ಭಜನೆಯ ಮೂಲಕ ಭಗವಂತನನ್ನು ಮೆಚ್ಚಿಸಲು ಸಾಧ್ಯವಿದ್ದು, ಪುರಂದರದಾಸ , ಕನಕದಾಸರಂತಹ ಹಿರಿಯ ದಾಸ ಶ್ರೇಷ್ಠರು ಭಜನೆಯ ಮೂಲಕವಾಗಿ ಭಗವಂತನನ್ನು ಕಂಡು ಜನರಿಗೆ ಸಂದೇಶವನ್ನು ನೀಡಿದ್ದಾರೆ ಎಂದು ಕಿನ್ನಿಗೋಳಿ ರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.
ಮೂಲ್ಕಿ : ಭಜನೆಯ ಮೂಲಕ ಭಗವಂತನನ್ನು ಮೆಚ್ಚಿಸಲು ಸಾಧ್ಯವಿದ್ದು, ಪುರಂದರದಾಸ , ಕನಕದಾಸರಂತಹ ಹಿರಿಯ ದಾಸ ಶ್ರೇಷ್ಠರು ಭಜನೆಯ ಮೂಲಕವಾಗಿ ಭಗವಂತನನ್ನು ಕಂಡು ಜನರಿಗೆ ಸಂದೇಶವನ್ನು ನೀಡಿದ್ದಾರೆ ಎಂದು ಕಿನ್ನಿಗೋಳಿ ರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.
ಕಿನ್ನಿಗೋಳಿ ಶ್ರೀರಾಮ ಮಂದಿರದ 78 ನೇ ನಗರ ಸಂಕೀರ್ತನಾ ಭಜನ ಮಂಗೋತ್ಸವ ಉದ್ಘಾಟಿಸಿ ಮಾತನಾಡಿದರು.ಮಂದಿರದ ಪ್ರಧಾನ ಅರ್ಚಕ ವೇ. ಮೂ. ಗಿರೀಶ್ ಭಟ್ ಮಾತನಾಡಿ, ಜಿಎಸ್ಬಿ ಸಮಾಜವು ಭಜನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು , ಪೂರ್ವಿಕರು ಹಾಕಿಕೊಟ್ಟ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭ ಮಂದಿರ ಆಡಳಿತ ಮಂಡಳಿಯ ಉಪಾಧ್ಯಕ್ಷ ಆದಿತ್ಯ ಕಾಮತ್, ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕೋಶಾಧಿಕಾರಿ ಸುಧೀರ್ಶೆಣೈ, ಆಡಳಿಯ ಮಂಡಳಿಯ ಸದಸ್ಯರು, ಮಾತೃ ಮಂಡಳಿಯ ಪದಾಧಿಕಾರಿಗಳು ಮತ್ತಿತರರಿದ್ದರು. 24 ದಿನಗಳಲ್ಲಿ 50ಕ್ಕೂ ಮಿಕ್ಕಿ ವಿವಿಧ ಭಜನಾ ತಂಡಗಳಲ್ಲಿ 1000 ಕ್ಕೂ ಮಿಕ್ಕಿ ಜನರು ಭಜನೆಯಲ್ಲಿ ತಂಡದಲ್ಲಿ ಭಾಗವಹಿಸಿದರು. 8 ಮಹಿಳಾ ತಂಡಗಳು, 4 ಮಕ್ಕಳ ಭಜನ ತಂಡಗಳು ಭಾಗವಹಿಸಿದ್ದು, ರಾಮ ಮಂದಿರದಲ್ಲಿ ವರ್ಷದ 365 ದಿನಗಳಲ್ಲಿ ಭಜನೆ ನಡೆದಿದೆ.ಕಿನ್ನಿಗೋಳಿ ರಾಮ ಮಂದಿರದಲ್ಲಿ 24 ದಿನಗಳ ನಗರ ಸಂರ್ಕೀತನ ಭಜನೆಯ ಮಂಗಲೋತ್ಸವ ನಡೆಯಿತು.