ಬಜೆಗುಂಡಿ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

| Published : Apr 03 2025, 12:32 AM IST

ಬಜೆಗುಂಡಿ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಗುಂಡಿ ಕಾಲನಿಯಲ್ಲಿ ನಿರ್ಮಾಣವಾಗಿರುವ 47.50 ಲಕ್ಷ ರು. ಗಳ ವೆಚ್ಚದ ಕಾಂಕ್ರಿಟ್‌ ರಸ್ತೆಯನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ, ಮಹಾನಗರ ಪಾಲಿಕೆಯಲ್ಲಿ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ, ಅಲ್ಪ ಸಂಖ್ಯಾತರ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆಯಲ್ಲಿ ಬಜೆಗುಂಡಿ ಕಾಲನಿಯಲ್ಲಿ ನಿರ್ಮಾಣವಾಗಿರುವ 47. 50 ಲಕ್ಷ ರು. ಗಳ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಮಂಗಳವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಕುಮಾರ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಪಕ್ಷದ ಪ್ರಮುಖರಾದ ಸುರೇಂದ್ರ, ಕೆ.ಎ.ಪ್ರಕಾಶ್, ಪಿಡಿಒ ಮೋಹನ್ ಇದ್ದರು.

------------------------

7 ರಿಂದ ಬೇಸಿಗೆ ತರಬೇತಿ ಶಿಬಿರ

ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏ.7 ರಿಂದ 29 ರವರೆಗೆ 21 ದಿನಗಳ ಕಾಲ ನುರಿತ ತರಬೇತುದಾರರಿಂದ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ.

7 ರಿಂದ 18 ವರ್ಷದವರಿಗೆ ಈಜು ಬೆಳಗ್ಗೆ 9.30 ರಿಂದ 11.30 ರವರೆಗೆ, ಸಂಜೆ 5 ರಿಂದ 6.30 ರವರೆಗೆ ಶುಲ್ಕ 3 ಸಾವಿರ ದೂ.ಸಂ. 9480032712, ಷಟಲ್ ಬ್ಯಾಡ್ಮಿಂಟನ್ ಮಧ್ಯಾಹ್ನ 2 ಗಂಟೆಯಿಂದ 3 ಗಂಟೆವರೆಗೆ ಶುಲ್ಕ ರು. 2 ಸಾವಿರ , ದೂ.ಸಂ. 8792842853, ಟೇಬಲ್ ಟೆನ್ನಿಸ್ ಸಂಜೆ 5.30 ಗಂಟೆಯಿಂದ 6.30 ಗಂಟೆವರೆಗೆ ಶುಲ್ಕ 2 ಸಾವಿರ ರು. ದೂ.ಸಂ. 9110677030.

10 ರಿಂದ 18 ವರ್ಷದವರಿಗೆ ಅಥ್ಲೆಟಿಕ್ಸ್ ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಶುಲ್ಕ 2 ಸಾವಿರ ರು. ದೂ.ಸಂ. 9980887499 ಹಾಗೂ ಹಾಕಿ ಬೆಳಗ್ಗೆ 7 ರಿಂದ 8 ಗಂಟೆವರೆಗೆ ಶುಲ್ಕ ರು. 2 ಸಾವಿರ ದೂ.ಸಂ. 8105122430 ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. 08272-220986 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.