ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ಹತ್ಯೆ ನಡೆಯುತ್ತಿರುವುದು ಖಂಡನಾರ್ಹ. ಬಾಂಗ್ಲಾದ ಯುವ ನಾಯಕ ಷರೀಫ್ ಉಸ್ಮಾನ್ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ದೀಪು ಚಂದ್ರಹಾಸ ಅವರನ್ನು ಅಲ್ಲಿಯ ಮತಿಯವಾದಿಗಳ ಗುಂಪು ಬೆಂಕಿ ಹಚ್ಚಿ ಹತ್ಯೆ ಮಾಡುವ ಮೂಲಕ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ.
ಹುಬ್ಬಳ್ಳಿ:
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಖಂಡಿಸಿ ವಿಶ್ವಹಿಂದು ಪರಿಷತ್ ಭಜರಂಗದಳ ಕಾರ್ಯಕರ್ತರು ಬುಧವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಾಂಗ್ಲಾ ಪ್ರಧಾನಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ಹತ್ಯೆ ನಡೆಯುತ್ತಿರುವುದು ಖಂಡನಾರ್ಹ. ಬಾಂಗ್ಲಾದ ಯುವ ನಾಯಕ ಷರೀಫ್ ಉಸ್ಮಾನ್ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ದೀಪು ಚಂದ್ರಹಾಸ ಅವರನ್ನು ಅಲ್ಲಿಯ ಮತಿಯವಾದಿಗಳ ಗುಂಪು ಬೆಂಕಿ ಹಚ್ಚಿ ಹತ್ಯೆ ಮಾಡುವ ಮೂಲಕ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ. ಇದೊಂದು ಮಾನವೀಯತೆಯ ಕಗ್ಗೊಲೆಯಾಗಿದೆ. ಈ ಮೂಲಕ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲ ಎನ್ನುವುದು ಜಗಜ್ಜಾಹೀರವಾಗಿದೆ. ಇದೇ ರೀತಿ ಇನ್ನೂ ಹಲವು ಹಿಂದೂಗಳನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡುವ ಕೃತ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸೈನಿಕರ ಬಲಿದಾನ, ಪರಾಕ್ರಮ ಮತ್ತು ರಾಜತಾಂತ್ರಿಕ ಸಹಕಾರದಿಂದ ಬಾಂಗ್ಲಾದೇಶ ಸ್ವತ್ರಂತ್ರವಾಗಿದೆ. ಭಾರತಕ್ಕೆ ಆಸರೆ ಕೇಳಿ ಬಂದ ಆ ದೇಶದ ಮಾಜಿ ಪ್ರಾಧಾನಿಗೆ ಆಶ್ರಯ ನೀಡಿದ್ದು ಭಾರತ. ಅನೇಕ ಸಂಕಷ್ಟ ಸ್ಥಿತಿಯಲ್ಲಿ ಭಾರತ ಸಹಾಯ ಹಸ್ತ ನೀಡಿದೆ. ಬಾಂಗ್ಲಾ ಅಖಂಡ ಭಾರತದ ಭಾಗವಾದರೆ ಇಲ್ಲಿಯ ಮೂಲನಿವಾಸಿ ಹಿಂದೂಗಳೇ ಅಲ್ಲಿ ಅಲ್ಪಸಂಖ್ಯಾತರಾಗಿ ಅವರನ್ನು ಮಾರಣ ಹೋಮ ಮಾಡುತ್ತಿರುವ ಆ ದೇಶದ ಬಹುಸಂಖ್ಯಾತರ ಕೃತ್ಯ ಖಂಡನೀಯ. ಒಂದಿಲ್ಲ ಒಂದು ಕಾರಣವಿಟ್ಟು ಹಿಂದೂಗಳಿಗೆ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವ ವಿಚಾರವನ್ನು ಭಾರತದಲ್ಲಿರುವ ಬಾಂಗ್ಲಾದೇಶದ ರಾಯಭಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಹಾಗೂ ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು ಒಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಸಹ ಸಂಚಾಲಕ ಶಿವಾನಂದ ಸತ್ತಿಗೇರಿ, ಪ್ರಮುಖರಾದ ಶಿವಾ ರಮೇಶ ಕದಂ, ಚೇತನರಾವ್, ಪ್ರಶಾಂತ ನರಗುಂದ, ಯಲ್ಲಪ್ಪ ಬಾಗಲಕೋಟಿ, ಮಲ್ಲಿಕಾರ್ಜುನ ಸತ್ತಿಗೇರಿ, ಶಂಕರ ಕಮತರ, ವೀಣಕ್ಕ ತಳವಳ್ಳಿ ಸೇರಿದಂತೆ ಹಲವರಿದ್ದರು.