ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮಜೆಡಿಎಸ್ ಪಕ್ಷದ ರಜತ ಸಂಭ್ರಮವನ್ನು ಪಟ್ಟಣದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು.ಪಟ್ಟಣದ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೈಕಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಮಧುಚಂದ್ರ ಅವರು, ಜೆಡಿಎಸ್ ಪಕ್ಷ ಸಹಸ್ರಾರು ನಾಯಕರನ್ನು ಹುಟ್ಟುಹಾಕಿದೆ. ರೈತರ ಪರವಾಗಿ ಅನ್ನದಾತನ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಏಕೈಕ ಪಕ್ಷ ಜೆಡಿಎಸ್. ಪಕ್ಷಕ್ಕೆ ಉತ್ತಮ ಭವಿಷ್ಯವಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.ಮತ್ತೋರ್ವ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು ಮಾತನಾಡಿ, ಹಿರಿಯ ನಾಯಕ ಎಚ್.ಡಿ. ದೇವೇಗೌಡರ ಅವಿರತ ಹೋರಾಟ, ಶ್ರಮದಿಂದ ಜೆಡಿಎಸ್ ಮತ್ತಷ್ಟು ಗಟ್ಟಿಯಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತ ಮತ್ತೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳು ಎಸ್. ಮಧು, ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿ ಪ್ರಸನ್ನ, ಮುಖಂಡರಾದ ಚಂದ್ರಶೇಖರ್, ಮಕ್ತಾರ್ ಪಾಷ, ಪಶುಪತಿ, ಜಗದೀಶ್, ಸರಗೂರು ಶಿವು, ದಡದಹಳ್ಳಿ ನಟರಾಜ್, ರಾಂಪುರ ಪುರುಷೋತ್ತಮ್, ಸತೀಶ, ಹರೀಶ್ ಇದ್ದರು.
----------------eom/mys/dnm/;Resize=(128,128))
;Resize=(128,128))
;Resize=(128,128))
;Resize=(128,128))