ಸಾರಾಂಶ
ಸಹಕಾರಿ ರಂಗದಲ್ಲಿ ಪರಸ್ಪರ ಸಹಕಾರ ಮತ್ತು ಸಂಘಟಿತ ಪ್ರಯತ್ನ ಅಗತ್ಯ. ವಿಧಾಯಕ ಕಾರ್ಯಗಳಿಗೂ ಇಲ್ಲಿ ಅವಕಾಶ ಇರಬೇಕು. ಪ್ರತಿಯೊಬ್ಬ ಸಾಲಗಾರ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಅವನಿಗೆ ಮತ್ತು ಸಂಘಕ್ಕೆ ಪ್ರಯೋಜನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಸಹಕಾರಿ ರಂಗದಲ್ಲಿ ಪರಸ್ಪರ ಸಹಕಾರ ಮತ್ತು ಸಂಘಟಿತ ಪ್ರಯತ್ನ ಅಗತ್ಯ. ವಿಧಾಯಕ ಕಾರ್ಯಗಳಿಗೂ ಇಲ್ಲಿ ಅವಕಾಶ ಇರಬೇಕು. ಪ್ರತಿಯೊಬ್ಬ ಸಾಲಗಾರ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಅವನಿಗೆ ಮತ್ತು ಸಂಘಕ್ಕೆ ಪ್ರಯೋಜನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ ಹೇಳಿದರು.ನವನಗರದ ಪುರಸಭೆ ಕಲ್ಯಾಣ ಮಂಟಪದಲ್ಲಿ ಶನಿವಾರ ಹುನಗುಂದ ತಾಲೂಕು ಸರ್ಕಾರಿ ಪ್ರೌಢಶಾಲೆ ನೌಕರರ ಪತ್ತಿನ ಸಹಕಾರಿ ಸಂಘದ ೨೪ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಿಮಿತ್ತ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಮಹಾಂತಗೌಡ ಪಾಟೀಲ ಮಾತನಾಡಿ, ಸಹಕಾರ ತತ್ವದ ಪಾಲನೆಯೇ ಆ ಕ್ಷೇತ್ರದ ಸಾಧನೆ. ಇಲ್ಲಿ ಗ್ರಾಹಕರ ನಂಬುಗೆ ವಿಶ್ವಾಸಕ್ಕೆ ಎಂದು ಧಕ್ಕೆ ತರಬಾರದು ಎಂದರು.ಸಂಘದ ಮಾಜಿ ಅಧ್ಯಕ್ಷ ಎನ್.ಪಿ. ನಿಲುಗಲ್ಲ, ನಿವೃತ್ತ ಮುಖ್ಯಶಿಕ್ಷಕ ಎಂ.ಬಿ. ಗಂಜಿಹಾಳ ಮತ್ತು ಎಸ್.ಜಿ. ಕಡಿವಾಲ, ಪ್ರೌಢಶಾಲೆ ಸಹಶಿಕ್ಷಕ ಸಂಘಗಳ ಅಧ್ಯಕ್ಷ ಜಿ.ಎಸ್. ಅಡವಿ, ಆನಂದ ಗದ್ದನಕೇರಿ, ಹುನಗುಂದ ತಾಲೂಕಿನ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಪಿ.ವಿ. ಬಾದವಾಡಗಿ, ಇಳಕಲ್ ತಾಲೂಕು ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಸ್. ಪಾಟೀಲ, ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾದೇವ ಬಸರಕೋಡ, ನಿವೃತ್ತ ಶಿಕ್ಷಕ ಎಸ್ಕೆ ಕೊನೆಸಾಗರ ಉಪಸ್ಥಿತರಿದ್ದರು.
ಇದೇ ವೇಳೆ ಸಂಘದ ಸದಸ್ಯರಾದ ನಿವೃತ್ತ ಶಿಕ್ಷಕರು, ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ಪ್ರತಿಭಾನ್ವಿತ ಮಕ್ಕಳ ತಂದೆ-ತಾಯಿಗಳು ಹಾಗೂ ವಿವಿಧ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಮುಂಚೆ ಸಂಘದ ವಾರ್ಷಿಕ ಸಭೆ ನಡೆಯಿತು. ಕಾರ್ಯದರ್ಶಿ ಸಂಗಮೇಶ ಓತಗೇರಿ ಪ್ರಗತಿಯ ವರದಿ ಮಂಡಿಸಿದರು.ಶಾರದಾ ಗಡೇದ ಮತ್ತು ಶಿವಗಂಗಾ ರಂಜಣಗಿ ಪ್ರಾರ್ಥಿಸಿದರು. ಮಹಾಂತೇಶ ಹುಲ್ಯಾಳ ಸ್ವಾಗತಿಸಿದರು. ಬಿ.ಡಿ.ಚಿತ್ತರಗಿ ನಿರೂಪಿಸಿದರು. ಭೀಮಣ್ಣ ಹೊಸಮನಿ ವಂದಿಸಿದರು.
;Resize=(128,128))
;Resize=(128,128))