ಸಾರಾಂಶ
ದಶಕಗಳಿಂದಲೂ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲ ಇದೆ ಎಂದು ಆರೋಪಿಸುತ್ತಿದ್ದೆವು. ಈಗ ಅಂತರಾಷ್ಟ್ರೀಯ ಮಾದಕ ದ್ರವ್ಯ ಜಾಲಕ್ಕೂ ಉಡುಪಿಯ ನಂಟಿದೆ ಎಂಬುದು ದುರಂತ, ಬುದ್ಧಿವಂತರ ಉಡುಪಿ ಜಿಲ್ಲೆಯಲ್ಲಿ ಅನ್ಯ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆಂದು ಆಗಮಿಸಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಅಂತಹ ಜಿಲ್ಲೆಗೆ ಕಪ್ಪು ಚುಕ್ಕಿಯಂತೆ ಡ್ರಗ್ಸ್ ಜಾಲ ಹಬ್ಬಿರುವುದು ಆತಂಕಕಾರಿಯಾಗಿದೆ ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಎನ್‌ಸಿಬಿ ಅಧಿಕಾರಿಗಳು, ಮಾದಕ ದ್ರವ್ಯ ಪೂರೈಕೆ ಪ್ರಕರಣದಲ್ಲಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್‌ಸೆಂಟರ್ ಮುಖ್ಯಸ್ಥನನ್ನು ಬಂಧಿಸುವ ಮೂಲಕ ಉಡುಪಿ-ಮಣಿಪಾಲ ಪರಿಸರದಲ್ಲಿ ಡ್ರಗ್ಸ್ ಜಾಲ ದೊಡ್ಡ ಮಟ್ಟ ಬೇರೂರಿದೆ ಎಂಬ ಅಂಶವನ್ನು ಬಯಲಿಗೆಳೆದಿದ್ದಾರೆ. ರಾಜ್ಯ ಸರ್ಕಾರ ಹಾಗು ಜಿಲ್ಲಾ ಪೋಲಿಸ್ ಇಲಾಖೆ ಈ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ವಿಶೇಷ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಆಗ್ರಹಿಸಿದ್ದಾರೆ.ದಶಕಗಳಿಂದಲೂ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲ ಇದೆ ಎಂದು ಆರೋಪಿಸುತ್ತಿದ್ದೆವು. ಈಗ ಅಂತರಾಷ್ಟ್ರೀಯ ಮಾದಕ ದ್ರವ್ಯ ಜಾಲಕ್ಕೂ ಉಡುಪಿಯ ನಂಟಿದೆ ಎಂಬುದು ದುರಂತ, ಬುದ್ಧಿವಂತರ ಉಡುಪಿ ಜಿಲ್ಲೆಯಲ್ಲಿ ಅನ್ಯ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆಂದು ಆಗಮಿಸಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಅಂತಹ ಜಿಲ್ಲೆಗೆ ಕಪ್ಪು ಚುಕ್ಕಿಯಂತೆ ಡ್ರಗ್ಸ್ ಜಾಲ ಹಬ್ಬಿರುವುದು ಆತಂಕಕಾರಿಯಾಗಿದೆ ಎಂದವರು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾಲ್ ಸೆಂಟರ್‌ಗಳ ಮಾಹಿತಿಯನ್ನು ಪಡೆದು ಸಮಗ್ರ ತನಿಖೆಯನ್ನು ನಡೆಸಬೇಕು ಮತ್ತು ಡ್ರಗ್ಸ್ ಜಾಲವನ್ನು ಬೇರು ಸಹಿತ ನಿರ್ಮೂಲನೆ ಮಾಡಿ ಜಿಲ್ಲೆಯ ಯುವಜನತೆಯ ಭವಿಷ್ಯವನ್ನು ಕಾಪಾಡಬೇಕು ಎಂದವರು ಆಗ್ರಹಿಸಿದ್ದಾರೆ.