ನ್ಯಾಯಬೆಲೆ ಅಂಗಡಿ ಅಂಗಡಿ ವಿರುದ್ಧ ಆರೋಪಕ್ಕೆ ಖಂಡನೆ

| Published : Jan 12 2024, 01:46 AM IST

ನ್ಯಾಯಬೆಲೆ ಅಂಗಡಿ ಅಂಗಡಿ ವಿರುದ್ಧ ಆರೋಪಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಸಾರ್ವಜನಿಕರ ನಕಲಿ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಗೆ ದೂರು ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಊರಿನ ಗ್ರಾಮಸ್ಥರು ದೇವಸ್ಥಾನದಲ್ಲಿ ಗುರುವಾರ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲೂಕಿನ ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಸಾರ್ವಜನಿಕರ ನಕಲಿ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಗೆ ದೂರು ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಊರಿನ ಗ್ರಾಮಸ್ಥರು ದೇವಸ್ಥಾನದಲ್ಲಿ ಗುರುವಾರ ಧರಣಿ ನಡೆಸಿದರು.

ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ 120 ಜನರಿಗೆ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಕೆಲವರು ಸಾರ್ವಜನಿಕರ ಸಹಿ ಮಾಡಿ ತಹಸೀಲ್ದಾರ್‌ ಕಚೇರಿಯ ಆಹಾರ ಇಲಾಗೆ ಮನವಿ ಕೊಟ್ಟಿದ್ದು, ಹಿನ್ನಲೆ ಈ ವಿಷಯ ಗ್ರಾಮಸ್ಥರಿಗೆ ತಿಳಿದ ಕೂಡಲೇ ಗ್ರಾಮದ ಲಕ್ಷ್ಮೀದೇವ ದೇಸ್ಥಾನದಲ್ಲಿ ಧರಣಿ ನಡೆಸಿ, ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮಾಹಿತಿ ಪಡೆದು ನಕಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಕಲಿ ದೂರು ನೀಡಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ ಹಾಗೂ ಪಿಎಸ್‌ಐಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ತಹಸೀಲ್ದಾರ್ ಕಚೇರಿಯ ಶಿರೆಸ್ತೇದಾರ ಪರಸಪ್ಪ ನಾಯಕ, ಆಹಾರ ಇಲಾಖೆಯ ಸುನೀಲ ದೇಸಾಯಿ, ಪೊಲೀಸ್ ಸಿಬ್ಬಂದಿ ಎನ್ ಎಸ್ ಒಡೆಯರ್ ಇತರರು ಇದ್ದರು.