ಪ್ರವಾದಿ ಮಹಮದ್ ಫೈಗಂಬರ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆಯನ್ನು ಬಂಧಿಸಿ

ಕನ್ನಡಪ್ರಭ ವಾರ್ತೆ ತುಮಕೂರುಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಪ್ರವಾದಿ ಮಹಮದ್ ಪೈಗಂಬರ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶನಿವಾರ ಮಜೀದ್ ಇ ಅಲ್ಲಾ ನೇತೃತ್ವದಲ್ಲಿ ನೂರಾರು ಮುಸ್ಲಿಂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಗುಂಚಿ ಸರ್ಕಲ್‌ನಲ್ಲಿ ಮಸೀದಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಮುಸ್ಲಿಂವರು ಪ್ರವಾದಿ ಮಹಮದ್ ಫೈಗಂಬರ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆಯನ್ನು ಬಂಧಿಸಿ, ಆಕೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ, ಆಕೆಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿಆಕ್ರೋಶ ವ್ಯಕ್ತಪಡಿಸಿದರು.ಮಹಮದ್ ಪೈಗಂಬರ್ ಬಗ್ಗೆ ಆಧಾರವಿಲ್ಲದ ಆರೋಪ ಮಾಡುತ್ತಾ, ತೀರ ತುಚ್ಚವಾಗಿ ಮಾತನಾಡಿರುವ ನಾಜಿಯಾ ಇಲಾಹಿ ಖಾನ್‌ ಉದ್ದೇಶಪೂರ್ವಕವಾಗಿಯೇ ಈ ಹೇಳಿಕೆ ನೀಡಿ, ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು.ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕುಎಂದು ಮನವಿಯ ಮೂಲಕ ಸರಕಾರವನ್ನು ಒತ್ತಾಯಿಸಿದರು.ಕರ್ನಾಟಕ ಮುಸ್ಲಿಂ ಜಮಾ ಆತೆಯ ತುಮಕೂರು ಉಸ್ತುವಾರಿ ಅಬ್ದುರ್‌ ರೆಹಮಾನ ಮೊಗರ್ ಪಾಣೆ, ಮಜೀದ್ ಇ ಅಲ್ಲಾ ನ ಕಾರ್ಯದರ್ಶಿ ಫಯಾಜ್‌ಖಾನ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಕ್ಪ್ ಸಮಿತಿ ಮಾಜಿ ಉಪಾಧ್ಯಕ್ಷ ಮೌಲಾನಾ ಆರೀಫ್‌ ರಜಾ, ರಿಜ್ವಾನ್ ಪಾಷ ಜುನೇದಿ, ಅಭ್ರಹಾರ್‌ಖಾದ್ರಿ, ಸನ್ನತ್ ಸ್ಟೂಡೆಂಟ್‌ ಆರ್ಗನೈಜೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಸುನ್ನತ್‌ಜಮಾಆತೆ ಮೌಲ್ವಿಗಳು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.