ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ. ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬ ಬೆಳೆಗಾರರು ತಮ್ಮ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಿಯೇ ಬೆಳೆಗಳಿಗೆ ಗೊಬ್ಬರವನ್ನು ನೀಡಬೇಕು ಎಂದರು.

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘವು ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರಿ ಕೃಷಿ ಸಂಗಮ ಸಹಕಾರಿ ಹೆಜ್ಜೆ- ರೈತರ ಕೃಷಿ ಜಮೀನಿನೆಡೆಗೆ ಎನ್ನುವ ವಿನೂತನ ಕಾರ್ಯಕ್ರಮವನ್ನು ನಡೆಸಿ ಅಧಿಕಾರಿಗಳೊಂದಿಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘದ ವ್ಯಾಪ್ತಿಯ ಸಂಪಗೋಡ ಗ್ರಾಮದ ಮತ್ತಿಗಾರ ಹಾಗೂ ಭಂಡಾರಿಕೇರಿ ಗ್ರಾಮದ ಕಬ್ಬಿನಸರ ಊರಿನ ಅಡಿಕೆ ತೋಟಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ತೋಟ ವೀಕ್ಷಣೆ ಮಾಡಿದರು.

ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ. ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬ ಬೆಳೆಗಾರರು ತಮ್ಮ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಿಯೇ ಬೆಳೆಗಳಿಗೆ ಗೊಬ್ಬರವನ್ನು ನೀಡಬೇಕು. ಈಗ ಅಡಕೆ ಎಲೆಚುಕ್ಕಿರೋಗ ಹತೋಟಿಗೆ ಬಂದಿದೆ. ರೈತರು ಸಹ ಎಲೆಚುಕ್ಕಿ ರೋಗ ಬರದಂತೆ ಎಚ್ಚರಿಕೆ ವಹಿಸಿದ್ದಾರೆ. ತೋಟಗಳಿಗೆ ರಾಸಾಯನಿಕ ಗೊಬ್ಬರವನ್ನು ಒಂದೇ ಸಲ ವಿಭಜನೆ ಮಾಡಿ ಹಾಕಬೇಕು. ಇದರಿಂದ ಹೆಚ್ಚು ಪ್ರಯೋಜನ. ತೋಟದಲ್ಲಿ ಪೋಷಕಾಂಶಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ.

ಅಡಕೆ ತೋಟಕ್ಕೆ ರೋಗ ಹರಡದಂತೆ, ಶೀಲೀಂದ್ರದ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿ ತೋಟ ವೀಕ್ಷಣೆ ಮಾಡಿ ರೈತರೊಂದಿಗೆ ಸಂವಾದ ನಡೆಸುತ್ತಿರುವುದು ಇದೊಂದು ವಿನೂತನ ಕಾರ್ಯಕ್ರಮ. ಇದರಿಂದ ರೈತರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಮಾತನಾಡಿ, ಸಂಘ ರೈತರ ಸಮಸ್ಯೆಗಳಿಗೆ ಯಾವತ್ತೂ ಸ್ಪಂದಿಸುತ್ತದೆ ಎಂದರು. ಉಪಾಧ್ಯಕ್ಷ ನರೇಂದ್ರ ಹೆಗಡೆ ಹೊಂಡಗಾಶಿಗೆ, ನಿರ್ದೇಶಕರಾದ ಅನಂತ ಹೆಗಡೆ ಹೊಸಗದ್ದೆ, ನಾಗರಾಜ ಹೆಗಡೆ ಹುಲಿಮನೆ, ಮಂಜುನಾಥ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಗೌಡ ಮಾದಲಮನೆ, ಬಂಗಾರಿ ನಾಯ್ಕ, ಮಹಾಲಕ್ಷ್ಮಿ, ತೋಟಗಾರಿಕಾ ಅಧಿಕಾರಿ ನಿರ್ಮಲ, ರೈತರಾದ ಗಣೇಶ ಹೆಗಡೆ, ರಾಮಚಂದ್ರ ಹೆಗಡೆ, ಮಂಜುನಾಥ ಹೆಗಡೆ, ಮಧುಕೇಶ್ವರ ಹೆಗಡೆ, ವಿನಾಯಕ ಹೆಗಡೆ, ಎಂ.ಎಂ. ಹೆಗಡೆ, ನಾರಾಯಣ ಹೆಗಡೆ ಇತರಿರದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ ಹೆಗಡೆ ಚಳ್ಳೆಹದ್ದ ಸಹಕಾರಿ ಕೃಷಿ ಸಂಗಮದ ಕುರಿತು ರೈತರಿಗೆ ಮಾಹಿತಿ ನೀಡಿ ಕಾರ್ಯಕ್ರಮ ನಿರ್ವಹಿಸಿದರು.