ಪತ್ರಿಕಾ ಭವನ ನಿವೇಶನಕ್ಕೆ ರಿಯಾಯಿತಿ: ಎಸ್ಸೆಸ್ಸೆಂ ಭರವಸೆ

| Published : Sep 14 2024, 01:51 AM IST

ಸಾರಾಂಶ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ಭವನದ ಕೊರತೆಯಿದ್ದು ಮಂಜೂರಾತಿ ನೀಡಿರುವ ನಿವೇಶನಕ್ಕೆ ಸರ್ಕಾರದ ಮಟ್ಟದಲ್ಲಿ ರಿಯಾಯಿತಿ ನೀಡಲು ಅನುಮತಿ ಕೊಡಿಸಲಾಗುತ್ತದೆ. ಮತ್ತು ಸುಸಜ್ಜಿತವಾದ ಭವನ ನಿರ್ಮಾಣ ಮಾಡಲು ಹಾಗೂ ಪತ್ರಕರ್ತರ ಮಕ್ಕಳಿಗೆ ನೆರವಾಗಲು ಜನಕಲ್ಯಾಣ ಟ್ರಸ್ಟ್ ಮೂಲಕವೂ ನೆರವು ನೀಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪತ್ರಿಕಾ ದಿನಾಚರಣೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಹಲವರಿಗೆ ಪ್ರಶಸ್ತಿ ಪ್ರದಾನ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ಭವನದ ಕೊರತೆಯಿದ್ದು ಮಂಜೂರಾತಿ ನೀಡಿರುವ ನಿವೇಶನಕ್ಕೆ ಸರ್ಕಾರದ ಮಟ್ಟದಲ್ಲಿ ರಿಯಾಯಿತಿ ನೀಡಲು ಅನುಮತಿ ಕೊಡಿಸಲಾಗುತ್ತದೆ. ಮತ್ತು ಸುಸಜ್ಜಿತವಾದ ಭವನ ನಿರ್ಮಾಣ ಮಾಡಲು ಹಾಗೂ ಪತ್ರಕರ್ತರ ಮಕ್ಕಳಿಗೆ ನೆರವಾಗಲು ಜನಕಲ್ಯಾಣ ಟ್ರಸ್ಟ್ ಮೂಲಕವೂ ನೆರವು ನೀಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಅವಿಭಜಿತ ಜಿಲ್ಲೆಯಾದಾಗ ಕೇಶವಮೂರ್ತಿ, ಷಡಾಕ್ಷರಪ್ಪ, ಪಂಪಾಪತಿ ಸೇರಿದಂತೆ ಅನೇಕರು ಈ ಕ್ಷೇತ್ರದಲ್ಲಿ ತಮ್ಮ ಪ್ರಾಮಾಣಿಕವಾದ ಸೇವೆ ಮಾಡಿದ್ದಾರೆ. ಅಂದಿನ ದಿನಗಳಲ್ಲಿ ಪತ್ರಿಕೆ ಮುದ್ರಣ ಮಾಡಲು ಮೊಳೆಅಚ್ಚು ಜೋಡಿಸಬೇಕಿತ್ತು. ಇಂದು ಕಂಪ್ಯೂಟರ್ ಕಾಲವಾಗಿದ್ದು ಕೆಲಸ ಮಾಡಲು ತಾಂತ್ರಿಕತೆ ಸುಲಭವಾಗಿಸಿದೆ ಎಂದರು.

- - - -13ಕೆಡಿವಿಜಿ44ಃ:

ದಾವಣಗೆರೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಿ.ಎನ್ ಮಲ್ಲೇಶ್, ಡಾ.ಎಚ್.ಬಿ ಮಂಜುನಾಥ್, ವರದಿಗಾರರ ಕೂಟದ ನೂತನ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್, ಕಾನಿಪ ಸಂಘದ ಚನ್ನಗಿರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಲಿಂಗರಾಜು ಅವರಿಗೆ ಅಭಿನಂದಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇತರರು ಇದ್ದರು.