಸಾರಾಂಶ
ಇತ್ತೀಚೆಗೆ ಜಿಲ್ಲೆಯ ಹನೂರಿನ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲ ಆಟೋಟಗಳಲ್ಲಿ ಗೆಲವು ಸಾಧಿಸುವ ಮೂಲಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇತ್ತೀಚೆಗೆ ಜಿಲ್ಲೆಯ ಹನೂರಿನ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲ ಆಟೋಟಗಳಲ್ಲಿ ಗೆಲವು ಸಾಧಿಸುವ ಮೂಲಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.100 ಮೀ. ಓಟ , 200 ಮೀ., ಓಟ 400 ಮೀ., 1500 ಮೀ. ಓಟದಲ್ಲಿ ಪ್ರಥಮ, ದ್ವಿತೀಯ 3000 ಮೀ. ಓಟದಲ್ಲಿ ತೃತೀಯ, ಖೋ ಖೋ ಪ್ರಥಮ, ವಾಲಿಬಾಲ್, ಪುಟ್ ಬಾಲ್, ಚೆಸ್ ದ್ವಿತೀಯ, ಗುಡ್ಡಗಾಡು ಓಟ ಪ್ರಥಮ, ದ್ವಿತೀಯ, ತೃತೀಯ, ಹಾಗೂ ಉದ್ದ ಜಿಗಿತ, ಎತ್ತರ ಜಿಗಿತ, ಭರ್ಚಿ ಎಸೆತ, ಹ್ಯಾಮರ್ ಥ್ರೋ, ಚಕ್ರ ಎಸೆತ ಪ್ರಥಮ, 4x100 ಮೀಟರ್ ರೀಲೆ, 4x400 ಮೀಟರ್ ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಪ್ರಾಂಶುಪಾಲರಿಂದ ಅಭಿನಂದನೆ: ಪ್ರಾಂಶುಪಾಲ ಎಂ.ಸೋಮಣ್ಣ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಭಾಗವಹಿಸಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ತಂದು ಕೊಟ್ಟಿರುವುದು ತುಂಬಾ ಸಂತಸ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ನಡೆಯುವ, ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚು ಸಾಧನೆ ಮಾಡಿ ಕಾಲೇಜು, ಜಿಲ್ಲೆಗೆ ಹೆಸರು ತರಲಿ ಎಂದು ಆಶಿಸಿದರು.
ನಮ್ಮ ವಿದ್ಯಾರ್ಥಿ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಲು ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟರು, ಡಿಡಿಪಿಯು ಮಂಜುನಾಥ ಪ್ರಸನ್ನ ಅವರ ಸಹಕಾರದಿಂದ ಸಾಧ್ಯವಾಯಿತು. ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.ಉಪನ್ಯಾಸಕರಾದ ಟಿ.ಮಧು, ರಂಗಸ್ವಾಮಿ, ಸವಿತ, ಜಿ.ಪಿ.ಶೀಲಾ, ಸುನಿಲ್ ಸತ್ಯದಾಸ್, ಎಂ.ಮಹದೇವಸ್ವಾಮಿ, ದೈಹಿಕ ಶಿಕ್ಷಕ ಲಕ್ಷ್ಮಣ್, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಜರಿದ್ದರು.