ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಹನೀಯರ ಆಶಯದಂತೆ ಕಟ್ಟಿ ಬೆಳೆಸಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಮಹತ್ವದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಸಾಗಲು ಸಮಸ್ತ ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಕಾರಣವಾಗಿದೆ ಎಂದು ಭಾರತೀ ಕಾಲೇಜಿನ ನಿವೃತ್ತ ಪ್ರೊ.ಎಸ್.ಬಿ.ಬೋರೇಗೌಡ ಹೇಳಿದರು.ಪಟ್ಟಣದ ಲೀಲಾವತಿ ಬಡಾವಣೆಯ ಎಚ್.ಕೆ.ಮರಿಯಪ್ಪ ಕಾನ್ವೆಂಟ್‌ನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆಯನ್ನು ಮೈಸೂರು ಎದುವಂಶದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡ ಭಾಷೆ ಬೆಳೆಯಲು, ಕರ್ನಾಟಕದ ಏಕೀಕರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಗತಿಗೊಳ್ಳಲು ಪರಿಷತ್ತನ್ನು ಕಳೆದ ಒಂದು ಶತಮಾನಗಳಿಗೂ ಹೆಚ್ಚು ಅವಧಿಯಲ್ಲಿ ಶ್ರೇಷ್ಠ ಮಹನೀಯರ ಅಧ್ಯಕ್ಷತೆಯಲ್ಲಿ ನಡೆಸಿದ ಸಮ್ಮೇಳನಗಳು ಚಾರಿತ್ರಿಕ ಮಹತ್ವ ಹೊಂದಿದೆ ಎಂದರು.ಕಸಾಪ ಜಿಲ್ಲಾ ಘಟಕ, ತಾಲೂಕು ಘಟಕ ಹಾಗೂ ಹೋಬಳಿ ಘಟಕಗಳು ಅಸ್ತಿತ್ವದಲ್ಲಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕಾರ್ಯಕ್ರಮ ನಡೆಸುವ ಮೂಲಕ ಚಟುವಟಿಕೆ ಕೇಂದ್ರಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚುಂಚಶ್ರೀ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಕಸಾಪ ಮಾಜಿ ಅಧ್ಯಕ್ಷ ಸಿ.ಅಪೂರ್ವ ಚಂದ್ರ, ಉಪಾಧ್ಯಕ್ಷ ಕೆ.ಪಿ.ಶ್ರೀಧರ, ಕಾರ್ಯದರ್ಶಿ ಆನಂದ, ಈರಯ್ಯ ಚಂದ್ರಶೇಖರ್, ಬಿ.ಟಿ.ನಾಗರಾಜು, ಆಸಿಫ್ ಪಾಷಾ, ಅಂಬರಹಳ್ಳಿ ಸ್ವಾಮಿ, ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.ಮೇ ೧೦ರಂದು ಜಿಲ್ಲಾಮಟ್ಟದ ಮಕ್ಕಳ ಚಿತ್ರ ಬಿಡಿಸುವ ಸ್ಪರ್ಧೆ
ಮಂಡ್ಯ: ಭಾರತೀಯ ಬೌದ್ಧ ಮಹಾ ಸಭಾದಿಂದ ಬುದ್ಧ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ಮಕ್ಕಳ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಮೇ ೧೦ರಂದು ನಗರದ ಬಾಲ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅನಿಲ್‌ಕುಮಾರ್ ತಿಳಿಸಿದರು.ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸ್ಪರ್ಧೆ ನಡೆಯಲಿದೆ. ೧ನೇ ತರಗತಿಯಿಂದ ೪, ೫ ರಿಂದ ೭ ಹಾಗೂ ೮ನೇ ತರಗತಿಯಿಂದ ೧೦ರವರೆಗೆ ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಕ್ಕಳು ತರಗತಿ ಮತ್ತು ಶಾಲೆಯ ಗುರುತಿನ ಚೀಟಿ ಜೊತೆಗೆ ಹಾಜರಾಗಬೇಕು. ಚಿತ್ರಬಿಡಿಸುವ ಡ್ರಾಯಿಂಗ್ ಹಾಳೆಯನ್ನು ನೀಡಲಾಗುವುದು. ಇತರೆ ಪರಿಕರಗಳನ್ನುಉಕ್ಕಳೇ ತರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೋಷ್ಠಿಯಲ್ಲಿ ಎಂ.ಸಿ.ಶಿವರಾಜ್, ಎಸ್.ಪಿ.ನಾರಾಯಣಸ್ವಾಮಿ ಇದ್ದರು.