ಮಿತವ್ಯಯದಿಂದ ಸಮ್ಮೇಳನಗಳು ಅರ್ಥ ಪೂರ್ಣವಾಗಿ ನಡೆಸಿ: ಪಂಡಿತಾರಾಧ್ಯ ಶ್ರೀ

| Published : Sep 02 2025, 01:00 AM IST

ಮಿತವ್ಯಯದಿಂದ ಸಮ್ಮೇಳನಗಳು ಅರ್ಥ ಪೂರ್ಣವಾಗಿ ನಡೆಸಿ: ಪಂಡಿತಾರಾಧ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಸಮ್ಮೇಳನಗಳು ಮಿತವ್ಯಯವನ್ನು ಪಾಲಿಸಿ ಅರ್ಥ ಪೂರ್ಣವಾಗಿ ನಡೆಸಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

- ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮ್ಮೇಳನಗಳು ಮಿತವ್ಯಯವನ್ನು ಪಾಲಿಸಿ ಅರ್ಥ ಪೂರ್ಣವಾಗಿ ನಡೆಸಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.ಸಾಣೇಹಳ್ಳಿಯಲ್ಲಿ ಜರುಗಿದ ಪ್ರಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಸಭೆಯಲ್ಲಿ ಅವರು ಮಾತನಾಡಿ 2024ರ ಫೆಬ್ರವರಿ 2 ಮತ್ತು 3ರಂದು ಜರುಗಿದ ಪ್ರಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಾವುದೇ ಸಮಸ್ಯೆಇಲ್ಲದೆ ಅತ್ಯಂತ ಸಂಭ್ರಮ, ಸಡಗರದಿಂದ ಅಚ್ಚುಕಟ್ಟಾಗಿ ಜರುಗಿತು. ಊಟ ವಸತಿ ತುಂಬಾ ವ್ಯವಸ್ಥಿತವಾಗಿತ್ತು.

ಆದಾಯ ಮತ್ತು ಖರ್ಚುಗಳ ಪಟ್ಟಿ ಗಮನಿಸಿದ್ದೇನೆ. ಸಮ್ಮೇಳನದಲ್ಲಿ ಖರ್ಚು ಹೆಚ್ಚಾಗಿ ಆದಾಯದ ಮೂಲ ಗಳು ಕಡಿಮೆಯಾಗಿದ್ದು ಹಣದ ಕೊರತೆ ಕಂಡುಬಂದಿದೆ. ಅಂತಿಮವಾಗಿ ಎಲ್ಲಾ ಖರ್ಚುಗಳನ್ನು ಸರಿದೂಗಿಸ ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮ ಕೈಗೊಳ್ಳಿ ಎಂದು ಶ್ರೀಗಳು ಸಲಹೆ ನೀಡಿದರು.ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ. ಸಿ. ಚಂದ್ರಪ್ಪ ಮಾತನಾಡಿ ಕೆಲವು ಹಣಕಾಸಿನ ಮೂಲಗಳಿಂದ ಹಣ ತಲುಪುವುದು ತಡವಾದುದರಿಂದ ಲೆಕ್ಕಪತ್ರ ನೀಡಲು ತಡವಾಯಿತು. ಆದರೆ ಅಂತಿಮವಾಗಿ ಪ್ರತಿಯೊಬ್ಬರಿಗೂ ಬಾಕಿ ಹಣ ಪಾವತಿಸಿ ಈ ದಿನ ಸಮ್ಮೇಳನದಲ್ಲಿನ ಖರ್ಚು ವೆಚ್ಚಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲಾಗಿದೆ ಎಂದರು.ಚಿಕ್ಕಮಗಳೂರು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಗದಿಯಾಗಿದ್ದ ಹಣದಲ್ಲಿ ಒಂದು ಲಕ್ಷ ಹದಿನೈದು ಸಾವಿರವನ್ನು ಸಾಣೆಹಳ್ಳಿಯಲ್ಲಿ ನಡೆದ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸಹಕಾರ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷ ಶಿವಸ್ವಾಮಿ ಒಂದು ಲಕ್ಷ ರು. ನೀಡಿದ್ದರಿಂದ ಹಲವು ಖರ್ಚ ಗಳನ್ನು ಸರಿದೂಗಿಸಲು ಸಾಧ್ಯವಾಗಿದೆ.

ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಪಂಡಿತರಾಧ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಸಮ್ಮೇಳನ ಯಶಸ್ವಿಯಾಗಿದೆ. ಶಾಸಕ ಬಿ.ಜಿ. ಗೋವಿಂದಪ್ಪ ಸೇರಿದಂತೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ತಿಳಿಸಿದರು. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಮಾತನಾಡಿ ರಾಜ್ಯದ ಕಸಾಪ ಇತಿಹಾಸದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು. ಎರಡು ಜಿಲ್ಲೆಗಳನ್ನು ಕ್ರೂಡೀಕರಿಸಿ ಅಂತರ ಜಿಲ್ಲ ಸಾಹಿತ್ಯ ಸಮ್ಮೇಳನ ಆಯೋಜಿಸಲು ತಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ನಮಗೆ ಅವಕಾಶ ಕಲ್ಪಿಸಿಕೊಟ್ಟು ಯಶಸ್ವಿ ಸಮ್ಮೇಳನವಾಗಲು ಸಹಕರಿಸಿದ್ದಾರೆ. ಶ್ರೀಗಳನ್ನು ಒಳ ಗೊಂಡಂತೆ ಸ್ವಾಗತ ಸಮಿತಿ ಅಧ್ಯಕ್ಷರು ಎಲ್ಲ ಪದಾಧಿಕಾರಿಗಳು 2 ಜಿಲ್ಲೆಯ ಕಸಾಪ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.ಚಿತ್ರದುರ್ಗ ಕಸಾಪ ಅಧ್ಯಕ್ಷ ಕೆ. ಎಂ. ಶಿವಸ್ವಾಮಿ ಸಮ್ಮೇಳನದ ಸ್ವಾಗತ ಸಮಿತಿ ಕೋಶಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಸಂಘಟನಾ ಕಾರ್ಯದರ್ಶಿ ಧನಂಜಯ, ಚಿಕ್ಕಮಗಳೂರು ಕಸಾಪ ಕೋಶಾಧ್ಯಕ್ಷ ಬಿ. ಪ್ರಕಾಶ್ ಕಡೂರು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ವಕೀಲರಾದ ರವಿಚಂದ್ರ ಹೊಸದುರ್ಗ ಕಸಾಪ ಮಾಜಿ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ನಗರ ಘಟಕದ ಅಧ್ಯಕ್ಷ ರಾಮ್ಕಿ ರಾಮಕೃಷ್ಣ, ಕಡೂರು ಕಸಾ ಪ ನಗರ ಘಟಕದ ಅಧ್ಯಕ್ಷ ಕೆ. ಜಿ. ವಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.-

1ಕೆಟಿಆರ್.ಕೆ.4ಃ

ಸಾಣೇಹಳ್ಳಿಯಲ್ಲಿ ಜರುಗಿದ ಪ್ರಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಸಭೆಯಲ್ಲಿ ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ಸ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ. ಸಿ. ಚಂದ್ರಪ್ಪ ಮತ್ತಿತರರು ಇದ್ದರು.