ಎತ್ತಿನಹೊಳೆ ಯೋಜನೆಯಡಿ ₹ 75 ಲಕ್ಷ ವೆಚ್ಚದಲ್ಲಿ ಎ.ಸಿ. ರಸ್ತೆಯಿಂದ ಬಿಸಲೇಹಳ್ಳಿ ಗ್ರಾಮದವರೆಗೆ ನಿರ್ಮಾಣವಾಗುವ ಸಿ.ಸಿ. ರಸ್ತೆ ಕಾಮಗಾರಿಗೆ ಗಂಡಸಿ ಹೋಬಳಿಯ ಮುದುಡಿ ಸಿದ್ದಾಪುರ ಗ್ರಾಮದಲ್ಲಿ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ. ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಮುದುಡಿ ವಿಶ್ವಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಶಿವಪ್ಪ, ಮುಖಂಡರಾದ ಶಂಭುಲಿಂಗೇಗೌಡ, ನಂದನ್, ಚಂದ್ರಶೇಖರ, ವೆಂಕಟೇಶ, ಪ್ರಕಾಶ, ಶಿವಣ್ಣ, ಅಭಿ, ಚಂದ್ರು, ಕೃಷ್ಣ ನಾಯ್ಕ, ಕುಮಾರ, ಜಯಣ್ಣ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಎತ್ತಿನಹೊಳೆ ಯೋಜನೆಯಡಿ ₹ 75 ಲಕ್ಷ ವೆಚ್ಚದಲ್ಲಿ ಎ.ಸಿ. ರಸ್ತೆಯಿಂದ ಬಿಸಲೇಹಳ್ಳಿ ಗ್ರಾಮದವರೆಗೆ ನಿರ್ಮಾಣವಾಗುವ ಸಿ.ಸಿ. ರಸ್ತೆ ಕಾಮಗಾರಿಗೆ ಗಂಡಸಿ ಹೋಬಳಿಯ ಮುದುಡಿ ಸಿದ್ದಾಪುರ ಗ್ರಾಮದಲ್ಲಿ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ. ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಭಾಗವು ನೀರಾವರಿ ವಂಚಿತ ಬಯಲು ಸೀಮೆಯಾಗಿದೆ. ನಾನು ಶಾಸಕನಾದ ನಂತರ ನಿರಂತರ ಹೋರಾಟದ ಫಲವಾಗಿ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದೀಗ ಯೋಜನೆ ಅಂತಿಮ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಾನೆಲ್ ಮೂಲಕ ನೀರು ಹರಿಯಲಿದೆ, ಎಂದು ಹೇಳಿದರು.ಸ್ಪಷ್ಟಪಡಿಸಿದರು.ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಮುದುಡಿ ವಿಶ್ವಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಶಿವಪ್ಪ, ಮುಖಂಡರಾದ ಶಂಭುಲಿಂಗೇಗೌಡ, ನಂದನ್, ಚಂದ್ರಶೇಖರ, ವೆಂಕಟೇಶ, ಪ್ರಕಾಶ, ಶಿವಣ್ಣ, ಅಭಿ, ಚಂದ್ರು, ಕೃಷ್ಣ ನಾಯ್ಕ, ಕುಮಾರ, ಜಯಣ್ಣ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಎಇಇ ಇಂದುಕುಮಾರ್, ಗುತ್ತಿಗೆದಾರ ಜ್ಞಾನೇಶ್ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.