ಕನ್ನಡಪ್ರಭ ವಾರ್ತೆ ಹಲಗೂರು
ಇಲ್ಲಿಗೆ ಸಮೀಪದ ಬಾಣಸಮುದ್ರ ಗ್ರಾಮದ ಶ್ರೀಬಸವೇಶ್ವರ ಕ್ರೀಡಾ ಬಳಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸತತ 20ನೇ ಬಾರಿಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಾಡಪ್ರಭು ಕೆಂಪೇಗೌಡ ಟ್ರೋಫಿ 2026ರ ಪಂದ್ಯಾವಳಿಗೆ ಮಳವಳ್ಳಿ ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜ್ ಟಾಸ್ ಹಾಕುವ ಮುಖಾಂತರ ಕ್ರೀಡೆಗೆ ಚಾಲನೆ ನೀಡಿದರು.ಡಿ ಹಲಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಯಾವುದೇ ಗೊಂದಲವಿಲ್ಲದೆ ಕ್ರೀಡೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕು. ಇದರಲ್ಲಿ ವಿಜೇತರಾಗಿ ಪ್ರಥಮ ಬಹುಮಾನ ಪಡೆದ ಕ್ರಿಕೆಟ್ ತಂಡಕ್ಕೆ ನಾನು ವೈಯಕ್ತಿಕವಾಗಿ 50 ಸಾವಿರ ರು. ನೀಡುವುದಾಗಿ ಘೋಷಿಸಿದರು.
ಬಸವೇಶ್ವರ ಕ್ರೀಡಾ ಬಳಗದ ಅಧ್ಯಕ್ಷ ಟಿ.ಪುಟ್ಟಸ್ವಾಮಿ, ಹಲಸಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಬಿ.ಎಸ್.ಮಲ್ಲೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಬಿ.ಎಂ.ರಾಮಚಂದ್ರ ಮತ್ತು ದೊಡ್ಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಂಸಾಗರ ಶಿವಮಾದೇಗೌಡ, ಬಸವೇಶ್ವರ ಕ್ರೀಡಾ ಬಳಗದ ಅಧ್ಯಕ್ಷ ಟಿ.ಪುಟ್ಟಸ್ವಾಮಿ, ಉಪಾಧ್ಯಕ್ಷ ಬಿ. ಟಿ. ಚಂದ್ರಶೇಖರ, ಕಾರ್ಯದರ್ಶಿ ಬಿ.ಸಿ.ಶಿವಣ್ಣ, ಖಜಾಂಜಿ ಮಾಜಿ ನಾಡಗೌಡ ಬಿ.ಸಿ.ದೇವರಾಜು, ಸಂಘಟನೆ ಕಾರ್ಯದರ್ಶಿ ಬಿ.ಎಸ್.ಶ್ರೀನಿವಾಸ್ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಶ್ರೀಕಾಶಿವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆಮಂಡ್ಯ:
ತಾಲೂಕಿನ ಹೊಸಬೂದನೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಕಾಶಿವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಫೆ.15ರ ಭಾನುವಾರ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾನುವಾರ ಸಂಜೆ ಶ್ರೀಕಾಶಿವಿಶ್ವನಾಥ ಸ್ವಾಮಿಗೆ ಮಹಾ ಮಂಗಳಾರತಿ ನಡೆಯಲಿದ್ದು, ರಾತ್ರಿ ಪೂರ್ಣ ಜಾಗರಣೆ ಕಾರ್ಯಕ್ರಮ ನಡೆಯಲಿದೆ. ಹಬ್ಬದ ಮಾರನೇ ದಿನವಾದ ಸೋಮವಾರ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ಮಂಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.