ಸಾರಾಂಶ
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಸ್‌ಐಟಿ ತಂಡವಿದೆ. ಸಮಗ್ರವಾಗಿ ತನಿಖೆ ಮಾಡುತ್ತದೆ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಸ್‌ಐಟಿ ತಂಡವಿದೆ. ಸಮಗ್ರವಾಗಿ ತನಿಖೆ ಮಾಡುತ್ತದೆ. ಕಾನೂನು ಪ್ರಕಾರ ತನಿಖೆ ಆಗಲಿ. ಅದರಲ್ಲಿ ನಾವು ಯಾರೂ ಭಾಗಿಯಾಗಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಜನರಿಗೆ ಮಾದರಿಯಾಗಿ ಜೀವನ ಮಾಡಬೇಕು. ರಾಜಕೀಯ ಮಾಡೋರು ಮಾದರಿಯಾಗಿ ಜೀವನ ಮಾಡಬೇಕು. ತನಿಖೆ ಆಗದೇ ತೀರ್ಮಾನಕ್ಕೆ ಬರೋಕೆ ಆಗಲ್ಲ ಎಂದ ಸಚಿವರು, ತನಿಖೆ ಆಗಲಿ, ತನಿಖೆಯಲ್ಲಿ ತಪ್ಪಿತಸ್ಥರಾದರೆ ಶಿಕ್ಷೆ ಆಗೋದು ಅನಿವಾರ್ಯ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು.
ಯುಪಿಎ ಗ್ಯಾರಂಟಿಗಳಿಗೆ ಹೇಗೆ ಹಣ ಹೊಂದಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದುಡ್ಡೇ ಇಲ್ಲ ದೇಶ ದಿವಾಳಿ ಆಗುತ್ತೆ. ಸಿದ್ದರಾಮಯ್ಯ ದುಡ್ಡು ಹೇಗೆ ಕೊಡುತ್ತಾರೆ ಅಂದಿದ್ದೀರಿ. ಈಗ ನಾವು ದುಡ್ಡು ಕೊಡಲಿಲ್ವ? ಅಭಿವೃದ್ಧಿ ಕೆಲಸಗಳಿಗೂ ಅವಕಾಶ ಮಾಡಿಕೊಡಿ ಎಂದರೆ ಕೇಂದ್ರದವರು ದೊಡ್ಡ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದು ಟೀಕಿಸಿದರು.ಆದರೆ, ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಕೊಡೋಕೆ ನಮಗೆ ತೊಂದರೆ ಆಗಲ್ಲ. ಒಂದು ಕಡೆ ಅಭಿವೃದ್ಧಿಯೂ ಇರುತ್ತೆ. ಒಂದು ಕಡೆ ಸಾಮಾಜಿಕ ಬದ್ಧತೆಯೂ ಇರುತ್ತದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್, ಮಾಜಿ ಸಂಸದ ಚಂದ್ರಪ್ಪ, ಪೀರಪ್ಪ ಮ್ಯಾಗೇರಿ ಇದ್ದರು.