ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ನಳಿನ್ ಕುಮಾರ್ ಕಟೀಲ್

ಕುಶಾಲನಗರ: ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ- 26 ರ ಅಂಗವಾಗಿ ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಪ್ರಶಿಕ್ಷಣ ವರ್ಗದ ಎರಡು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ಪಕ್ಷಗಳು ಸರ್ಕಾರ ನಡೆಸುವುದು ಮುಖ್ಯವಲ್ಲ, ಸರ್ಕಾರ ನಡೆಸುವ ಸಂದರ್ಭದಲ್ಲಿ ಪಕ್ಷದ ವಿಚಾರಧಾರೆ ದೇಶದ ಅಭಿವೃದ್ಧಿ ಸಿದ್ದಾಂತಗಳು ಮುಖ್ಯ ಎಂದು ಅವರು ಹೇಳಿದರು.ಇಡೀ ವಿಶ್ವದಲ್ಲಿ ಭಾರತ ದೇಶದ ಛಾಪನ್ನು ಮೂಡಿಸಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು. ವಿಚಾರಧಾರೆ ಸಿದ್ದಾಂತಗಳು ಇಲ್ಲದೆ ದಿಡೀರನೆ ಸರಕಾರವನ್ನು ಸ್ಥಾಪಿಸಿದ್ದ ಆಪ್, ಮತ್ತಿತರ ಪಕ್ಷಗಳ ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಇವುಗಳು ಕೇವಲ ಕೆಲವೇ ವರ್ಷಗಳಿಗೆ ಮಾತ್ರ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶೂನ್ಯದಿಂದ ಆಕಾಶದತ್ತ ಏರಲು ವಿಚಾರ ಸಿದ್ದಾಂತ ನಿಯಮಗಳಲ್ಲಿ ರಾಜಿ ಸಲ್ಲದು ಎಂದ ನಳಿನ್ ಕುಮಾರ್ ಯಾವುದೇ ಸಂದರ್ಭ ಸರಕಾರಗಳನ್ನು ನಡೆಸುವ ಕಾರ್ಯವೈಖರಿಯಲ್ಲಿ ಬದಲಾವಣೆ ಇರುವುದಿಲ್ಲ ಸುದೀರ್ಘ ಅವಧಿಯಲ್ಲಿ ಅಭ್ಯಾಸ ವರ್ಗ ಪ್ರಶಿಕ್ಷಣ ಶಿಬಿರಗಳ ಮೂಲಕ ಪಕ್ಷದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಯಾವುದೇ ವ್ಯಕ್ತಿಯಿಂದ ಸಾಧನೆ ಅಸಾಧ್ಯ ಎಂದ ನಳಿನ್ ಕುಮಾರ್ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ ಪಕ್ಷಕ್ಕಿಂತ ದೇಶ ಪ್ರಮುಖವಾಗಿದೆ ಎಂದರು.ಪಕ್ಷದ ಕಾರ್ಯಕರ್ತರಲ್ಲಿ ಅಭ್ಯಾಸ ವರ್ಗ ಕಾರ್ಯ ವೈಖರಿ ಜವಾಬ್ದಾರಿ ನೆನಪಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಈ ಮೂಲಕ ತಳಮಟ್ಟದಲ್ಲಿ ಕಾರ್ಯಕರ್ತರ ಜವಾಬ್ದಾರಿಯನ್ನು ತಿಳಿ ಹೇಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.ಭಾರತೀಯ ಜನತಾ ಪಕ್ಷ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪಕ್ಷವಾಗಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ ಸದಸ್ಯರು ಶಾಸಕರುಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಪಡೆದ ಪಕ್ಷವಾಗಿದೆ ಎಂದರು.

ಕಳೆದ ಎರಡು ದಿನಗಳ ಅವಧಿಯಲ್ಲಿ ಶಿಬಿರದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದು, ವಿಚಾರಗಳ ಬಗ್ಗೆ ಉಪನ್ಯಾಸಗಳು ನಡೆದವು.

ವಿಧಾನಪರಿಷತ್ ಸದಸ್ಯರಾದ ಸಿಟಿ ರವಿ, ರಾಜ್ಯ ಸಹ ಸಂಯೋಜಕರಾದ ಎನ್ ವಿ ಪಣೀಶ್, ವಿಭಾಗ ಪ್ರಭಾರಿ ಗಳಾದ ಬಿ ಬಿ ಭಾರತೀಶ್, ರಾಜ್ಯ ಉಪಾಧ್ಯಕ್ಷರಾದ ಎನ್ ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಮಾಜಿ ಸಂಸದ ಪ್ರತಾಪ್ ಸಿಂಹ ಅವರುಗಳು ದೇಶ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ವಿವಿಧ ವಿಷಯಗಳನ್ನು ಮಂಡಿಸಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಸುನಿಲ್ ಸುಬ್ರಮಣಿ ದಕ್ಷಿಣ ಕನ್ನಡ ಪ್ರಭಾರಿ ಬಿ ಬಿ ಭಾರತೀಶ್, ಮೈಸೂರು ವಿಭಾಗದ ಪ್ರಭಾರಿ ರಾಜೇಶ್, ಸಹ ಪ್ರಭಾರಿ ಲಿಂಗರಾಜ್, ಬಿಜೆಪಿ ಮಾಜಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಶಿಬಿರ ಸಂಚಾಲಕರಾದ ಮನು ಮುತ್ತಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತಿತರರು ಇದ್ದರು.