ಹಾವೇರಿ ಸಾಹಿತ್ಯ ಸಮ್ಮೇಳನ ಕುರಿತು ಅವಹೇಳನ- ಜೋಶಿ ಖಂಡನೆ

| Published : Dec 26 2024, 01:01 AM IST

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳದ ಕುರಿತು ಸಾಹಿತ್ಯದ ಗಂಧವೇ ಇಲ್ಲದ, ರೋಗಗ್ರಸ್ತ ಮನಸ್ಸಿನ ವ್ಯಕ್ತಿಗಳ ಹೇಳಿಕೆ ವಿರುದ್ಧ ಪ್ರತಿಭಟನೆ ಆರಂಭ ಮಾಡಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಎಚ್ಚರಿಸಿದ್ದಾರೆ.

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳದ ಕುರಿತು ಸಾಹಿತ್ಯದ ಗಂಧವೇ ಇಲ್ಲದ, ರೋಗಗ್ರಸ್ತ ಮನಸ್ಸಿನ ವ್ಯಕ್ತಿಗಳ ಹೇಳಿಕೆ ವಿರುದ್ಧ ಪ್ರತಿಭಟನೆ ಆರಂಭ ಮಾಡಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಎಚ್ಚರಿಸಿದ್ದಾರೆ.ಮಂಡ್ಯದಲ್ಲಿ ಜಯಕುಮಾರಗೌಡ ಎಂಬ ವ್ಯಕ್ತಿ ಹಾವೇರಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಕೆಳಮಟ್ಟದ ಹೇಳಿಕೆ ನೀಡಿದ್ದನ್ನು ಖಂಡಿಸಿ, ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶರಣರ, ಸಂತರ, ಅನುಭಾವಿಗಳ ನಾಡು ಹಾವೇರಿ ಜಿಲ್ಲೆ. ಅಲ್ಲದೇ ಅದೇ ನೆಲದಿಂದ ಹುಟ್ಟಿ ಬೆಳೆದು ಬಂದವನು ನಾನು. ಹಾವೇರಿ ಜಿಲ್ಲೆಯ ಜನರಿಗೆ ಈ ಹೇಳಿಕೆಯಿಂದ ತೀವ್ರ ನೋವಾಗಿದೆ. ಈ ಹೇಳಿಕೆ ಮೂಲಕ ಕನ್ನಡಿಗರ ಮನಸ್ಸನ್ನು ನೋಯಿಸಿದ್ದಿರಿ, ಹಾವೇರಿ ಸಮ್ಮೇಳನದ ವಿರುದ್ಧ ಮಾತನಾಡಿದ್ದಾರೆ. ಏಕವಚನ ಪ್ರಯೋಗ ಮಾಡಿದ್ದು, ಅವರು ಯಾವ ರೀತಿಯ ಸಾಹಿತಿಗಳು, ಅವರಿಗೆ ಸಾಹಿತ್ಯದ ಗಂಧವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 9ರಿಂದ 11ಲಕ್ಷ ಕನ್ನಡಿಗರು ಪಾಲ್ಗೊಂಡಿದ್ದರು. ಅಲ್ಲಿ ಕೇವಲ ಹಾವೇರಿ ಜಿಲ್ಲೆಯ ಜನರು ಮಾತ್ರ ಪಾಲ್ಗೊಂಡಿಲ್ಲ, ಇಡೀ ರಾಜ್ಯ, ರಾಷ್ಟ್ರದ ಜನ ಪಾಲ್ಗೊಂಡಿದ್ದರು. ಇದರ ಕುರಿತು ಹೇಳಿಕೆ ನೀಡಿದವರು ಬೇಷರತ್ ಕ್ಷಮೆ ಯಾಚಿಸಬೇಕು, ತಪ್ಪಿದಲ್ಲಿ ಅವರ ವಿರುದ್ಧ ಕೋರ್ಟ್‌ಗೂ ಹೋಗಲು ಸಿದ್ಧನಿದ್ದೇನೆ. ಕೂಡಲೇ ಕನ್ನಡಿಗರ, ಹಾವೇರಿ ಜಿಲ್ಲೆಯ ಜನರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕ್ಷಮೆ ಕೇಳಬೇಕು. ಇಂಥವರು ಯಾವ ಸಾಹಿತಿಗಳು, ಇವರಿಗೆ ಸಾಹಿತ್ಯದ ಗಂಧ ಗಾಳಿಯೇ ಇಲ್ಲ. ಕ್ಷಮೆ ಕೇಳದೇ ಹೋದಲ್ಲಿ ಹಾವೇರಿಯಿಂದಲೇ ಅವರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.