ಚದುರಂಗ ಆಟದಿಂದ ಏಕಾಗ್ರತೆ ಪ್ರಾಪ್ತಿ

| Published : Dec 03 2024, 12:30 AM IST

ಸಾರಾಂಶ

ಚಿತ್ರದುರ್ಗ: ಭೌತಿಕ ಹಾಗೂ ಬೌದ್ಧಿಕ ಕಸರತ್ತಿನ ಮೂಲಕ ಅನೇಕ ಕ್ರೀಡೆಗಳು ನಡೆಯುತ್ತವೆ. ಮೆದುಳಿನ ಮೂಲಕ ನಡೆಯುವ ಆಟ ಎಂದೇ ಪ್ರಖ್ಯಾತಿ ಹೊಂದಿರುವ ಚೆಸ್ (ಚದುರಂಗ ) ಪಠ್ಯಕ್ಕೂ ಸಹಕಾರಿ. ಈ ಆಟದಲ್ಲಿ ಏಕಾಗ್ರತೆ ಪ್ರಾಪ್ತವಾಗಿ ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತದೆ ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ: ಭೌತಿಕ ಹಾಗೂ ಬೌದ್ಧಿಕ ಕಸರತ್ತಿನ ಮೂಲಕ ಅನೇಕ ಕ್ರೀಡೆಗಳು ನಡೆಯುತ್ತವೆ. ಮೆದುಳಿನ ಮೂಲಕ ನಡೆಯುವ ಆಟ ಎಂದೇ ಪ್ರಖ್ಯಾತಿ ಹೊಂದಿರುವ ಚೆಸ್ (ಚದುರಂಗ ) ಪಠ್ಯಕ್ಕೂ ಸಹಕಾರಿ. ಈ ಆಟದಲ್ಲಿ ಏಕಾಗ್ರತೆ ಪ್ರಾಪ್ತವಾಗಿ ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತದೆ ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು. ನಗರದ ಎಸ್‍ಜೆಎಂ ಕಾನೂನು ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳೆಯರ ಚೆಸ್ ಪಂದ್ಯಾವಳಿ ಹಾಗೂ ಆಯ್ಕೆ ಪ್ರಕ್ರಿಯೆ 2024ರ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವ ಮಾನ್ಯವಾಗಿರುವ ಚದುರಂಗ ಕ್ರೀಡೆ ಗ್ರಾಮೀಣ ಕಡೆಗೂ ಹೋಗಬೇಕಿದೆ. ಆ ಭಾಗದ ಮಕ್ಕಳಲ್ಲಿನ ಬುದ್ಧಿಶಕ್ತಿ ವಿಕಾಸಕೊಳ್ಳಬೇಕಾಗಿದೆ. ಆ ಭಾಗದ ಜನರು ಕೆಲವೇ ವರ್ಷಗಳ ಹಿಂದಿನವರೆಗೂ ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ಅನೇಕ ವಿಭಿನ್ನವಾದ ಆಟಗಳನ್ನು ಆಡುತ್ತಿದ್ದನ್ನು ನಾವು ನೋಡಿದ್ದೇವೆ. ಈಗಿನ ಆಧುನಿಕ ಭರಾಟೆಯಲ್ಲಿ ಅವುಗಳ ಸುಳಿವು ಇಲ್ಲದಂತಾಗಿದೆ. ಬುದ್ಧಿಶಕ್ತಿ ಹೆಚ್ಚಿಸುವಂತಹ ಗ್ರಾಮೀಣ ಕ್ರೀಡೆಗಳು ನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತ್ತೆ ಚಾಲ್ತಿಗೆ ಬರಬೇಕಾಗಿದೆ. ನಶಿಸುತ್ತಿರುವ ಈ ಕ್ರೀಡೆಗಳಿಗೆ ಉತ್ತೇಜಿಸುವ, ಪ್ರೋತ್ಸಾಹ ನೀಡುವಂತಾಗಬೇಕಿದೆ ಎಂದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು. ವಕೀಲ ಉಮೇಶ, ಪ್ರಾಧ್ಯಾಪಕರುಗಳಾದ ಕೆ.ಎನ್.ವಿಶ್ವನಾಥ್, ಸುಮನಾ ಅಂಗಡಿ, ಟಿ.ಎಸ್.ಗಿರೀಶ್, ಅಂಬಿಕಾ, ಗುರುಪ್ರಸಾದ್, ಸ್ಮಿತಾ, ಶ್ವೇತಾ , ದೈಹಿಕ ನಿರ್ದೇಶಕರಾದ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ನಿಹಾರಿಕಾ ಹಾಗೂ ಭವನ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ದಿನೇಶ್ ಸ್ವಾಗತಿಸಿದರು. ರೂಪಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ಲೋಕೇಶ್ ರೆಡ್ಡಿ ವಂದಿಸಿದರು.