ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಮದ ಕೂಕನಪಳ್ಳಿ ರಸ್ತೆಯ ಪಕ್ಕದಲ್ಲಿರುವ ಹಿರೇಕೆರೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಭೇಟಿ ನೀಡಿದರು.
ಕೊಪ್ಪಳ: ಕಲ್ಲತಾವರಗೇರಾ ಕೆರೆ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ಡಿಸಿ ಡಾ. ಸುರೇಶ ಇಟ್ನಾಳ ಹೇಳಿದರು.
ತಾಲೂಕಿನ ಕಲ್ಲತಾವರಗೇರಾ ಗ್ರಾಮದ ಕೂಕನಪಳ್ಳಿ ರಸ್ತೆಯ ಪಕ್ಕದಲ್ಲಿರುವ ಹಿರೇಕೆರೆಯನ್ನು ವಿಬಿ ಜಿ ರಾಮ್ ಜೀ ಯೋಜನೆ ಮತ್ತು ಹಳಿಯಾಳ ದೇಶಪಾಂಡೆ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜೀ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯ ಪ್ರಾರಂಭಿಸುವ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.ಶೀಘ್ರದಲ್ಲಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಕೆರೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ದೇಶಪಾಂಡೆ ಸಂಸ್ಥೆಯ ಅಧಿಕಾರಿ ನಂಜುಂಡಪ್ಪ ಮಾತನಾಡಿ, ಹಿರೇಕೆರೆಯು 94 ಎಕರೆ ಪ್ರದೇಶ ಹೊಂದಿದ್ದು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಕೆರೆಯ ಸುತ್ತಲೂ ಬಂಡು ನಿರ್ಮಾಣ, ಹೂಳೆತ್ತುವುದು, ಪ್ಲಾಂಟೇಶನ್ ಇತ್ಯಾದಿ ಕಾರ್ಯ ಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾತ್ರ ಬಹುಮುಖ್ಯ. ಹೊಸದಾಗಿ ಬಂಡು ನಿರ್ಮಿಸುವುದು, ನೀರಿನ ಸಂಗ್ರಹಣೆಗೆ ಒಳಹರಿವು ಅಚ್ಚುಕಟ್ಟಾಗಿಸುವುದು, ಹೂಳೆತ್ತುವ ಕಾರ್ಯ ಕೈಗೊಳ್ಳಲಿದ್ದು, ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದರು.ಜಿಪಂ ಯೋಜನಾ ನಿರ್ದೇಶಕ ಎಸ್.ಎಂ. ಕಾಂಬಳೆ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗನ್ನಾಥ, ತಾಪಂ ಸಹಾಯಕ ನಿರ್ದೇಶಕಿ ಸೌಮ್ಯಾ ಕೆ., ಪಿಡಿಒ ಹನುಮಂತಪ್ಪ ನಾಯಕ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಗ್ರಾಮಸ್ಥರಾದ ಅಂಬಣ್ಣ ಮಾದಾಪುರ, ಗುಂಡೂರಾವ್ ಕುಲಕರ್ಣಿ, ವೈ.ಎಫ್. ಕುರಿ, ಈರಣ್ಣ ಹುಣಶಿಹಾಳ, ನಾಗರಾಜ ಹುರಳಿ, ತಿಮ್ಮಪ್ಪ ಶಿಲಿ, ಶರತ್ ಗುರಿಕಾರ, ಶರಣಪ್ಪ ಏಣಗಿ, ಹನುಮಪ್ಪ ಶೆಲೂಡಿ, ಮಂಜಪ್ಪ ಕೊಳಿವಾಡ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ, ದೇಶಪಾಂಡೆ ಫೌಂಡೇಶನ್ ಅಧಿಕಾರಿಗಳಿದ್ದರು.