ಸಿಜೆಐ ಮೇಲಿನ ಹಲ್ಲೆಗೆ ಖಂಡನೆ, ರಾಷ್ಟ್ರಪತಿಗೆ ಮನವಿ

| Published : Oct 11 2025, 12:02 AM IST

ಸಾರಾಂಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆಯನ್ನು ಎಸೆಯುವ ಕೃತ್ಯ ನಡೆದಿದ್ದನ್ನು ತೀವ್ರವಾಗಿ ಖಂಡಿಸಿ ಸವಣೂರು ತಾಲೂಕಿನ ಮಾದಿಗ ಸಮಾಜ ಬಾಂಧವರು ಉಪ ತಹಸೀಲ್ದಾರ ಗಣೇಶ ಸವಣೂರು ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಸವಣೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆಯನ್ನು ಎಸೆಯುವ ಕೃತ್ಯ ನಡೆದಿದ್ದನ್ನು ತೀವ್ರವಾಗಿ ಖಂಡಿಸಿ ಸವಣೂರು ತಾಲೂಕಿನ ಮಾದಿಗ ಸಮಾಜ ಬಾಂಧವರು ಉಪ ತಹಸೀಲ್ದಾರ ಗಣೇಶ ಸವಣೂರು ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಸರ್ವೋಚ್ಚ ನ್ಯಾಯಾಲಯದ 52ನೇ ಮುಖ್ಯ ನ್ಯಾಯಮೂರ್ತಿಗಳಾದ ಬೂಷನ್ ರಾಮಕೃಷ್ಣಾ ಗವಾಯಿ ಅವರ ಮೇಲೆ ಪಾದರಕ್ಷೆಗಳನ್ನು ಎಸೆಯುವ ಕೃತ್ಯ ನಡೆದಿದ್ದು, ಇದನ್ನು ಗಮನಿಸಿದಾಗ ಭಾರತದ ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಮಾಡಿದ ಘೋರ ಅವಮಾನವಾಗಿದ್ದು, ಇಡೀ ಭಾರತದ ಪ್ರಜೆಗಳು ನಾವೆಲ್ಲರೂ ತಲೆತೆಗ್ಗಿಸುವಂತಾಗಿದೆ.ಭಾರತದ ಸಂವಿಧಾನದಲ್ಲಿ ನ್ಯಾಯಾಂಗವು ತನ್ನದೆ ಆದ ವೈಶಿಷ್ಟ್ಯತೆ ಹೊಂದಿದ್ದು ಇಂತಹ ನ್ಯಾಯಾಂಗ ವ್ಯವಸ್ಥೆಗೆ ನ್ಯಾಯವಾದಿಗಳು ಒಬ್ಬರು ಮಾಡಿರುವ ಅಪಚಾರ. ಇಂತಹ ನ್ಯಾಯವಾದಿಗಳಿಗೆ ಹಾಗೂ ಇವರ ಹಿಂದೆ ಇರುವ ಪ್ರೇರಕ ಶಕ್ತಿಗಳು ಆರೋಪಿತರ ಬೆಂಬಲಕ್ಕೆ ನಿಂತ ಮತ್ತು ಪರೋಕ್ಷವಾಗಿ ಇವರುಗಳಿಗೆ ಕುಮುಕ್ಕುಕೊಡುವಂತಹ ವೈಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕು.ಮತ್ತು ನ್ಯಾಯವಾದಿಗಳ ನಡುವಳಿಕೆ ಮತ್ತು ಅವರ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ಭಾರತದ ಸಂವಿಧಾನವನ್ನು ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನ ರಕ್ಷಿಸಿ ಅಪರಾಧಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಸವಣೂರ ತಾಲೂಕಿನ ಸಮಾಜದ ಯುವ ಮುಖಂಡರಾದ ಆನಂದ ವಡಕ್ಕಮ್ಮನವರ, ಬಸವರಾಜ ಮೈಲಮ್ಮನವರ, ಶಿವು ಡಾವಣಗೇರಿ, ಶಾಂತು ಕೆಂಚಣ್ಣನವರ, ಅನಿಲ ಬಿಸಿ, ಮಂಜು ದೊಡ್ಡಮನಿ, ಲಕ್ಷ್ಮಣ ಹುಲ್ಲಮ್ಮನವರ, ಪ್ರಶಾಂತ ಮುಗಳಿ, ಮುತ್ತು ಹುಲ್ಲಮ್ಮನವರ, ಮಂಜು ಮೈಲಮ್ಮನವರ, ಮುತ್ತು ಲಕ್ಷ್ಮೇಶ್ವರ, ಮಲ್ಲೇಶ ಹರಿಜನ, ರಾಘವೇಂದ್ರ ಬಾಲೆಹೊಸೂರ, ಈಶ್ವರ ಕೆಂಚಣ್ಣನವರ, ರವಿ ದೊಡ್ಡಮನಿ, ಅಜಯ ಪೂಜಾರ, ನಿಂಗಪ್ಪ ಹರಿಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.