ಸಾರಾಂಶ
ಕೊಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಇಲ್ಲಿನ ಐ.ಎಂ.ಎ, ಆಯುಷ್, ಪುಲಿಕೇಶಿ ಮತ್ತು ಕಾಳಿದಾಸ ಆಯುರ್ವೇದ ಕಾಲೇಜ, ಔಷಧಿ ವ್ಯಾಪಾರಸ್ಥರ ಸಂಘದ ಸದಸ್ಯರು ನಗರದ ಬಸವೇಶ್ವರ ವೃತ್ತದಿಂದ ರಾಮದರ್ಗು ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಕೊಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಇಲ್ಲಿನ ಐ.ಎಂ.ಎ, ಆಯುಷ್, ಪುಲಿಕೇಶಿ ಮತ್ತು ಕಾಳಿದಾಸ ಆಯುರ್ವೇದ ಕಾಲೇಜ, ಔಷಧಿ ವ್ಯಾಪಾರಸ್ಥರ ಸಂಘದ ಸದಸ್ಯರು ನಗರದ ಬಸವೇಶ್ವರ ವೃತ್ತದಿಂದ ರಾಮದರ್ಗು ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕಿರಣ ಕುಳಗೇರಿ ಮಾತನಾಡಿ, ವೈದ್ಯ ಘಟನೆಯಿಂದ ಇಡೀ ವೈದ್ಯ ಸಮುದಾಯವೇ ಆತಂಕಗೊಂಡಿದೆ. ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವೈದ್ಯರಿಗೆ ಸೂಕ್ಷ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಐಎಂಎ ತಾಲೂಕಾಧ್ಯಕ್ಷ ಡಾ.ಆರ್.ಸಿ.ಭಂಡಾರಿ, ಡಾ.ಸುರೇಶ ಉಗಲವಾಟ, ಡಾ.ಮಾರುತಿ ತಳವಾರ, ಎಸ್.ಜಿ.ಕಾರುಡಗಿಮಠ, ನಿಲೂಗಲ್ಲ, ಡಾ.ನೀರಲಗಿ, ಡಾ.ಮನೋಜ ವರಕೇರಿ, ಡಾ.ಅಜಯ ನಾಯಕ, ಡಾ.ಜತಂತ, ಡಾ.ರೇವಣಸಿದ್ದಪ್ಪ, ಡಾ.ಬಸವರಾಜ ಮುಲ್ಕಿಪಾಟೀಲ, ರಾಜೇಂದ್ರ ಮರಕುಂಬಿ, ಎಸ್.ವ್ಹಿ.ತೆಗ್ಗಿ, ಡಾ.ವ್ಹಿ.ವಾಯ್.ಭಾಗವತ, ಡಾ.ಸತೀಶ ಕಟಗೇರಿ, ಡಾ.ಬಸವರಾಜ ಗಂಗಲ್, ಶ್ರೀಧರ ಪತ್ತೇಪೂರ, ಎಸ್.ಎಸ್.ಬೊಮ್ಮನಗೌಡರ ಇತರರು ನೇತ್ರತ್ವ ವಹಿಸಿದ್ದರು.ಪುಲಿಕೇಶಿ ಹಾಗೂ ಕಾಳಿದಾಸ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನೂರಾರು ಜನ ಸಿಬ್ಬಂದಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸುವುದರ ಜೊತೆಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು.